ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಟಿ-20ಗೆ ಗುಡ್ ಬೈ?

ಇತ್ತೀಚಿಗೆ ಟಿ-20 ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ವಿರಾಟ್ ಕೊಹ್ಲಿ ವಿಶ್ವಕಪ್ ನಂತರ ಟಿ-20ಗೆ ಗುಡ್ ಬೈ ಹೇಳುವ ಸಾಧ್ಯತೆ ಹೆಚ್ಚಾಗಿರುವುದಾಗಿ ಮೂಲಗಳು ಹೇಳಿವೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ನವದೆಹಲಿ: ಇತ್ತೀಚಿಗೆ ಟಿ-20 ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ವಿರಾಟ್ ಕೊಹ್ಲಿ ವಿಶ್ವಕಪ್ ನಂತರ ಟಿ-20ಗೆ ಗುಡ್ ಬೈ ಹೇಳುವ ಸಾಧ್ಯತೆ ಹೆಚ್ಚಾಗಿರುವುದಾಗಿ ಮೂಲಗಳು ಹೇಳಿವೆ.

ಕೊಯ್ಲಿ ಅವರಿಂದ 150 ರ ಸ್ಟ್ರೈಕ್ ದರದಲ್ಲಿ ರನ್ ಬರುತ್ತಿಲ್ಲ. ಭಾನುವಾರ ನಡೆದ ಏಷ್ಯಾ ಕಪ್ ಟೂರ್ನಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆರಂಭದಲ್ಲಿ ರನ್ ಗಳಿಸಲು ಪರದಾಡಿದರು. ಆದರೆ, ನಂತರ 30 ಎಸತೆಗಳಲ್ಲಿ 35 ರನ್ ಗಳಿಸಿದರು. ಆದರಿಂದ ಕೊಹ್ಲಿ ಅವರನ್ನು ಟಿ-20 ವಿಶ್ವಕಪ್ ತಂಡದಿಂದ ಕೈ ಬಿಡುವ ಸಾಧ್ಯತೆಯಿದೆ? ಆದರೆ, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ಬಳಿಕ ಟಿ-20ಯಲ್ಲಿ ಭಾರತ ಪರ ಕೊಹ್ಲಿ ಆಡಲಿದ್ದಾರೆಯೇ? ಎಂಬ ಪ್ರಶ್ನೆಗೆ ಆಯ್ಕೆದಾರರಿಗೆ ಮಾತ್ರ ಉತ್ತರ ಗೊತ್ತಿರುತ್ತದೆ. ಆದರೆ, ಅವರು ಈ ಬಗ್ಗೆ ಏನನ್ನು ಮಾತನಾಡುತ್ತಿಲ್ಲ.

33 ವರ್ಷದ ಕೊಹ್ಲಿ 464 ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ ಐಪಿಎಲ್ ನನ್ನು 15 ಸೀಸನ್ ಗಳಲ್ಲಿ ಆಡಿದ್ದಾರೆ. ಈ ವರ್ಷ ನಡೆದ ಐದು ಟಿ-20 ಪಂದ್ಯಗಳಲ್ಲಿ ಕ್ರಮವಾಗಿ 17, 52, 1,11 ಮತ್ತು 35 ರನ್ ಗಳನ್ನು ಕೊಹ್ಲಿ ಗಳಿಸಿದ್ದಾರೆ. ಪ್ರತಿ ಪಂದ್ಯದಲ್ಲೂ ಅರ್ಧ ಶತಕ ಗಳಿಸುವ ಅಗತ್ಯವಿಲ್ಲ, ಆದರೆ, 20-22 ಎಸೆತಗಳಲ್ಲಿ 35, ಅಥವಾ 10 ಎಸೆತಗಳಲ್ಲಿ 20 ರನ್ ಆದರೂ ಗಳಿಸಬೇಕಾಗುತ್ತದೆ. ಇದು ಸ್ವಲ್ಪ ಮಟ್ಟದ ಪರಿಣಾಮವನ್ನಾದರೂ ಬೀರುತ್ತದೆ. 

ಟಿ20 ಕ್ರಿಕೆಟ್‌ನಲ್ಲಿ ಕೊಹ್ಲಿಯ ನಂ.3 ಕ್ರಮಾಂಕದ ಬಗ್ಗೆಯೂ ಚರ್ಚೆಯಾಗುತ್ತಿದೆ. ಆದರೆ ಬಿಸಿಸಿಐ ಟಿ 20 ವಿಶ್ವಕಪ್‌ನ ಕೊನೆಯವರೆಗೂ ಈ ಸಮಸ್ಯೆ ಪರಿಹರಿಸುವುದಿಲ್ಲ ಎಂದು ತಿಳಿದುಬಂದಿದೆ. ಕೊಹ್ಲಿ ಅವರನ್ನು ಟಿ-20 ತಂಡದಿಂದ ಕೈ ಬಿಡುವ ಬಗ್ಗೆ ರಾಷ್ಟ್ರೀಯ ಆಯ್ಕೆದಾರರ ತಂಡ ಕೋಚ್ ರಾಹುಲ್ ದ್ರಾವಿಡ್, ಎನ್ ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com