ಲಾರೆನ್ಸ್ ಮೈದಾನದಲ್ಲಿ ಅಬ್ಬರಿಸಿದ ಹರ್ಮನ್​ಪ್ರೀತ್ ಕೌರ್; ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ 88 ರನ್‌ ಗೆಲುವು

ಭಾರತ ಮಹಿಳಾ ಕ್ರಿಕೆಟ್ ತಂಡವು ಇಂಗ್ಲೆಂಡ್‌ನಲ್ಲಿ ಮೊದಲ ಬಾರಿಗೆ ಏಕದಿನ ಅಂತಾರಾಷ್ಟ್ರೀಯ ಸರಣಿಯನ್ನು ಗೆದ್ದು ಇತಿಹಾಸ ನಿರ್ಮಿಸಿದೆ.
ಹರ್ಮನ್ ಪ್ರೀತ್ ಕೌರ್
ಹರ್ಮನ್ ಪ್ರೀತ್ ಕೌರ್

ಕ್ಯಾಂಟರ್ಬರಿ: ಭಾರತ ಮಹಿಳಾ ಕ್ರಿಕೆಟ್ ತಂಡವು ಇಂಗ್ಲೆಂಡ್‌ನಲ್ಲಿ ಮೊದಲ ಬಾರಿಗೆ ಏಕದಿನ ಅಂತಾರಾಷ್ಟ್ರೀಯ ಸರಣಿಯನ್ನು ಗೆದ್ದು ಇತಿಹಾಸ ನಿರ್ಮಿಸಿದೆ.

ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ 2ನೇ ಏಕದಿನ ಪಂದ್ಯ ದಿ ಸ್ಪಿಟ್‌ಫೈರ್ ಗ್ರೌಂಡ್ ಸೇಂಟ್ ಲಾರೆನ್ಸ್ ಮೈದಾನದಲ್ಲಿ ನಡೆದಿದ್ದು, ಇದೇ ವೇಳೆ ಭಾರತ ತಂಡದ ನಾಯಕಿ ಹರ್ಮನ್​ಪ್ರೀತ್ ಕೌರ್ ಶತಕ ಸಿಡಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ನಾಯಕಿ ಹರ್ಮನ್‌ಪ್ರೀತ್ ಕೌರ್ ಅಜೇಯ ಶತಕವನ್ನು ಸಿಡಿಸುವ ಮೂಲಕ ಭಾರತವನ್ನು ಎರಡನೇ ಏಕದಿನ ಸರಣಿಯಲ್ಲಿ ಸಮಗ್ರ 88 ರನ್‌ಗಳ ಗೆಲುವಿನೊಂದಿಗೆ ಭಾರತವನ್ನು ಮತ್ತಷ್ಟು ಬಲಪಡಿಸಿದರು. ಇದು 1999ರ ಬಳಿಕ ಇಂಗ್ಲೆಂಡ್ ವಿರುದ್ಧದ ದೇಶದ ಮೊದಲ ಸರಣಿ ಜಯವಾಗಿದೆ.

ಹರ್ಮನ್‌ಪ್ರೀತ್ ಕೌರ್ ತನ್ನ ಕೊನೆಯ 11 ಎಸೆತಗಳಲ್ಲಿ 43 ರನ್‌ಗಳನ್ನು ಸಿಡಿಸುವ ಮೂಲಕ ಎರಡನೇ ಅತಿ ಹೆಚ್ಚು ಏಕದಿನ ಸರಣಿಯ ಸ್ಕೋರ್ ಗಳಿಸಿದ್ದಲ್ಲದೇ ಹರ್ಮನ್ ಅವರು ಐದನೇ ಶತಕ ಬಾರಿಸಿ ಬೀಗಿದ್ದಾರೆ.

ಭಾಟಿಯಾ ವಿಕೆಟ್ ಬಳಿಕ ಅಖಾಡಕ್ಕಿಳಿದ ಹರ್ಮನ್​ಪ್ರೀತ್ ಕೌರ್ ಪಂದ್ಯದ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಲೇ 18 ಬೌಂಡರಿ ಹಾಗೂ 4 ಸಿಕ್ಸರ್ ಸೇರಿ 111 ಎಸೆತಗಳಲ್ಲಿ ಅಜೇಯರಾಗಿ 143 ರನ್ ಗಳಿಸಿದ್ದಾರೆ.

ಮೊದಲು ಮಂಧಾನ, ಬಳಿಕ ಹರ್ಲೀನ್ ಡಿಯೋಲ್ ಜೊತೆಗಿನ ಪಯಣ ತಂಡವನ್ನು ಉತ್ತಮ ಸ್ಕೋರ್​ನತ್ತ ಕೊಂಡೊಯ್ದಿದ್ದು, ಟೀಂ ಇಂಡಿಯಾ ಅಂತಿಮವಾಗಿ 5 ವಿಕೆಟ್ ನಷ್ಟಕ್ಕೆ ಇಂಗ್ಲೆಂಡ್ ಮಹಿಳಾ ತಂಡಕ್ಕೆ 334 ರನ್ ಟಾರ್ಗೆಟ್ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com