ಟಿ-20 ವಿಶ್ವಕಪ್: ನೆದರ್ಲ್ಯಾಂಡ್ಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಸೋಲು, ಭಾರತ ಸೆಮಿಫೈನಲ್ ಗೆ!
ಟಿ-20 ವಿಶ್ವಕಪ್ ನಲ್ಲಿ ಭಾರತ ತಂಡ ಜಿಂಬಾಬ್ವೆ ತಂಡದ ವಿರುದ್ಧ ಸೆಣಸುವ ಮುನ್ನವೇ ಸೆಮಿಫೈನಲ್ ಪ್ರವೇಶಿಸಿದೆ. ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 13 ರನ್ ಗಳಿಂದ ಸೋಲಿಗೆ ಶರಣಾದ ನಂತರ ಭಾರತ ತಂಡಕ್ಕೆ ಅದೃಷ್ಟ ಖುಲಾಯಿಸಿತು. ಸೂಪರ್ ಲೀಗ್ ನ ಕೊನೆಯ ಪಂದ್ಯ ಆಡುವ ಮುನ್ನವೇ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿತು.
Published: 06th November 2022 09:33 AM | Last Updated: 07th November 2022 01:30 PM | A+A A-

ಟೀಂ ಇಂಡಿಯಾ ಆಟಗಾರರು
ಆಡಿಲೇಡ್: ಟಿ-20 ವಿಶ್ವಕಪ್ ನಲ್ಲಿ ಭಾರತ ತಂಡ ಜಿಂಬಾಬ್ವೆ ತಂಡದ ವಿರುದ್ಧ ಸೆಣಸುವ ಮುನ್ನವೇ ಸೆಮಿಫೈನಲ್ ಪ್ರವೇಶಿಸಿದೆ. ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 13 ರನ್ ಗಳಿಂದ ಸೋಲಿಗೆ ಶರಣಾದ ನಂತರ ಭಾರತ ತಂಡಕ್ಕೆ ಅದೃಷ್ಟ ಖುಲಾಯಿಸಿತು. ಸೂಪರ್ ಲೀಗ್ 12ರ ಕೊನೆಯ ಪಂದ್ಯ ಆಡುವ ಮುನ್ನವೇ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿತು.
ಇದನ್ನೂ ಓದಿ: ಸಿಡ್ನಿ: ಅತ್ಯಾಚಾರ ಆರೋಪ, ಶ್ರೀಲಂಕಾದ ಸ್ಟಾರ್ ಬ್ಯಾಟ್ಸ್‌ಮನ್ ದನುಷ್ಕಾ ಗುಣತಿಲಕ ಬಂಧನ- ವರದಿ
ಇನ್ನೂ ಇದೇ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ಗೆದ್ದ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಿದ್ದು, ಭಾರತ ಮತ್ತು ಪಾಕಿಸ್ತಾನ ಮತ್ತೊಮ್ಮೆ ಮುಖಾಮುಖಿಯಾಗುವ ಸಾಧ್ಯತೆಯಿದೆ.
ಆಡಿಲೇಡ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲ್ಯಾಂಡ್ಸ್ 4 ವಿಕೆಟ್ ನಷ್ಟಕ್ಕೆ 158 ಗಳಿಸಿದರೆ, ದಕ್ಷಿಣ ಆಫ್ರಿಕಾ ತಂಡ 8 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ದಕ್ಷಿಣ ಆಫ್ರಿಕಾ ತಂಡ ಟೂರ್ನಿಯಿಂದ ಹೊರ ಬಿದ್ದಿತು.
#T20WorldCup | Fans cheer for team India outside Melbourne Cricket Ground ahead of the #INDvsZIM match that will begin shortly.
— ANI (@ANI) November 6, 2022
Following South Africa's loss in their match against the Netherlands today, team India qualified for the semi-finals. pic.twitter.com/IMWB6YhBKx