3ನೇ ಏಕದಿನ: ಭಾರತೀಯ ಬೌಲರ್ ಗಳ ಎದುರು ತಿಣುಕಾಡಿದ ಆಫ್ರಿಕಾ, ಮತ್ತೊಂದು ಹೀನಾಯ ದಾಖಲೆ

ಭಾರತದ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಕೇವಲ 99 ರನ್ ಗಳಿಗೆ ಆಲೌಟ್ ಆಗುವ ಮೂಲಕ ಪ್ರವಾಸಿ ದಕ್ಷಿಣ ಆಪ್ರಿಕಾ ತಂಡ ಮತ್ತೊಂದು ಹೀನಾಯ ದಾಖಲೆ ಬರೆದಿದೆ.
ವಿಕೆಟ್ ಪಡೆದ ಭಾರತೀಯ ಬೌಲರ್ ಗಳು
ವಿಕೆಟ್ ಪಡೆದ ಭಾರತೀಯ ಬೌಲರ್ ಗಳು

ನವದೆಹಲಿ: ಭಾರತದ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಕೇವಲ 99 ರನ್ ಗಳಿಗೆ ಆಲೌಟ್ ಆಗುವ ಮೂಲಕ ಪ್ರವಾಸಿ ದಕ್ಷಿಣ ಆಪ್ರಿಕಾ ತಂಡ ಮತ್ತೊಂದು ಹೀನಾಯ ದಾಖಲೆ ಬರೆದಿದೆ.

ಹೌದು.. ಇಂದು ದೆಹಲಿ ಅರುಣ್ ಜೇಟ್ಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಕುಲದೀಪ್ ಯಾದವ್ ಮತ್ತು ಭಾರತೀಯ ಬೌಲರ್ ಗಳ ಸಾಂಘಿಕ ಹೋರಾಟಕ್ಕೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡ ಕೇವಲ 27.1 ಓವರ್ ನಲ್ಲಿ 99 ರನ್ ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ದಕ್ಷಿಣ ಆಫ್ರಿಕಾ ತಂಡ ಮತ್ತೊಂದು ಹೀನಾಯ ದಾಖಲೆ ಬರೆದಿದೆ. ಏಕದಿನ ಕ್ರಿಕೆಟ್ ನಲ್ಲಿ ಆಫ್ರಿಕಾದ ಮೂರನೇ ಕಳಪೆ ಮೊತ್ತ ಎಂಬ ಹೀನಾಯ ದಾಖಲೆ ಬರೆದಿದೆ.

1993ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಹರಿಣಗಳು 69ರನ್ ಗೆ ಅಲೌಟ್ ಆಗಿದ್ದರು. ಇದು ಏಕದಿನ ಕ್ರಿಕೆಟ್ ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಕಳಪೆ ಪ್ರದರ್ಶನ ಎಂಬ ಕುಖ್ಯಾತಿ ಪಡೆದಿದೆ. ಬಳಿಕ 2008ರಲ್ಲಿ ನಾಟಿಂಗ್ ಹ್ಯಾಮ್ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಫ್ರಿಕನ್ನರು 83ರನ್ ಗಳಿಗೆ ಆಲೌಟ್ ಅಗಿದ್ದರು. ಇದು ಅವರ ಏಕದಿನ ಕ್ರಿಕೆಟ್ ಇತಿಹಾಸದ ಏರಡನೇ ಕಳಪೆ ಪ್ರದರ್ಶನವಾಗಿದೆ. ಇನ್ನು ಇದೇ ವರ್ಷ ಅಂದರೆ 2022 ಮ್ಯಾಂಚೆಸ್ಟರ್ ನಲ್ಲಿ ಇಂಗ್ಲೆಂಡ್ ವಿರುದ್ದ ಪಂದ್ಯದಲ್ಲಿ ಮತ್ತೆ 83 ರನ್ ಗಳಿಗೆ ಆಫ್ರಿಕಾ ಆಲೌಟ್ ಆಗಿತ್ತು. 

ಇದೀಗ ದೆಹಲಿಯಲ್ಲಿ ಭಾರತದ ವಿರುದ್ಧ 99 ರನ್ ಗಳಿಗೆ ಆಲೌಟ್ ಆಗುವ ಮೂಲಕ ನಾಲ್ಕನೇ ಬಾರಿಗೆ ಏರಡಂಕಿ ಮೊತ್ತ ದಾಖಲಿಸಿದ ಕುಖ್ಯಾತಿ ಪಡೆದಿದೆ. ಈ ಹಿಂದೆ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ತಂಡದ ಕನಿಷ್ಠ ಮೊತ್ತ ಎಂದರೆ ಅದು 1999ರಲ್ಲಿ ನೈರೋಬಿಯಲ್ಲಿ ನಡೆಗ ಪಂದ್ಯವಾಗಿತ್ತು. ಅಂದು 117ರನ್ ಗಳಿ ಆಫ್ರಿಕನ್ನರು ಆಲೌಟ್ ಆಗಿದ್ದರು.

Lowest totals for South Africa in ODIs
69 vs Aus Sydney 1993
83 vs Eng Nottingham 2008
83 vs Eng Manchester 2022
99 vs Ind Delhi 2022
Previous lowest vs India: 117 in Nairobi, 1999

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com