ರಿಷಬ್ ಪಂತ್ ರನ್ನು ದೆಹಲಿಗೆ ಏರ್ ಲಿಫ್ಟ್ ಮಾಡುವ ಅಗತ್ಯವಿಲ್ಲ: ಡಿಡಿಸಿಎ ಸ್ಪಷ್ಟನೆ

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ರಿಷಬ್ ಪಂತ್ ಗೆ ಡೆಹ್ರಾಡೂನ್ ನಲ್ಲೇ ಚಿಕಿತ್ಸೆ ಮುಂದುವರೆಯುತ್ತಿದ್ದು ಅವರನ್ನು ದೆಹಲಿಗೆ ಏರ್ ಲಿಫ್ಟ್ ಮಾಡುವ ಅಗತ್ಯವಿಲ್ಲ ಎಂದು ಡಿಡಿಸಿಎ ನಿರ್ದೇಶಕ ಶ್ಯಾಮ್ ಶರ್ಮಾ ತಿಳಿಸಿದ್ದಾರೆ.
ಶ್ಯಾಮ್ ಶರ್ಮಾ-ರಿಷಬ್ ಪಂತ್
ಶ್ಯಾಮ್ ಶರ್ಮಾ-ರಿಷಬ್ ಪಂತ್

ನವದೆಹಲಿ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ರಿಷಬ್ ಪಂತ್ ಗೆ ಡೆಹ್ರಾಡೂನ್ ನಲ್ಲೇ ಚಿಕಿತ್ಸೆ ಮುಂದುವರೆಯುತ್ತಿದ್ದು ಅವರನ್ನು ದೆಹಲಿಗೆ ಏರ್ ಲಿಫ್ಟ್ ಮಾಡುವ ಅಗತ್ಯವಿಲ್ಲ ಎಂದು ಡಿಡಿಸಿಎ ನಿರ್ದೇಶಕ ಶ್ಯಾಮ್ ಶರ್ಮಾ ತಿಳಿಸಿದ್ದಾರೆ. 

ಶುಕ್ರವಾರ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು ಪ್ರಥಮ ಚಿಕಿತ್ಸೆಯ ನಂತರ ಅವರನ್ನು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಈ ಅಪಾಯಕಾರಿ ಅಪಘಾತದಲ್ಲಿ ರಿಷಬ್ ಪಂತ್ ಅವರ ಕಾಲು, ತಲೆ ಮತ್ತು ಬೆನ್ನಿಗೆ ಗಾಯವಾಗಿದೆ. ಪ್ಲಾಸ್ಟಿಕ್ ಸರ್ಜರಿಗಾಗಿ ಅವರನ್ನು ದೆಹಲಿಗೆ ಏರ್ ಲಿಫ್ಟ್ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಆದರೆ, ಇದೀಗ ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ನಿರ್ದೇಶಕ ಶ್ಯಾಮ್ ಶರ್ಮಾ ಈ ಕುರಿತು ದೊಡ್ಡ ಮಾಹಿತಿ ನೀಡಿದ್ದಾರೆ. ಶನಿವಾರ ಮಧ್ಯಾಹ್ನ ಡೆಹ್ರಾಡೂನ್ ಗೆ ತೆರಳಿದ ಶ್ಯಾಮ್ ಶರ್ಮಾ ಅವರು ರಿಷಬ್ ಪಂತ್ ಅವರ ಆರೋಗ್ಯ ವಿಚಾರಿಸಿದರು. ನಂತರ ಮಾತನಾಡಿದ ಅವರು ಇದೀಗ ಭಾರತೀಯ ಕ್ರಿಕೆಟಿಗನನ್ನು ಏರ್ ಲಿಫ್ಟ್ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು. 

ಸಕ್ಷಮ್ ಆಸ್ಪತ್ರೆಯಲ್ಲಿ ಪಂತ್‌ಗೆ ಪ್ರಥಮ ಚಿಕಿತ್ಸೆ ನೀಡಿದ ಡಾ. ಸುಶೀಲ್ ನಗರ್, ಪಂತ್‌ಗೆ ತಲೆ ಮತ್ತು ಮೊಣಕಾಲು ಗಾಯಗಳಾಗಿವೆ ಎಂದು ತಿಳಿಸಿದ್ದರು. ಪಂತ್ ಅವರ ಎಕ್ಸ್-ರೇ ಯಾವುದೇ ಮೂಳೆ ಮುರಿದಿಲ್ಲ ಎಂದು ತೋರಿಸಿದೆ ಆದರೆ ಅವರ ಅಸ್ಥಿರಜ್ಜು ಹರಿದಿದೆ ಎಂದು ಅವರು ಹೇಳಿದ್ದರು. ಇದಲ್ಲದೆ, ಅವರ ಕಣ್ಣಿನ ಬಳಿ ಅವರ ಹಣೆಯ ಮೇಲೆ ಗಾಯವೂ ಇದೆ. ಕಾರಿನಿಂದ ಇಳಿಯುವಾಗ ಪಂತ್ ಅವರ ಬೆನ್ನಿಗೂ ತೀವ್ರ ಪೆಟ್ಟಾಗಿತ್ತು.

ಪಂತ್ ಚಿಕಿತ್ಸೆಯ ಭವಿಷ್ಯದ ಯೋಜನೆಯನ್ನು ಬಿಸಿಸಿಐ ನಿರ್ಧರಿಸುತ್ತದೆ ಎಂದು ಶ್ಯಾಮ್ ಶರ್ಮಾ ಹೇಳಿದ್ದಾರೆ. ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲು ಬಿಸಿಸಿಐಗೆ ಮಾತ್ರ ಅಧಿಕಾರವಿದೆ. ನಮ್ಮ ಅಧ್ಯಕ್ಷ ರೋಹನ್ ಜೇಟ್ಲಿ ಅವರು ಪಂತ್ ಅವರನ್ನು ಭೇಟಿಯಾಗುವಂತೆ ಹೇಳಿದ್ದರಿಂದ ಸೌಹಾರ್ದತೆಯ ಸೂಚಕವಾಗಿ ನಾನು ಇಲ್ಲಿಗೆ ಬಂದಿದ್ದೇನೆ. ರಿಷಬ್ ಪಂತ್ ನಮ್ಮ ಮಗುವಿನಂತೆ. ಅವರ ನೈತಿಕ ಸ್ಥೈರ್ಯ ಹೆಚ್ಚಿಸಲು ಇಲ್ಲಿಗೆ ಬಂದಿದ್ದೇನೆ. ಸದ್ಯಕ್ಕೆ ಪಂತ್ ಅವರನ್ನು ವಿಮಾನದಲ್ಲಿ ದೆಹಲಿಗೆ ಸಾಗಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದರು. ಇನ್ನೇನು ಮಾಡಬೇಕೋ ಅದನ್ನು ಬಿಸಿಸಿಐ ನಿರ್ಧರಿಸುತ್ತದೆ. ಅವರಿಗೆ ಉತ್ತಮ ಚಿಕಿತ್ಸೆ ನೀಡಲಾಗುವುದು ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com