ಖಮ್ಮಂ: ಜಾಗತಿಕ ಕ್ರಿಕೆಟ್ ನಲ್ಲಿ ಭಾರತ ಇರ್ಫಾನ್ ಪಠಾಣ್ ಮತ್ತು ಯೂಸುಫ್ ಪಠಾಣ್ ಜೋಡಿ ಭಾರತದ ಪರ ಕಮಾಲ್ ಮಾಡಿತ್ತು.. ಇದೀಗ ಅಂತಹುದೇ ಸಾಧನೆಯನ್ನು ನೆನಪಿಸುವ ಯುವ ಜೋಡಿಯೊಂದು ಕ್ರಿಕೆಟ್ ರಂಗದಲ್ಲಿ ಸುದ್ದಿ ಮಾಡುತ್ತಿದೆ.
ಹೌದು.. ಇಬ್ಬರು ಯುವ ಕ್ರಿಕೆಟ್ ಆಟಗಾರ-ಸಹೋದರರು ಟೀಂ ಇಂಡಿಯಾಗೆ ಆಯ್ಕೆಯಾಗುವ ದೊಡ್ಡ ಕನಸು ಕಾಣುತ್ತಿದ್ದಾರೆ. ಹನ್ನೆರಡು ವರ್ಷದ ಸಿದ್ದಾಂತಪು ಗುರು ವಿಧ್ವಾನ್ ಮತ್ತು 10 ವರ್ಷದ ಹೃಷಿಕೇಶ್ ಪ್ರಧಾನ್ ಕ್ರಿಕೆಟ್ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದು, ಇಬ್ಬರೂ ಸಹೋಜರರು ಕ್ರಿಕೆಟ್ ನ ನೈಸರ್ಗಿಕ ಪ್ರತಿಭೆಯನ್ನು ಹೊಂದಿದ್ದಾರೆ. 16 ವರ್ಷದೊಳಗಿನವರ ವಿಭಾಗದಲ್ಲಿ ಈ ಇಬ್ಬರು ಆಟಗಾರರು ಈಗಾಗಲೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಭಾರತದ ಪರ ಆಡುವುದು ಅವರ ಮಹತ್ವಾಕಾಂಕ್ಷೆಯಾಗಿದೆ.
ಇವರ ತಂದೆ ಸಿದ್ದಾಂತಪು ನಾಗರಾಜು ಸಾರಪಾಕ ಐಟಿಸಿ ಪೇಪರ್‌ಬೋರ್ಡ್‌ನಲ್ಲಿ ಫಿಟ್‌ನೆಸ್ ತರಬೇತುದಾರರಾಗಿದ್ದು, ಅವರೇ ಜಿಲ್ಲಾ ಮಟ್ಟದಲ್ಲಿ ಕ್ರಿಕೆಟ್ ಆಟಗಾರರಾಗಿದ್ದರು. ಅವರು ರಾಜ್ಯಕ್ಕಾಗಿ ಆಡಲು ಬಯಸಿದ್ದರು. ಆದರೆ ಹಣಕಾಸಿನ ಸಮಸ್ಯೆಯಿಂದ ಅದು ಸಾಧ್ಯವಾಗಲಿಲ್ಲ. ಈಗ, ನಾಗರಾಜು ಅವರ ಮಕ್ಕಳು ತಮ್ಮ ತಂದೆಯ ಕನಸನ್ನು ನನಸಾಗಿಸುವತ್ತ ಸಾಗಿದ್ದಾರೆ. ತಂದೆ ಅವರು ತಮ್ಮ ಇಬ್ಬರು ಮಕ್ಕಳನ್ನು ಕ್ರಿಕೆಟ್‌ಗೆ ಬರಲು ಪ್ರೇರೇಪಿಸುತ್ತಿದ್ದಾರೆ. ಆರಂಭದಲ್ಲಿ, ಅವರು ಅವರಿಗೆ ತರಬೇತುದಾರರ ಸಹಾಯವನ್ನು ಕೋರಿದರು. ಭದ್ರಾಚಲಂನ ತೇಜ ಕ್ರಿಕೆಟ್ ಅಕಾಡೆಮಿಯ ಸ್ಥಳೀಯ ಕೋಚ್ ತೇಜ ಮತ್ತು ಬಾಬಿ ಈ ಮಕ್ಕಳಿಗೆ ತರಬೇತಿ ನೀಡಿದರು.
