ಟಿ20 ವಿಶ್ವಕಪ್: ಸೆಮಿಫೈನಲ್‌ಗೆ ಅಂಪೈರ್, ಅಧಿಕಾರಿಗಳ ಪ್ರಕಟಿಸಿದ ICC

ಹಾಲಿ ವಿಶ್ವಕಪ್ ಕ್ರಿಕೆಟ್ ಟೂರ್ನಿ ನಿರ್ಣಾಯಕ ಹಂತ ತಲುಪಿದ್ದು, ಸೆಮಿಫೈನಲ್ ಗೆ ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ ಅಂಪೈರ್, ಅಧಿಕಾರಿಗಳ ನೇಮಕ ಮಾಜಿ ಪ್ರಕಟಣೆ ಹೊರಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೆಲ್ಬೋರ್ನ್: ಹಾಲಿ ವಿಶ್ವಕಪ್ ಕ್ರಿಕೆಟ್ ಟೂರ್ನಿ ನಿರ್ಣಾಯಕ ಹಂತ ತಲುಪಿದ್ದು, ಸೆಮಿಫೈನಲ್ ಗೆ ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ ಅಂಪೈರ್, ಅಧಿಕಾರಿಗಳ ನೇಮಕ ಮಾಜಿ ಪ್ರಕಟಣೆ ಹೊರಡಿಸಿದೆ.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ICC ಪುರುಷರ T20 ವಿಶ್ವಕಪ್ 2022 ರ ಸೆಮಿಫೈನಲ್‌ ಪಂದ್ಯಗಳಿಗೆ ಪಂದ್ಯದ ಅಧಿಕೃತ ನೇಮಕಾತಿಗಳನ್ನು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸೋಮವಾರ ಪ್ರಕಟಿಸಿದೆ. 

ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವಿನ ಮೊದಲ ಸೆಮಿಫೈನಲ್ ಬುಧವಾರ ಸಿಡ್ನಿಯ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನವೆಂಬರ್ 9 ರಂದು ನಡೆಯಲಿದ್ದು, ಭಾರತ ಮತ್ತು ಇಂಗ್ಲೆಂಡ್ ನಡುವಿನ 2 ನೇ ಸೆಮಿಫೈನಲ್ ಗುರುವಾರ, 10 ನವೆಂಬರ್ ಅಡಿಲೇಡ್‌ನ ಅಡಿಲೇಡ್ ಓವಲ್‌ನಲ್ಲಿ ನಡೆಯಲಿದೆ. ಈ ಎರಡೂ ಪಂದ್ಯಗಳಿಗೆ ಐಸಿಸಿ  ಅಂಪೈರ್, ಅಧಿಕಾರಿಗಳನ್ನು ನೇಮಕ ಮಾಡಿದೆ.

ಐಸಿಸಿಯ ಪತ್ರಿಕಾ ಪ್ರಕಟಣೆಯ ಪ್ರಕಾರ ಪಂದ್ಯದ ಅಧಿಕೃತ ನೇಮಕಾತಿಗಳು ಈ ಕೆಳಗಿನಂತಿವೆ.
ನವೆಂಬರ್ 9 - ನ್ಯೂಜಿಲೆಂಡ್ vs ಪಾಕಿಸ್ತಾನ, ಸಿಡ್ನಿ ಕ್ರಿಕೆಟ್ ಮೈದಾನ
ಆನ್-ಫೀಲ್ಡ್ ಅಂಪೈರ್ ಗಳು- ಮರೈಸ್ ಎರಾಸ್ಮಸ್ ಮತ್ತು ರಿಚರ್ಡ್ ಇಲ್ಲಿಂಗ್‌ವರ್ತ್
ರಿಚರ್ಡ್ ಕೆಟಲ್‌ಬರೋ (ಮೂರನೇ ಅಂಪೈರ್), ಮೈಕೆಲ್ ಗಾಫ್ (ನಾಲ್ಕನೇ ಅಂಪೈರ್) ಮತ್ತು ಕ್ರಿಸ್ ಬ್ರಾಡ್ (ಪಂದ್ಯ ರೆಫರಿ).

10 ನವೆಂಬರ್ - ಭಾರತ vs ಇಂಗ್ಲೆಂಡ್ , ಅಡಿಲೇಡ್ ಓವಲ್
ಆನ್-ಫೀಲ್ಡ್ ಅಂಪೈರ್ ಗಳು- ಕುಮಾರ್ ಧರ್ಮಸೇನ ಮತ್ತು ಪಾಲ್ ರೀಫೆಲ್
ಕ್ರಿಸ್ ಗಫಾನಿ (ಮೂರನೇ ಅಂಪೈರ್), ರಾಡ್ ಟಕರ್ (ನಾಲ್ಕನೇ ಅಂಪೈರ್), ಮತ್ತು ಡೇವಿಡ್ ಬೂನ್ (ಪಂದ್ಯ ರೆಫರಿ).

ಎರಡೂ ಸೆಮಿ-ಫೈನಲ್‌ಗಳ ಫಲಿತಾಂಶ ತಿಳಿದ ನಂತರ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನವೆಂಬರ್ 13 ರಂದು ನಡೆಯಲಿರುವ ಫೈನಲ್‌ ಪಂದ್ಯಕ್ಕೆ ನೇಮಕಾತಿಗಳನ್ನು ನೇಮಕ ಮಾಡಲಾಗುತ್ತದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com