ಮುಂಬೈ ಬೀದಿಗಳಲ್ಲಿ ಸಾಮಾನ್ಯರಂತೆ ಸ್ಕೂಟರ್ ಏರಿ ಸುತ್ತಾಡಿದ ಖ್ಯಾತ ದಂಪತಿ; ಯಾರಿದು ಗೊತ್ತ? ವಿಡಿಯೋ ನೋಡಿ!

ಎಲ್ಲಿ ಹೋದರು ಸಾಮಾನ್ಯರಂತೆ ಓಡಾಡಲು ಸಾಧ್ಯವಾಗದ ಈ ಜೋಡಿ ತಲೆಗೆ ಹೆಲ್ಮೆಟ್ ಹಾಕಿಕೊಂಡು ಬೀದಿ ಬೀದಿ ಸುತ್ತಾಡಿ ಖುಷಿ ಪಟ್ಟಿದ್ದಾರೆ.
ವಿರುಷ್ಕಾ ದಂಪತಿ
ವಿರುಷ್ಕಾ ದಂಪತಿ

ಮುಂಬೈ: ಎಲ್ಲಿ ಹೋದರು ಸಾಮಾನ್ಯರಂತೆ ಓಡಾಡಲು ಸಾಧ್ಯವಾಗದ ಈ ಜೋಡಿ ತಲೆಗೆ ಹೆಲ್ಮೆಟ್ ಹಾಕಿಕೊಂಡು ಬೀದಿ ಬೀದಿ ಸುತ್ತಾಡಿ ಖುಷಿ ಪಟ್ಟಿದ್ದಾರೆ.

ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ಜೋಡಿ ಯಾವಾಗಲೂ ಗಮನಸೆಳೆಯುತ್ತೆ. ಈ ಜೋಡಿ ಸಾಮಾನ್ಯರಂತೆ ಮುಂಬೈನ ಬೀದಿಯಲ್ಲಿ ಸಮಯ ಕಳೆಯಲು ಐಡಿಯಾವೊಂದನ್ನು ಮಾಡಿ ಸುತ್ತಾಡಿದೆ. ಅದು ಹೇಗೆ ಗೊತ್ತಾ? ಯಾರಿಗೂ ಗೊತ್ತಾಗದ ಹಾಗೆ ಹೆಲ್ಮೆಟ್ ಧರಿಸಿ ಸ್ಕೂಟರ್ ನಲ್ಲಿ ವಿರುಷ್ಕಾ ಸಂಚರಿಸಿದ್ದಾರೆ.

ತಮ್ಮ ಐಷಾರಾಮಿ ಕಾರ್ ತೊರೆದು ಮಾಧ್ ದ್ವೀಪದಿಂದ ಸ್ಕೂಟರ್ ರೈಡ್ ಮಾಡಿ ಎಂಜಾಯ್ ಮಾಡಿದರು. ಒಟ್ಟಿಗೆ ಪ್ರಾಜೆಕ್ಟ್ ಗಾಗಿ ಚಿತ್ರೀಕರಣ ನಡೆಸ್ತಿದ್ದ ಸಮಯದಲ್ಲಿ ವಿರುಷ್ಕಾ ದಂಪತಿ ಸಾಮಾನ್ಯರಂತೆ ಮುಂಬೈ ಬೀದಿಯಲ್ಲಿ ಸುತ್ತಾಡಿರೋ ಫೋಟೋ, ವಿಡಿಯೋಗಳು ಇದೀಗ ವೈರಲ್ ಆಗ್ತಿವೆ.

ಇನ್ನು ಕೊಹ್ಲಿ ದಂಪತಿ ಯಾರಿಗೂ ಗೊತ್ತಾಗದಂತೆ ಹೆಲ್ಮೆಟ್ ಧರಿಸಿದ್ದರೂ ಸಂಚರಿಸುತ್ತಿದ್ದರೂ ಪಾಪರಾಜಿಗಳ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೆವಾಗಲಿಲ್ಲ. ಇಬ್ಬರೂ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿರಾಟ್ ಸ್ಕೂಟರ್ ಓಡಿಸುತ್ತಿದ್ದರೆ, ಅನುಷ್ಕಾ ಅವರ ಹಿಂದೆ ಕುಳಿತಿದ್ದರು. ಕೋಟಿಗಟ್ಟಲೆ ಒಡೆಯ ಕೊಹ್ಲಿ ಸ್ಕೂಟರ್ ಓಡಿಸಿದ್ದು ಕಂಡು ಅಭಿಮಾನಿಗಳು ಸಾಕಷ್ಟು ಅಚ್ಚರಿಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com