ಜಿಂಬಾಬ್ವೆ ವಿರುದ್ಧ ಮೂರನೇ ಏಕದಿನ ಪಂದ್ಯ: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ
ಕಳೆದ ಒಂಬತ್ತು ವರ್ಷಗಳಲ್ಲಿ ಜಿಂಬಾಬ್ವೆಯಲ್ಲಿ ಒಂದು ಏಕದಿನ ಪಂದ್ಯದಲ್ಲೂ ಸೋಲು ಕಾಣದ ಟೀಂ ಇಂಡಿಯಾ, ಹರಾರೆ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಶನಿವಾರ ನಡೆದ ಪಂದ್ಯದಲ್ಲೂ ಐದು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ
ಈಗಾಗಲೇ ಸರಣಿಯನ್ನು ಕೈ ವಶ ಮಾಡಿಕೊಂಡಿದೆ.
Published: 22nd August 2022 12:39 PM | Last Updated: 22nd August 2022 12:50 PM | A+A A-

ಟೀಂ ಇಂಡಿಯಾ ಆಟಗಾರರು
ಹರಾರೆ: ಕಳೆದ ಒಂಬತ್ತು ವರ್ಷಗಳಲ್ಲಿ ಜಿಂಬಾಬ್ವೆಯಲ್ಲಿ ಒಂದು ಏಕದಿನ ಪಂದ್ಯದಲ್ಲೂ ಸೋಲು ಕಾಣದ ಟೀಂ ಇಂಡಿಯಾ, ಹರಾರೆ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಶನಿವಾರ ನಡೆದ ಪಂದ್ಯದಲ್ಲೂ ಐದು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ
ಈಗಾಗಲೇ ಸರಣಿಯನ್ನು ಕೈ ವಶ ಮಾಡಿಕೊಂಡಿದೆ. ಇದೇ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಮೂರನೇ ಏಕದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿಯನ್ನು ವೈಟ್ ವಾಶ್ ಮಾಡುವ ಗುರಿ ಹೊಂದಿದೆ.
ಇದನ್ನೂ ಓದಿ: 2ನೇ ಏಕದಿನ: ಜಿಂಬಾಬ್ವೆ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಜಯ, ಸರಣಿ ಕೈವಶ
ಟೀಂ ಇಂಡಿಯಾ ನಾಯಕ ಕೆ.ಎಲ್. ರಾಹುಲ್ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲಿ ಆಡದ ದೀಪಕ್ ಚಹರ್ ಇಂದಿನ ಪಂದ್ಯದಲ್ಲಿ ಆಡಲಿದ್ದಾರೆ. ಮತ್ತೊಂದೆಡೆ ರೆಗಿಸ್ ಚಕಬ್ವಾ ಪಡೆ ಇಂದಿನ ಪಂದ್ಯದಲ್ಲಿ ಗೆದ್ದು ಮಾನ ಉಳಿಸಿಕೊಳ್ಳಲು ಹೋರಾಡುವ ಸಾಧ್ಯತೆಯಿದೆ.
ಟಾಸ್ ಗೆದ್ದ ಬಳಿಕ ಮಾತನಾಡಿದ ಕೆ.ಎಲ್. ರಾಹುಲ್, ಮೊದಲಿಗೆ ಚೆನ್ನಾಗಿ ಬ್ಯಾಟಿಂಗ್ ಮಾಡಬೇಕು, ಅದು ಮಾತ್ರ ನಮ್ಮ ಮುಂದಿರುವ ಸವಾಲು. ಕಳೆದ ಕೆಲವು ಸೀಸನ್ ಗಳಲ್ಲಿ ಸಿರಾಜ್ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಏಕದಿನ ಪಂದ್ಯದಲ್ಲೂ ಉತ್ತಮ ಫಾರ್ಮ್ ನಲ್ಲಿದ್ದಾರೆ. ಇಂದಿನ ಪಂದ್ಯದಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದ್ದು, ಸಿರಾಜ್, ಪ್ರಸಿದ್ಧ್ ಕೃಷ್ಣ ತಂಡದಿಂದ ಹೊರಗಿದ್ದು, ದೀಪಕ್ ಚಾಹರ್ ಮತ್ತು ಅವೇಶ್ ಖಾನ್ ತಂಡ ಸೇರಿದ್ದಾರೆ ಎಂದು ತಿಳಿಸಿದರು