ಭಾರತ-ಪಾಕ್ ಫೈನಲ್ ಪಂದ್ಯ ನೋಡಲು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ: ಶೇನ್ ವ್ಯಾಟ್ಸನ್

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ಫೈನಲ್ ನಲ್ಲಿ ಕ್ರಿಕೆಟ್‌ನ ಎರಡು ದೊಡ್ಡ ಪ್ರತಿಸ್ಪರ್ಧಿಗಳಾದ ಭಾರತ-ಪಾಕಿಸ್ತಾನ ಕಾದಾಟ ನೋಡಲು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ ಎಂದು ಆಸ್ಟ್ರೇಲಿಯಾ ಮಾಜಿ ಆಲ್‌ರೌಂಡರ್ ಶೇನ್ ವ್ಯಾಟ್ಸನ್‌ ಹೇಳಿದ್ದಾರೆ.
ಶೇನ್ ವ್ಯಾಟ್ಸನ್
ಶೇನ್ ವ್ಯಾಟ್ಸನ್

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ಫೈನಲ್ ನಲ್ಲಿ ಕ್ರಿಕೆಟ್‌ನ ಎರಡು ದೊಡ್ಡ ಪ್ರತಿಸ್ಪರ್ಧಿಗಳಾದ ಭಾರತ-ಪಾಕಿಸ್ತಾನ ಕಾದಾಟ ನೋಡಲು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ ಎಂದು ಆಸ್ಟ್ರೇಲಿಯಾ ಮಾಜಿ ಆಲ್‌ರೌಂಡರ್ ಶೇನ್ ವ್ಯಾಟ್ಸನ್‌ ಹೇಳಿದ್ದಾರೆ.

ಐಕಾನಿಕ್ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್(MCG) ನಲ್ಲಿ ನಡೆಯುತ್ತಿರುವ ಪಂದ್ಯಾವಳಿಯ ಗ್ರೂಪ್ ಹಂತದ ಪಂದ್ಯದಲ್ಲಿ ಏಷ್ಯಾದ ದೈತ್ಯ ತಂಡಗಳು ಈಗಾಗಲೇ ಒಮ್ಮೆ ಮುಖಾಮುಖಿಯಾಗಿದ್ದು, ವಿರಾಟ್ ಕೊಹ್ಲಿ ಅವರು ಅತ್ಯುತ್ತಮ ಟಿ20 ಪ್ರದರ್ಶನ ನೀಡುವ ಮೂಲಕ ಭಾರತವನ್ನು ಗೆಲ್ಲಿಸಿದ್ದಾರೆ.

ಇದೀಗ ಉಭಯ ತಂಡಗಳು ಸೆಮಿಫೈನಲ್ ಹಂತವನ್ನು ತಲುಪಿದ್ದು, ಅಲ್ಲಿ ಗೆದ್ದರೆ, ಮತ್ತೆ ಭಾರತ-ಪಾಕಿಸ್ತಾನ ತಂಡಗಳ ನಡುವೆ ಟಿ-20 ವಿಶ್ವಕಪ್ ಗಾಗಿ ಹಣಾಹಣಿಯನ್ನು ನಿರೀಕ್ಷಿಸಲಾಗಿದೆ.

"ಪ್ರತಿಯೊಬ್ಬರು ಪಾಕಿಸ್ತಾನ ಮತ್ತು ಭಾರತ ತಂಡಗಳನ್ನು ಫೈನಲ್‌ನಲ್ಲಿ ನೋಡಲು ಇಷ್ಟಪಡುತ್ತಾರೆ," ಎಂದು ಶೇನ್ ವ್ಯಾಟ್ಸನ್ ಹೇಳಿರುವುದಾಗಿ ಈವೆಂಟ್‌ನ ಅಧಿಕೃತ ವೆಬ್‌ಸೈಟ್‌ ವರದಿ ಮಾಡಿದೆ.

"ನಾನು ದುರದೃಷ್ಟವಶಾತ್ ಎಂಸಿಜಿಯಲ್ಲಿ ನಡೆದ ಆ ಮೊದಲ(ಸೂಪರ್ 12) ಪಂದ್ಯವನ್ನು ನೋಡುವ ಅವಕಾಶ ಕಳೆದುಕೊಂಡೆ. ಈಗ ತಪ್ಪಿಸಿಕೊಂಡ ಭಾರತ-ಪಾಕ್ ಪಂದ್ಯವನ್ನು ನೋಡಲು ಇಷ್ಟಪಡುತ್ತೇನೆ  ಎಂದು ಶೇನ್ ವ್ಯಾಟ್ಸನ್‌ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com