2023-2027ರ ಐಪಿಎಲ್ ಟಿವಿ, ಡಿಜಿಟಲ್ ಹಕ್ಕು ದಾಖಲೆಯ 43,050 ಕೋಟಿ ರೂ. ಗೆ ಮಾರಾಟ?

2023 ರಿಂದ 2027ರವರೆಗಿನ 5 ವರ್ಷಗಳ ಐಪಿಎಲ್ ಟೂರ್ನಿಗಳ ಟಿವಿ, ಡಿಜಿಟಲ್ ಹಕ್ಕು ಮಾರಾಟದ ಹರಾಜು ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ದಾಖಲೆಯ 43,050 ಕೋಟಿ ರೂಗೆ ಹಕ್ಕು ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ.
ಐಪಿಎಲ್ ಟ್ರೋಫಿ
ಐಪಿಎಲ್ ಟ್ರೋಫಿ

ನವದೆಹಲಿ: 2023 ರಿಂದ 2027ರವರೆಗಿನ 5 ವರ್ಷಗಳ ಐಪಿಎಲ್ ಟೂರ್ನಿಗಳ ಟಿವಿ, ಡಿಜಿಟಲ್ ಹಕ್ಕು ಮಾರಾಟದ ಹರಾಜು ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ದಾಖಲೆಯ 43,050 ಕೋಟಿ ರೂಗೆ ಹಕ್ಕು ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಮಾಧ್ಯಮ ಹಕ್ಕುಗಳಿಗಾಗಿ ಪ್ಯಾಕೇಜ್- A ಮತ್ತು ಪ್ಯಾಕೇಜ್- Bಯನ್ನು ಮಾರಾಟ ಮಾಡಲಾಗಿದೆ. ಭಾರತದಲ್ಲಿ ಪ್ರಸಾರವಾಗುವ ಟಿವಿ ಮತ್ತು ಡಿಜಿಟಲ್ ಮಾಧ್ಯಮದ ಹಕ್ಕುಗಳನ್ನು ಮಾರಾಟ ಮಾಡಲಾಗಿದೆ. ಐಪಿಎಲ್ 2023ರಿಂದ 2027ರವರೆಗೆ ಟಿವಿ ಹಕ್ಕುಗಳು 57.5 ಕೋಟಿ ರೂ.ಗಳಿಗೆ ಮತ್ತು ಡಿಜಿಟಲ್ ಹಕ್ಕುಗಳು 48 ಕೋಟಿ ರೂ.ಗೆ ಮಾರಾಟವಾಗಿವೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಅಂಬಾನಿ ತೆಕ್ಕೆಗೆ ಹಕ್ಕು
ವಿಶ್ವದ ಅತಿ ಹೆಚ್ಚು ವೀಕ್ಷಿಸಿದ ಕ್ರೀಡಾಕೂಟಗಳಲ್ಲಿ ಒಂದಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗಾಗಿ ಟಿವಿ ಮತ್ತು ಡಿಜಿಟಲ್ ಹಕ್ಕುಗಳ ಹರಾಜು ಸೋಮವಾರ ಮುಕ್ತಾಯಗೊಂಡಿದೆ. ರಿಲಯನ್ಸ್ ಡಿಜಿಟಲ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಲಾಭದಾಯಕ ಕ್ರಿಕೆಟ್ ಪಂದ್ಯಾವಳಿಯ ಪ್ರಸಾರ ಹಕ್ಕುಗಳನ್ನು ಗೆದ್ದುಕೊಂಡಿದೆ. ಟಿವಿ ಹಕ್ಕುಗಳ ಹರಾಜು ಪ್ರತಿ ಪಂದ್ಯಕ್ಕೆ 57 ಕೋಟಿ ರೂ.ಗೆ ಮುಕ್ತಾಯವಾಗಿದ್ದು, ಡಿಜಿಟಲ್ ಹಕ್ಕುಗಳ ಮೌಲ್ಯವು ಪ್ರತಿ ಪಂದ್ಯಕ್ಕೆ 48 ಕೋಟಿ ರೂಗೆ ಮಾರಾಟವಾದಿದೆ ಎಂದು ಹೇಳಲಾಗಿದೆ. 2023-2027 ರ ಮಾಧ್ಯಮ ಹಕ್ಕುಗಳ ಮಾರಾಟಕ್ಕೆ ಒಟ್ಟಾರೆ ಟಿವಿ ಮತ್ತು ಡಿಜಿಟಲ್ ಹಕ್ಕುಗಳು 43,050 ಕೋಟಿ ರೂ.ಗೆ ಮುಕ್ತಾಯಗೊಂಡಿವೆ. ಇದರ ಮೂಲ ಬೆಲೆಯೇ ರೂ. 30,340 ಕೋಟಿ.

1 ಪಂದ್ಯಕ್ಕೆ 100 ಕೋಟಿ
ಮಾಧ್ಯಮ ವರದಿಗಳ ಪ್ರಕಾರ, ಪ್ಯಾಕೇಜ್ ಎ ವಿಜೇತರು ಪ್ಯಾಕೇಜ್ ಬಿ ವಿಜೇತರು 100 ಕೋಟಿ ರೂಗೆ ಖರೀದಿ ಮಾಡಿದ್ದು, ಪ್ಯಾಕೇಜ್ ಸಿಗಾಗಿ ಎರಡನೇ ಸುತ್ತಿನ ಬಿಡ್ಡಿಂಗ್ ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗುತ್ತದೆ ಎಂದು ವರದಿಗಳು ತಿಳಿಸಿವೆ. ಮಾಧ್ಯಮ ಹಕ್ಕುಗಳ ಪ್ಯಾಕೇಜ್-A ಮತ್ತು ಪ್ಯಾಕೇಜ್-B ಒಟ್ಟು 43,255 ಕೋಟಿ ರೂ.ಗಳಿಗೆ ಮಾರಾಟವಾಗಿದೆ. ಅಂದರೆ, ಈ ಬೆಲೆ 1 ಪಂದ್ಯಕ್ಕೆ 105.5 ಕೋಟಿ ರೂ.ಗೆ ತಲುಪಿದೆ. ಇದರ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ. ಈ ಹರಾಜಿನಲ್ಲಿ ಟಿವಿ ರೈಟ್ಸ್‌ನ ಮೂಲ ಬೆಲೆ 49 ಕೋಟಿ ರೂ. ಆಗಿದ್ದು, ಡಿಜಿಟಲ್ ರೈಟ್ಸ್‌ನ ಬೆಲೆ 33 ಕೋಟಿ ರೂ. ಆಗಿದೆ. ಐಪಿಎಲ್ ಮಾಧ್ಯಮ ಹಕ್ಕುಗಳನ್ನು ಯಾರು ಖರೀದಿಸಿದ್ದಾರೆ ಅನ್ನೋದು ಇನ್ನಷ್ಟೇ ತಿಳಿದುಬರಬೇಕಿದೆ.   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com