ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ವಿರಾಟ್ ಕೊಹ್ಲಿ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮ ನಾಮನಿರ್ದೇಶನ

ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರನ್ನು ಅಕ್ಟೋಬರ್ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. 
ಐಸಿಸಿ ತಿಂಗಳ ಶ್ರೇಷ್ಠ ಆಟಗಾರರ ಪ್ರಶಸ್ತಿ ಪಟ್ಟಿ
ಐಸಿಸಿ ತಿಂಗಳ ಶ್ರೇಷ್ಠ ಆಟಗಾರರ ಪ್ರಶಸ್ತಿ ಪಟ್ಟಿ

ನವದೆಹಲಿ: ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರನ್ನು ಅಕ್ಟೋಬರ್ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. 

ಅಕ್ಟೋಬರ್‌ನಲ್ಲಿ ಪ್ರಶಸ್ತಿ ಘೋಷಣೆಯಾದ ನಂತರ ಇದು ಕೊಹ್ಲಿಯ ಮೊದಲ ನಾಮನಿರ್ದೇಶನವಾಗಿದೆ. ಸತತ ಫಾರ್ಮ್ ವೈಫಲ್ಯದಿಂದ ಬಳಲುತ್ತಿದ್ದ ಕೊಹ್ಲಿ ಮತ್ತೆ ಫಾರ್ಮ್‌ಗೆ ಮರಳಿದ್ದು ಮಾತ್ರವಲ್ಲದೇ, ಹಾಲಿ 2022 ರ T20 ವಿಶ್ವಕಪ್‌ನಲ್ಲಿ ಅರ್ಧಶತಕಗಳನ್ನು ಸಿಡಿಸುವುದನ್ನು ಮುಂದುವರೆಸಿದ್ದಾರೆ. ಅವರು ಕ್ರಮವಾಗಿ ಪಾಕಿಸ್ತಾನ, ನೆದರ್ಲ್ಯಾಂಡ್ಸ್ ಮತ್ತು ಬಾಂಗ್ಲಾದೇಶದ ವಿರುದ್ಧ 3 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. 

ಅಕ್ಟೋಬರ್ ತಿಂಗಳಲ್ಲಿ, ಕೊಹ್ಲಿ 205 ರನ್ ಗಳಿಸಿದ್ದು, ತಿಂಗಳಲ್ಲಿ ಅತೀ ಹೆಚ್ಚು ರನ್ ಗಳಿಸಿದ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಮಾತ್ರವಲ್ಲದೇ ಇದು ಅವರ ಅತ್ಯುತ್ತಮ ಪ್ರದರ್ಶನ ಕೂಡ ಆಗಿದೆ. ಈ ತಿಂಗಳಿನಲ್ಲಿ ಅವರ ಅತ್ಯುತ್ತಮ ಪ್ರದರ್ಶನ ಎಂದರೆ ಪಾಕಿಸ್ತಾನ ವಿರುದ್ಧದ ಅಜೇಯ 82 ರನ್ ಗಳಾಗಿದೆ. ಇದು ಮೆನ್ ಇನ್ ಬ್ಲೂ ಪಂದ್ಯದ ಕೊನೆಯ ಎಸೆತದಲ್ಲಿ ಪಾಕಿಸ್ತಾನದ 160 ರನ್‌ಗಳನ್ನು ಬೆನ್ನಟ್ಟಲು ಸಹಾಯ ಮಾಡಿತು. ಈ ಪಂದ್ಯದಲ್ಲಿ ಕೊಹ್ಲಿ 53 ಎಸೆತಗಳಲ್ಲಿ 82 ರನ್‌ಗಳ ಅವಿಸ್ಮರಣೀಯ ಸ್ಕೋರ್‌ ದಾಖಲಿಸಿದ್ದರು.

Top performers from the ongoing #T20WorldCup are the nominees for the ICC Men's Player of the Month for October 2022 #ICCPOTM

ಕೊಹ್ಲಿಯಂತೆ, ಮಿಲ್ಲರ್ ಕೂಡ ಮೊದಲ ಬಾರಿಗೆ ಪುರುಷರ ಶಾರ್ಟ್‌ಲಿಸ್ಟ್‌ನಲ್ಲಿ ಹೆಸರಿಸಲ್ಪಟ್ಟಿದ್ದಾರೆ ಮತ್ತು ಅವರು ಭಾರತದ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ತಿಂಗಳನ್ನು ಪ್ರಾರಂಭಿಸಿದ್ದರು. ಮಿಲ್ಲರ್ ಮೂರು ODIಗಳಲ್ಲಿ 117 ರನ್ ಮತ್ತು ಎರಡು T20I ಗಳಲ್ಲಿ 125 ರನ್ ಗಳಿಸಿದ್ದಾರೆ. ಇದರಲ್ಲಿ ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಕೇವಲ 79 ಎಸೆತಗಳಲ್ಲಿ 106 ರನ್‌ಗಳ ಶ್ರೇಷ್ಠ ಪ್ರದರ್ಶನ ನೀಡಿದ್ದರು. ಇದೇ ಬಿರುಸಿನ ಫಾರ್ಮ್ ಅನ್ನು T20 ವಿಶ್ವಕಪ್‌ನಲ್ಲಿಯೂ ಅವರು ಮುಂದುವರೆಸಿದ್ದಾರೆ. ಪರ್ತ್ ಟ್ರ್ಯಾಕ್‌ನಲ್ಲಿ ಯಶಸ್ವಿ ರನ್ ಚೇಸ್‌ನಲ್ಲಿ ಅವರು ನೆರವಾಗಿದ್ದರು.

