ಮಕ್ಸೂಮಾ ಬ್ಯಾಟಿಂಗ್
ಮಕ್ಸೂಮಾ ಬ್ಯಾಟಿಂಗ್

ಲಡಾಖ್ ನಲ್ಲಿ ಲೇಡಿ ಕೊಹ್ಲಿ; ಬಾಲಕಿಯ ಬ್ಯಾಟಿಂಗ್ ಕೌಶಲ್ಯಕ್ಕೆ ನೆಟ್ಟಿಗರು ಫಿದಾ!!

ಭಾರತದಲ್ಲಿ ಕ್ರಿಕೆಟ್ ಪ್ರತಿಯೊಬ್ಬರ ನೆಚ್ಚಿನ ಕ್ರೀಡೆಗಳಲ್ಲಿ ಒಂದು.. ಒಂದು ಕಾಲದಲ್ಲಿ ಹುಡುಗರಿಗೆ ಮಾತ್ರ ಸೀಮಿತವಾಗಿದ್ದ ಕ್ರಿಕೆಟ್ ಇದೀಗ ಬಾಲಕಿಯರ ಹಾಟ್ ಫೇವರಿಟ್ ಆಗಿದೆ. ಇದಕ್ಕೆ ಇಂಬು ನೀಡುವಂತೆ ಭಾರತದಲ್ಲಿ ಮಹಿಳಾ ಕ್ರಿಕೆಟಿಗರ ಸಂಖ್ಯೆ ಏನೂ ಕಡಿಮೆ ಇಲ್ಲ.. ಅಂತೆಯೇ ಉದಯೋನ್ಮುಖ ಕ್ರಿಕೆಟ್ ಆಟಗಾರ್ತಿಯರ ಸಂಖ್ಯೆ ಕೂಡ ದೊಡ್ಡದಿದೆ. ಭಾರತದ ಬಲಿಷ್ಠ ಮಹಿಳಾ ಕ್ರಿಕೆ

ಶ್ರೀನಗರ: ಭಾರತದಲ್ಲಿ ಕ್ರಿಕೆಟ್ ಪ್ರತಿಯೊಬ್ಬರ ನೆಚ್ಚಿನ ಕ್ರೀಡೆಗಳಲ್ಲಿ ಒಂದು.. ಒಂದು ಕಾಲದಲ್ಲಿ ಹುಡುಗರಿಗೆ ಮಾತ್ರ ಸೀಮಿತವಾಗಿದ್ದ ಕ್ರಿಕೆಟ್ ಇದೀಗ ಬಾಲಕಿಯರ ಹಾಟ್ ಫೇವರಿಟ್ ಆಗಿದೆ. ಇದಕ್ಕೆ ಇಂಬು ನೀಡುವಂತೆ ಭಾರತದಲ್ಲಿ ಮಹಿಳಾ ಕ್ರಿಕೆಟಿಗರ ಸಂಖ್ಯೆ ಏನೂ ಕಡಿಮೆ ಇಲ್ಲ.. ಅಂತೆಯೇ ಉದಯೋನ್ಮುಖ ಕ್ರಿಕೆಟ್ ಆಟಗಾರ್ತಿಯರ ಸಂಖ್ಯೆ ಕೂಡ ದೊಡ್ಡದಿದೆ. ಭಾರತದ ಬಲಿಷ್ಠ ಮಹಿಳಾ ಕ್ರಿಕೆಟ್ ತಂಡವೇ ಇದಕ್ಕೆ ಉತ್ತಮ ಉದಾಹರಣೆ. 

ಈ ಪಟ್ಟಿಗೆ ಇದೀಗ ಲಡಾಖ್ ನಲ್ಲಿ ಶಾಲಾ ಬಾಲಕಿಯೊಬ್ಬಳು ಸೇರ್ಪಡೆಯಾಗುವ ವಿಶ್ವಾಸ ಮೂಡಿಸಿದ್ದು, ಇದಕ್ಕೆ ಕಾರಣ ಆಕೆಯ ಬ್ಯಾಟಿಂಗ್ ಕೌಶಲ್ಯ.. ಹೌದು.. ಭಾರತ ತಂಡದ ರನ್ ಮೆಷಿನ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿಯ ಅಭಿಮಾನಿಯಾಗಿರುವ ಲಡಾಖ್ ನ ಬಾಲಕಿ ಕ್ರಿಕೆಟ್ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಲಡಾಖ್‌ನಲ್ಲಿ ವೈರಲ್ ವೀಡಿಯೊವನ್ನು ಸೆರೆಹಿಡಿಯಲಾಗಿದ್ದು, ಅಲ್ಲಿ ಈ ಪುಟ್ಟ ಹುಡುಗಿ ಕ್ರಿಕೆಟ್ ಆಡುತ್ತಿರುವುದನ್ನು ಕಾಣಬಹುದು. ಈ ಹುಡುಗಿ ತನ್ನ ಬ್ಯಾಟ್‌ನಿಂದ ಉತ್ತಮ ಹೊಡೆತಗಳನ್ನು ಹೊಡೆಯುತ್ತಿದ್ದು, ಈ ಪುಟ್ಟ ಅಭಿಮಾನಿಯ ಹಲವು ಶಾಟ್‌ಗಳು ಹೆಲಿಕಾಪ್ಟರ್ ಶಾಟ್‌ಗಳೊಂದಿಗೆ ಹೊಂದಾಣಿಕೆಯಾಗುತ್ತಿವೆ ಎಂದು ಕೆಲ ಖಾತೆದಾರರು ಟ್ವೀಟ್ ಮಾಡಿದ್ದಾರೆ.  