ತಮ್ಮ ಮಕ್ಕಳ ಅದ್ಭುತ ಕ್ರಿಕೆಟ್ ಕೌಶಲ್ಯ ನೋಡಿದ ಬಳಿಕ ತಂದೆ ನಾಗರಾಜು ಮಕ್ಕಳನ್ನು 2018 ರಲ್ಲಿ ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿಗೆ ಕಳುಹಿಸಿದರು. ಅವರು ಅಲ್ಲಿ ಒಂದು ವರ್ಷ ತರಬೇತಿ ಪಡೆದರು ಮತ್ತು ನಂತರ ಹೈದರಾಬಾದ್‌ನ ಸೇಂಟ್ ಜಾನ್ಸ್ ಕ್ರಿಕೆಟ್ ಅಕಾಡೆಮಿ ಮತ್ತು ವಿಜೆ ಕ್ರಿಕೆಟ್ ಅಕಾಡೆಮಿಗೆ ಸ್ಥಳಾಂತರಗೊಂಡರು. ವಿಜೆ ಕ್ರಿಕೆಟ್ ಅಕಾಡೆಮಿಯಿಂದ ಗುರು ಅತ್ಯುತ್ತಮ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್‌ಗಾಗಿ ಪ್ರಶಸ್ತಿಯನ್ನು ಪಡೆದರು.
ಹೃಷಿಕೇಶ್ ಕೂಡ ಭರವಸೆಯ ಆಟಗಾರರಾಗಿದ್ದು, ಇಬ್ಬರೂ ಸಹೋದರರು 2019 ರಲ್ಲಿ ಭದ್ರಾಚಲಂನಲ್ಲಿ ನಡೆದ ನೆಹರು ಕಪ್ ಪಂದ್ಯಾವಳಿಯಲ್ಲಿ ಆಡಿದರು, ಅಲ್ಲಿ ಗುರು ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು ಮತ್ತು ಹೃಷಿಕೇಶ್ ಅವರು ಅತ್ಯುತ್ತಮ ಬೌಲರ್ ಪ್ರಶಸ್ತಿಯನ್ನು ಪಡೆದರು. 2020 ರಲ್ಲಿ, ಇಬ್ಬರೂ ವಾರಂಗಲ್‌ನಲ್ಲಿ ನಡೆದ ತೆಲಂಗಾಣ ಕ್ರಿಕೆಟ್ ಅಸೋಸಿಯೇಷನ್ ಪಂದ್ಯಾವಳಿಯಲ್ಲಿ ಆಡಿದರು ಮತ್ತು ಅತ್ಯುತ್ತಮ ಬ್ಯಾಟ್ಸ್‌ಮನ್, ಕೀಪರ್ ಮತ್ತು ಉತ್ತಮ ಬೌಲರ್ ಪ್ರಶಸ್ತಿಗಳನ್ನು ಪಡೆದರು. ಆಗಸ್ಟ್ 2021 ರಲ್ಲಿ, ಟೀಗಾಲ ಕೃಷ್ಣಾ ರೆಡ್ಡಿ ಎಜುಕೇಷನಲ್ ಸೊಸೈಟಿಯು ಹೈದರಾಬಾದ್‌ನಲ್ಲಿ ನಡೆಸಿದ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಇಬ್ಬರೂ ಉತ್ತಮ ಪ್ರದರ್ಶನ ನೀಡಿದರು. ಪ್ರಧಾನ್ ಅವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
ಪಂದ್ಯಾವಳಿಯಲ್ಲಿ ಹೃಷಿಕೇಶ್ ಅತ್ಯುತ್ತಮ ಬೌಲರ್ ಪ್ರಶಸ್ತಿ ಪಡೆದರು. ಅವರು 2022 ರಲ್ಲಿ 16 ವರ್ಷದೊಳಗಿನವರ ವಿಭಾಗದಲ್ಲಿ ನಡೆದ ರಾಜ್ಯ ಮಟ್ಟದ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದರು ಮತ್ತು 84 ಎಸೆತಗಳಲ್ಲಿ 98 ರನ್ ಗಳಿಸಿದರು ಮತ್ತು ಹೃಷಿಕೇಶ್ ಐದು ಓವರ್‌ಗಳಲ್ಲಿ ಎರಡು ಮೇಡನ್‌ಗಳಲ್ಲಿ ನಾಲ್ಕು ವಿಕೆಟ್ ಪಡೆದರು. ಪ್ರಸ್ತುತ ಅವರು ಉಪ್ಪಲ್ ಕ್ರೀಡಾಂಗಣದಲ್ಲಿ ಎಚ್‌ಸಿಎ ರಾಜ್ಯ ಮಟ್ಟದ ಟೂರ್ನಿಯಲ್ಲಿ ಆಡುತ್ತಿದ್ದಾರೆ.