ಇನ್ನು ಜಿಂಬಾಬ್ವೆಯ ಸಿಕಂದರ್ ರಾಝಾ ಅವರು 2022 ರಲ್ಲಿ ಪ್ರದರ್ಶನಕ್ಕಾಗಿ ಪ್ರಶಸ್ತಿಗೆ ನಾಮನಿರ್ದೇಶನವಾಗಿದ್ದು, ಮೂರು ತಿಂಗಳಲ್ಲಿ ಎರಡನೇ ಬಾರಿಗೆ ಅವರು ನಾಮನಿರ್ದೇಶನಗೊಂಡಿದ್ದಾರೆ. ಪ್ರತಿಭಾವಂತ ಆಲ್‌ರೌಂಡರ್ ಆಗಸ್ಟ್‌ನಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು ಮತ್ತು T20 ವಿಶ್ವಕಪ್‌ನ ಸೂಪರ್ 12 ಹಂತಗಳ ಮೂಲಕ ಜಿಂಬಾಬ್ವೆಯ ಅರ್ಹತೆಯನ್ನು ಸೀಲಿಂಗ್ ಮಾಡುವಲ್ಲಿ ರಾಝಾ ಪ್ರಮುಖ ಪಾತ್ರ ನಿರ್ವಹಿಸಿದ್ದರು. 

ಇನ್ನು ಮಹಿಳೆಯ ವಿಭಾಗದಲ್ಲಿ ಭಾರತದ ದೀಪ್ತಿ ಶರ್ಮಾ ಮತ್ತು ಜೆಮಿಮಾ ರಾಡ್ರಿಗಸ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದು, ರಾಡ್ರಿಗಸ್ ಈ ಹಿಂದೆ ಆಗಸ್ಟ್‌ನಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅವರ ಅದ್ಭುತ ಪ್ರದರ್ಶನ ತೋರಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ಇದೀಗ ಮತ್ತೊಮ್ಮೆ ಅವರು ಮಹಿಳಾ ಏಷ್ಯಾ ಕಪ್ ಟೂರ್ನಿಯಲ್ಲಿ ಯಶಸ್ವಿ ಪ್ರದರ್ಶನದಿಂದಾಗಿ ಪ್ರಶಸ್ತಿಗೆ ನಾಮನಿರ್ದೇಶನವಾಗಿದ್ದಾರೆ. ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ವಿಜಯೋತ್ಸವ ಆಚರಿಸಿದಾಗ, ರೋಡ್ರಿಗಸ್ ತನ್ನ ಎಂಟು ಪಂದ್ಯಗಳಿಂದ 54.25 ರ ಸರಾಸರಿಯಲ್ಲಿ 217 ರನ್ ಗಳಿಸುವ ಮೂಲಕ ಪಂದ್ಯಾವಳಿಯಲ್ಲಿ ಪ್ರಮುಖ ರನ್-ಸ್ಕೋರರ್ ಆಗಿದ್ದರು. 

ಭಾರತದ ಮತ್ತೊಬ್ಬ ಆಟಗಾರ್ತಿ ದೀಪ್ತಿ ಶರ್ಮಾ ಅವರು ಮಹಿಳಾ ಏಷ್ಯಾ ಕಪ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. 7.69 ರ ಗಮನಾರ್ಹ ಸರಾಸರಿಯಲ್ಲಿ ಅವರು 13 ವಿಕೆಟ್‌ಗಳನ್ನು ಪಡೆದಿದ್ದರು. ಇದರಲ್ಲಿ ಪಾಕಿಸ್ತಾನದ ವಿರುದ್ಧ ಮೂರು ಮತ್ತು ಥೈಲ್ಯಾಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಮೂರು ವಿಕೆಟ್ ಪಡೆದಿದ್ದು ಪ್ರಮುಖವಾಗಿವೆ.

ಉಳಿದಂತೆ ಪಾಕಿಸ್ತಾನದ ಮಹಿಳಾ ಕ್ರಿಕೆಟ್ ಆಟಗಾರ್ತಿ ನಿಡದಾರ್ ಕೂಡ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. 

ಪ್ರಶಸ್ತಿಗೆ ಆಟಗಾರರ ಆಯ್ಕೆಗೆ ಭಾರತದಿಂದ ಮಾಜಿ ಕ್ರಿಕೆಟಿಗರಾದ ಲಾವಣ್ಯ ಲಕ್ಷ್ಮಿ ನಾರಾಯಣ್ ಮತ್ತು ಇರ್ಫಾನ್ ಪಠಾಣ್ ಸಮಿತಿಯಲ್ಲಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com