2ನೇ ಟಿ20: ಬೃಹತ್ ಮೊತ್ತ ಪೇರಿಸಿದ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವ ದಾಖಲೆ ನಿರ್ಮಾಣ

ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಬ್ಯಾಟಿಂಗ್ ಮೂಲಕ ಬೃಹತ್ ಮೊತ್ತ ಪೇರಿಸಿ ವಿಶ್ವ ದಾಖಲೆ ನಿರ್ಮಿಸಿದೆ.
ಭಾರತ ತಂಡದ ಬ್ಯಾಟಿಂಗ್ ಅಬ್ಬರ
ಭಾರತ ತಂಡದ ಬ್ಯಾಟಿಂಗ್ ಅಬ್ಬರ

ಗುವಾಹತಿ: ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಬ್ಯಾಟಿಂಗ್ ಮೂಲಕ ಬೃಹತ್ ಮೊತ್ತ ಪೇರಿಸಿ ವಿಶ್ವ ದಾಖಲೆ ನಿರ್ಮಿಸಿದೆ.

ಹೌದು.. ಗುವಾಹತಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ ಅಕ್ಷರಶಃ ರನ್ ಗಳ ಸುರಿಮಳೆ ಗೈದಿದೆ. ನಿಗದಿತ 20 ಓವರ್ ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ ಬರೊಬ್ಬರಿ 237 ರನ್ ಗಳ ಬೃಹತ್ ಗುರಿ ನೀಡಿತು. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಜೋಡಿ ಮೊದಲ ವಿಕೆಟ್ ಗೆ 96 ರನ್ ಗಳ ಅಮೋಘ ಜೊತೆಯಾಟ ನೀಡಿ ಭಾರತಕ್ಕೆ ಭರ್ಜರಿ ಆರಂಭ ನೀಡಿತು. ಕೆಎಲ್ ರಾಹುಲ್ ಕೇವಲ 26 ಎಸೆತೆಗಳಲ್ಲಿ 4 ಸಿಕ್ಸರ್ ಮತ್ತು 5 ಬೌಂಡರಿ ಸಮೇತ 76 ರನ್ ಸಿಡಿಸಿದರೆ, 37 ಎಸೆತಗಳನ್ನು ಎದುರಿಸಿ 1 ಸಿಕ್ಸರ್ ಮತ್ತು 7 ಬೌಂಡರಿ ಸಹಿತ ರೋಹಿತ್ ಶರ್ಮಾ 43 ರನ್ ಪೇರಿಸಿದರು. ಆ ಮೂಲಕ ಅಮೋಘ 96 ರನ್ ಗಳ ಜೊತೆಯಾಟ ನೀಡಿತು. 

ಬಳಿಕ ಜೊತೆಗೂಡಿದ ಸೂರ್ಯ ಕುಮಾರ್ ಯಾದವ್ (61 ರನ್) ಮತ್ತು ವಿರಾಟ್ ಕೊಹ್ಲಿ (ಅಜೇಯ 49) ಜೋಡಿ 102 ರನ್ ಗಳ ಅಮೋಘ ಶತಕದ ಜೊತೆಯಾಟ ನೀಡಿತು. ಈ ಪೈಕಿ ಕೇವಲ 22 ಎಸೆತಗಳನ್ನು ಎದುರಿಸಿದ ಸೂರ್ಯ ಕುಮಾರ್ ಯಾದವ್ 5 ಸಿಕ್ಸರ್ ಮತ್ತು 5 ಬೌಂಡರಿ ಸಹಿತ 61 ರನ್ ಗಳನ್ನು ಸಿಡಿಸಿದರು. 28 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 1 ಸಿಕ್ಸರ್ ಮತ್ತು 7 ಬೌಂಡರಿ ಸಹಿತ ಅಜೇಯ 49ರನ್ ಸಿಡಿಸಿದರು.

ಅಂತಿಮ ಹಂತದಲ್ಲಿ ಕಣಕ್ಕಿಳಿದ ದಿನೇಶ್ ಕಾರ್ತಿಕ್ ಕೂಡ ಕೇವಲ 7 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 1 ಬೌಂಡರಿ ಸಮೇತ 17 ರನ್ ಸಿಡಿಸಿ ತಂಡದ ಮೊತ್ತವನ್ನು 237ಕ್ಕೇರಿಸಿದರು.

