2ನೇ ಟಿ20: ಐರ್ಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್; ಜೊತೆಯಾಟದಲ್ಲಿ ದಾಖಲೆ ಬರೆದ ಹೂಡಾ-ಸ್ಯಾಮ್ಸನ್!

ಐರ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ದೀಪಕ್ ಹೂಡಾ ಮತ್ತು ಸಂಜು ಸ್ಯಾಮ್ಸನ್ ಜೋಡಿ ಭರ್ಜರಿ ದಾಖಲೆ ಬರೆದಿದೆ.
ದೀಪಕ್ ಹೂಡಾ-ಸಂಜು ಸ್ಯಾಮ್ಸನ್
ದೀಪಕ್ ಹೂಡಾ-ಸಂಜು ಸ್ಯಾಮ್ಸನ್

ಡಬ್ಲಿನ್: ಐರ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ದೀಪಕ್ ಹೂಡಾ ಮತ್ತು ಸಂಜು ಸ್ಯಾಮ್ಸನ್ ಜೋಡಿ ಭರ್ಜರಿ ದಾಖಲೆ ಬರೆದಿದೆ.

ಹೌದು...ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಮಾರ್ಕ್ ಅಡೇರ್ ಆರಂಭಿಕ ಆಘಾತ ನೀಡಿದ್ದರು.  ಈ ಹಂತದಲ್ಲಿ ಭಾರತದ ಪರ ಎರಡನೇ ವಿಕೆಟ್‌ಗೆ ಜೊತೆಯಾದ ದೀಪಕ್ ಹೂಡಾ ಮತ್ತು ಸ್ಯಾಮ್ಸನ್‌ ದಾಖಲೆಯ 176 ರನ್‌ ಸೇರಿಸಿದರು. ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ 77 ರನ್ ಸಿಡಿಸಿದರೆ, 2 ವಿಕೆಟ್ ಗೆ ಸ್ಯಾಮ್ಸನ್ ಜೊತೆಗೂಡಿದ ದೀಪಕ್ ಹೂಡಾ 57 ಎಸೆತಗಳಲ್ಲಿ 6 ಸಿಕ್ಸರ್, 9 ಬೌಂಡರಿಗಳ ನೆರವಿನಿಂದ 104ರನ್ ಸಿಡಿಸಿದರು. ಅಂತೆಯೇ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಶತಕ ಗಳಿಸಿದ ಭಾರತದ 4ನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡರು.

ಈ ಜೋಡಿ 3ನೇ ವಿಕೆಟ್ ಗೆ 176ರನ್ ಕಲೆ ಹಾಕಿತು. ಟಿ20 ಪಂದ್ಯದಲ್ಲಿ ಭಾರತದ ಪರ ದಾಖಲಾದ ಅತಿದೊಡ್ಡ ಜತೆಯಾಟ ಇದಾಗಿದೆ. ಈ ಮೈಲಿಗಲ್ಲಿನ ಮೂಲಕ, 2017 ರಲ್ಲಿ ಇಂದೋರ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರ ಹೆಸರಿಲ್ಲಿದ್ದ 165 ರನ್ ಗಳ ಜೊತೆಯಾಟದ ದಾಖಲೆಯನ್ನು ಇವರಿಬ್ಬರ ಜೋಡಿ ಮುರಿದಂತಾಗಿದೆ. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ಇದೇ ಡಬ್ಲಿನ್ ನಲ್ಲಿ, 2018 ರಲ್ಲಿ ಐರ್ಲೆಂಡ್ ವಿರುದ್ಧ (1ನೇ ವಿಕೆಟ್) 160 ರನ್ ಜೊತೆಯಾಟವಾಡಿದ್ದು, ಇದರೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com