ಲಡಾಖ್‌ನ ಶಾಲಾ ಶಿಕ್ಷಣ ನಿರ್ದೇಶನಾಲಯವು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಮಕ್ಸೂಮಾ ಎಂಬ 6 ನೇ ತರಗತಿಯ ವಿದ್ಯಾರ್ಥಿನಿಯು ಬ್ಯಾಟಿಂಗ್ ಮಾಡಿ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುತ್ತಾರೆ. ಪುಟ್ಟ ಹುಡುಗಿಯ ಸಾಮರ್ಥ್ಯ ಮತ್ತು ಕೌಶಲ್ಯವು ಟ್ವಿಟ್ಟರ್ ಅನ್ನು ವಿಸ್ಮಯಗೊಳಿಸಿದೆ. 6 ನೇ ತರಗತಿಯ ವಿದ್ಯಾರ್ಥಿನಿ ಮಕ್ಸೂಮಾ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯಂತೆ ಆಗಬೇಕೆಂದು ಹಾತೊರೆಯುತ್ತಿದ್ದಾಳೆ.

ಈ ಕುರಿತು ಮಾತನಾಡಿರುವ ಮಕ್ಸೂಮಾ, ಮನೆಯಲ್ಲಿರುವ ನನ್ನ ತಂದೆ ಮತ್ತು ಶಾಲೆಯಲ್ಲಿ ನನ್ನ ಶಿಕ್ಷಕರು ನನ್ನನ್ನು ಕ್ರಿಕೆಟ್ ಆಡಲು ಪ್ರೋತ್ಸಾಹಿಸುತ್ತಾರೆ. ಉತ್ತಮ ಕ್ರಿಕೆಟ್ ಆಡಲು ನನ್ನ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ಆಕೆ ಹೇಳಿದ್ದಾಳೆ ಎಂದು ಶಾಲಾ ಶಿಕ್ಷಣ ನಿರ್ದೇಶನಾಲಯ ಟ್ವೀಟ್ ಮಾಡಿದೆ.

ಆರನೇ ತರಗತಿಯ ಉದಯೋನ್ಮುಖ ತಾರೆ 'ಹೆಲಿಕಾಪ್ಟರ್' ಶಾಟ್ ಕಲಿಯಲು ಬಯಸುತ್ತಿದ್ದು, 'ನಾನು ಬಾಲ್ಯದಿಂದಲೂ ಆಡುತ್ತಿದ್ದೇನೆ. ನಾನು ಇನ್ನೂ ವಿಶೇಷವಾಗಿ 'ಹೆಲಿಕಾಪ್ಟರ್ ಶಾಟ್' ಆಡುವುದನ್ನು ಕಲಿಯುತ್ತಿದ್ದೇನೆ. ಎರಡನೇ ರನ್ ತೆಗೆದುಕೊಂಡ ನಂತರ ನಾವು ದಣಿಯುತ್ತೇವೆ. ಆಗ ಔಟ್ ಆಗಿ ಬಿಡುತ್ತೇನೆ. ನನ್ನ ನೆಚ್ಚಿನ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಾನು ಅವರಂತೆ ಆಗಲು ಬಯಸುತ್ತೇನೆ ಎಂದು ಮಕ್ಸೂಮಾ ಡಿಎಸ್‌ಇ ಪೋಸ್ಟ್ ಮಾಡಿದ ವೀಡಿಯೊದಲ್ಲಿ ತಿಳಿಸಿದ್ದಾರೆ. 
 

Related Stories

No stories found.

Advertisement

X
Kannada Prabha
www.kannadaprabha.com