ಮನಸ್ಸಿಗೆ ಮುದ ನೀಡುವ ಸಹೋದರರ ಅಂಕಿ-ಸಂಖ್ಯೆಗಳು
ಗುರು ಅವರು ಈಗಾಗಲೇ 2008 ರನ್‌ಗಳನ್ನು ಮಾಡಿದ್ದಾರೆ ಮತ್ತು ಅವುಗಳಲ್ಲಿ ನಾಲ್ಕು ಶತಕಗಳು, 11 ಅರ್ಧ ಶತಕಗಳು ಮತ್ತು 30 ಪ್ಲಸ್ ರನ್‌ಗಳು 16 ಬಾರಿ ಸೇರಿವೆ. ಹೃಷಿಕೇಶ್ 100 ಪಂದ್ಯಗಳನ್ನು ಆಡಿದ್ದು, 103 ವಿಕೆಟ್ ಪಡೆದಿದ್ದಾರೆ. ಇಬ್ಬರು ಮಕ್ಕಳು ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಅವರನ್ನು ಕಾಡುತ್ತಿರುವುದು ಆರ್ಥಿಕ ಸಮಸ್ಯೆ. ನಾಗರಾಜು ಕೆಳ ಮಧ್ಯಮ ವರ್ಗದವರು. ಅವರು ಕಷ್ಟಪಟ್ಟು ದುಡಿದ ಉಳಿತಾಯವನ್ನು ತಮ್ಮ ಪುತ್ರರ ಕ್ರಿಕೆಟ್ ತರಬೇತಿಗೆ ಖರ್ಚು ಮಾಡುತ್ತಿದ್ದಾರೆ. ಆದರೆ ಅದು ಸಾಕಾಗುವುದಿಲ್ಲ. ಕೆಲವು ದಾನಿಗಳು ಬಂದು ತಮ್ಮ ತರಬೇತಿಯನ್ನು ಪ್ರಾಯೋಜಿಸಲು ಅವರು ಎದುರು ನೋಡುತ್ತಿದ್ದಾರೆ.
ಇಬ್ಬರು ಮಕ್ಕಳ ತರಬೇತುದಾರರಾದ ಆನಂದ್ ಪಾಲ್, ಕೇಶವುಲು ಮತ್ತು ಅನಿಲ್ ಅವರ ಪ್ರಕಾರ, “ಗುರು ವಿಧ್ವನ್ ಪ್ರತಿಭಾನ್ವಿತರು. ಇಬ್ಬರು ಮಕ್ಕಳಲ್ಲಿ ಅಸಾಧಾರಣ ಪ್ರತಿಭೆ ಇದೆ. ಅವರು ಮುಂದೊಂದು ದಿನ ದೇಶವನ್ನು ಪ್ರತಿನಿಧಿಸುವುದು ಖಚಿತ ಎಂದು ತರಬೇತುದಾರ ತೇಜಾ ಬಾಬಿ ಲಲ್ಲು ಹೇಳುತ್ತಾರೆ.
ಪ್ರಸ್ತುತ ಐಟಿಸಿ ಪೇಪರ್‌ಬೋರ್ಡ್‌ನ ಇನ್ನೊಬ್ಬ ಉದ್ಯೋಗಿ ಸರಪಾಕ ಎಸ್‌ಆರ್‌ವಿ ರಮಣ ಅವರು ತಮ್ಮ ಮಕ್ಕಳನ್ನು ಸ್ವಲ್ಪ ಮಟ್ಟಿಗೆ ಬೆಂಬಲಿಸುತ್ತಿದ್ದಾರೆ. ಆದರೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ತರಬೇತಿ ನೀಡಲು ಇದು ಸಾಕಾಗುವುದಿಲ್ಲ ಎಂದು ನಾಗರಾಜು ಹೇಳುತ್ತಾರೆ. "ನಾನು ಹೆಚ್ಚಿನ ತರಬೇತಿಗಾಗಿ ಪ್ರಾಯೋಜಕರನ್ನು ಹುಡುಕುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ.
Advertisement