ಆಫ್ರಿಕಾ ವಿರುದ್ಧ ಬೃಹತ್ ರನ್ ಗಳ ದಾಖಲೆ
ಈ ಅಮೋಘ ಬ್ಯಾಟಿಂದ್ ಪ್ರದರ್ಶನದ ಮೂಲಕ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಬೃಹತ್ ಮೊತ್ತದ ದಾಖಲೆ ನಿರ್ಮಾಣ ಮಾಡಿದ್ದು ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿಯೂ ಟಿ20 ಪಂದ್ಯದಲ್ಲಿ ಗರಿಷ್ಛ ಮೊತ್ತ ಪೇರಿಸಿದ ತಂಡ ಎಂಬ ಕೀರ್ತಿಗೂ ಭಾಜನವಾಯಿತು. ಇದಕ್ಕೂ ಮೊದಲು ಜೋಹನ್ಸ್ ಬರ್ಗ್ ನಲ್ಲಿ 2015ರಲ್ಲಿ ವೆಸ್ಟ್ ಇಂಡೀಸ್ ತಂಡ ಗಳಿಸಿದ್ದ 236 ರನ್ ಗಳು ಈ ವರೆಗಿನ ಆಫ್ರಿಕಾ ವಿರುದ್ಧ ಗರಿಷ್ಠ ಮೊತ್ತ ಎಂಬ ದಾಖಲೆಯಲ್ಲಿತ್ತು. ಈ ದಾಖಲೆಯನ್ನು ಭಾರತ ಇದೀಗ ಹಿಂದಿಕ್ಕಿದೆ.

2nd T20I STAT: India 237/3, Highest total vs South Africa in T20Is
237/3 Ind Guwahati 2022 *
236/6 WI Joburg 2015
234/6 Eng Bristol 2022
230/8 Eng Mumbai WS 2016

ಹೀನಾಯ ದಾಖಲೆ  ಬರೆದ ಆಫ್ರಿಕನ್ ಬೌಲರ್ಸ್
ಇದೇ ಪಂದ್ಯದಲ್ಲಿ ಭಾರತೀಯ ಬ್ಯಾಟರ್ ಗಳಿಂದ ಅಕ್ಷರಶಃ  ದಂಡನೆಗೆ ಗುರಿಯಾದ ಆಫ್ರಿಕಾ ಬೌಲರ್ ಗಳು ಹೀನಾಯ ದಾಖಲೆಯನ್ನು ಬರೆದಿದ್ದಾರೆ. ಈ ಪಂದ್ಯದ ಹೀನಾಯ ಪ್ರದರ್ಶನದ ಮೂಲಕ ಆಫ್ರಿಕಾ ವೇಗಿಗಳು 2ನೇ ಕಳಪೆ ಪ್ರದರ್ಶನ ಎಂಬ ಕುಖ್ಯಾತಿಗೆ ಭಾಜನರಾಗಿದ್ದಾರೆ. 2015ರಲ್ಲಿ ಆಫ್ರಿಕನ್ ವೇಗಿಗಗಳು ವೆಸ್ಟ್ ವಿಂಡೀಸ್ ವಿರುದ್ಧ 13.50 ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದರು. ಆಫ್ರಿಕಾ ವೇಗಿಗಳ ಕಳಪೆ ಪ್ರದರ್ಶನವಾಗಿದ್ದು, ಇದರ ಬಳಿಕದ ಸ್ಥಾನದಲ್ಲಿ ಇಂದಿನ ಪಂದ್ಯವಿದ್ದು, ಈ ಪಂದ್ಯದಲ್ಲಿ 13.40 ರನ್ ಸರಾಸರಿಯಲ್ಲಿ ರನ್ ಬಿಟ್ಟುಕೊಡುವ ಮೂಲಕ 2ನೇ ಕಳಪೆ ಪ್ರದರ್ಶನ ಎಂಬ ಕುಖ್ಯಾತಿಗೆ ಭಾಜನರಾಗಿದ್ದಾರೆ. ಈ ಪಂದ್ಯದಲ್ಲಿ ಬರೊಬ್ಬರಿ 15 ಓವರ್ ಗಳಲ್ಲಿ ಆಪ್ರಿಕಾ ವೇಗಿಗಳು ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ.

Worst ER for SA pacers in a T20I (Minimum 10 overs)
13.50 WI Joburg 2015
13.40 Ind Guwahati 2022 *
13.02 Eng Mumbai WS 2016
15 overs by SA pacers today is the most by them in a T20I without taking a wicket.

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com