ಕೊಹ್ಲಿ ಬಿಟ್ಟ ಸುಲಭದ ಕ್ಯಾಚ್ ಅನ್ನು ಡೈವ್ ಮಾಡಿ ಹಿಡಿದ ಪಂತ್: ವಿಡಿಯೋ ವೈರಲ್!

ಚಟ್ಟೋಗ್ರಾಮ್ ಟೆಸ್ಟ್‌ನ ನಾಲ್ಕನೇ ದಿನ ಭಾರತವು ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ದಿನದಾಟದ ಅಂತ್ಯಕ್ಕೆ ಬಾಂಗ್ಲಾದೇಶ 6 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿದೆ.
ಕೊಹ್ಲಿ-ಪಂತ್
ಕೊಹ್ಲಿ-ಪಂತ್

ಚಟ್ಟೋಗ್ರಾಮ್ ಟೆಸ್ಟ್‌ನ ನಾಲ್ಕನೇ ದಿನ ಭಾರತವು ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ದಿನದಾಟದ ಅಂತ್ಯಕ್ಕೆ ಬಾಂಗ್ಲಾದೇಶ 6 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿದೆ. 

ಕೊನೆಯ ದಿನದಲ್ಲಿ ಪಂದ್ಯ ಗೆಲ್ಲಲು ಭಾರತಕ್ಕೆ 4 ವಿಕೆಟ್ ಮತ್ತು ಬಾಂಗ್ಲಾದೇಶಕ್ಕೆ 241 ರನ್ ಅಗತ್ಯವಿದೆ. ನಾಯಕ ಶಕೀಬ್ ಅಲ್ ಹಸನ್ (40*) ಮತ್ತು ಮೆಹಿದಿ ಹಸನ್ ಮಿರಾಜ್ (9) ಅಜೇಯರಾಗಿದ್ದಾರೆ. ನಾಲ್ಕನೇ ದಿನದ ಆರಂಭದಲ್ಲಿ ವಿರಾಟ್ ಕೊಹ್ಲಿ ಕ್ಯಾಚ್ ಕೈಬಿಟ್ಟಾಗ ವಿಕೆಟ್ ಕೀಪರ್ ರಿಷಬ್ ಪಂತ್ ಅದ್ಭುತ ಡೈವ್ ಮಾಡಿ ಹಿಡಿದಿದ್ದರು. ಇನ್ನು ಪಂದ್ಯದಲ್ಲಿ ಅತ್ಯುತ್ತಮ ಸ್ಟಂಪಿಂಗ್ ಕೂಡ ಮಾಡಿದರು. 

ಕೊಹ್ಲಿ ಬಿಟ್ಟ ಕ್ಯಾಚ್ ಅನ್ನು 3ನೇ ಪ್ರಯತ್ನದಲ್ಲಿ ಹಿಡಿದ ಪಂತ್
ನಾಲ್ಕನೇ ದಿನದಾಟದ 46 ಓವರ್ ಗಳವರೆಗೂ ಭಾರತಕ್ಕೆ ಯಾವುದೇ ವಿಕೆಟ್ ಸಿಗಲಿಲ್ಲ. ಬಾಂಗ್ಲಾದೇಶದ ಆರಂಭಿಕರಾದ ನಜ್ಮುಲ್ ಹೊಸೈನ್ ಶಾಂಟೊ ಮತ್ತು ಜಾಕಿರ್ ಹಸನ್ 124 ರನ್ ಜೊತೆಯಾಟವಾಡಿದರು. ನಂತರ 47ನೇ ಓವರ್ ನಲ್ಲಿ ಉಮೇಶ್ ಯಾದವ್ ಅವರ ಮೊದಲ ಎಸೆತವೇ ಶಾಂಟೊ ಬ್ಯಾಟ್ ನ ಎಡ್ಜ್ ಗೆ ತಾಗಿ ಚೆಂಡು ಸ್ಲಿಪ್‌ನಲ್ಲಿ ನಿಂತಿದ್ದ ವಿರಾಟ್ ಕೊಹ್ಲಿಗೆ ಹೋಯಿತು. ಆದರೆ ಕೊಹ್ಲಿ ಚೆಂಡನ್ನು ಕೈ ಬಿಟ್ಟದರು. ಈ ವೇಳೆ ಚೆಂಡು ವಿಕೆಟ್ ಕೀಪರ್ ರಿಷಭ್ ಪಂತ್ ಕಡೆಗೆ ಹೋಯಿತು. 3 ಪ್ರಯತ್ನಗಳ ನಂತರ ಡೈವ್ ಮಾಡಿದ ಪಂತ್ ಅಂತಿಮವಾಗಿ ಕ್ಯಾಚ್ ಪಡೆದರು. ಶಾಂಟೊ 156 ಎಸೆತಗಳಲ್ಲಿ 67 ರನ್ ಗಳಿಸಿ ಔಟಾದರು.

ಚೊಚ್ಚಲ ಟೆಸ್ಟ್‌ನಲ್ಲಿ ಝಾಕಿರ್ ಹಸನ್ ಶತಕ
ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್‌ಮನ್ ಝಾಕಿರ್ ಹಸನ್ ಚೊಚ್ಚಲ ಟೆಸ್ಟ್‌ನಲ್ಲಿಯೇ ಶತಕ ಸಿಡಿಸಿದ್ದರು. ಈ ಸಾಧನೆ ಮಾಡಿದ ಬಾಂಗ್ಲಾದೇಶದ ನಾಲ್ಕನೇ ಆಟಗಾರ ಎನಿಸಿಕೊಂಡರು. ಝಾಕಿರ್ 124 ಎಸೆತದಲ್ಲಿ 100 ರನ್‌ ಪೂರೈಸಿದರು. ಇದರಲ್ಲಿ 13 ಬೌಂಡರಿ ಹಾಗೂ ಒಂದು ಸಿಕ್ಸರ್ ಕೂಡ ಇದೆ. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 20 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com