ಟಿ20 ವಿಶ್ವಕಪ್: ಒಂದೇ ಇನ್ನಿಂಗ್ಸ್ ನಲ್ಲಿ 3 ಅರ್ಧಶತಕ, ಅಪರೂಪದ ದಾಖಲೆ ಬರೆದ ಟೀಂ ಇಂಡಿಯಾ
ನೆದರ್ಲೆಂಡ್ ವಿರುದ್ಧ ಇಂದು ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12ನ ಗ್ರೂಪ್ 2ನ 2ನೇ ಪಂದ್ಯದಲ್ಲಿ ಭಾರತ ಮತ್ತೊಂದು ದಾಖಲೆ ಬರೆದಿದೆ.
Published: 27th October 2022 04:21 PM | Last Updated: 27th October 2022 05:09 PM | A+A A-

ಸಂಗ್ರಹ ಚಿತ್ರ
ಸಿಡ್ನಿ: ನೆದರ್ಲೆಂಡ್ ವಿರುದ್ಧ ಇಂದು ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12ನ ಗ್ರೂಪ್ 2ನ 2ನೇ ಪಂದ್ಯದಲ್ಲಿ ಭಾರತ ಮತ್ತೊಂದು ದಾಖಲೆ ಬರೆದಿದೆ.
ಇಂದಿನ ಪಂದ್ಯದಲ್ಲಿ ಭಾರತ 179 ರನ್ ಗಳನ್ನು ಪೇರಿಸಿದ್ದು, ಈ ಇನ್ನಿಂಗ್ಸ್ ನಲ್ಲಿ ಭಾರತದ ಪರ ಮೂರು ಅರ್ಧಶತಕಗಳು ಹರಿದುಬಂದವು. ಆರಂಭಿಕ ಆಘಾತದ ಹೊರತಾಗಿಯೂ ನಾಯಕ ರೋಹಿತ್ ಶರ್ಮಾ 39 ಎಸೆತಗಳಲ್ಲಿ 3 ಸಿಕ್ಸರ್, 4 ಬೌಂಡರಿ ಸಹಿತ 53ರನ್ ಸಿಡಿಸಿದರೆ, ಬಳಿಕ ಬ್ಯಾಟಿಂಗ್ ಅಬ್ಬರ ತೋರಿದ ವಿರಾಟ್ ಕೊಹ್ಲಿ ಕೇವಲ 44 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿಗಳ ನೆರವಿನಿಂದ ಅಜೇಯ 62 ರನ್ ಕಲೆಹಾಕಿದರು. ಇದು ಅವರ ಟೂರ್ನಿಯ ಸತತ 2ನೇ ಅರ್ಧಶತಕವಾಗಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್: 30 ಎಸೆತಗಳಲ್ಲಿ 65 ರನ್, 4ನೇ ಬಾರಿ 50ಕ್ಕೂ ಹೆಚ್ಚು ರನ್ ಜೊತೆಯಾಟ, ಕೊಹ್ಲಿ-ಸೂರ್ಯ ಕುಮಾರ್ ದಾಖಲೆ
ಕೊಹ್ಲಿ ಉತ್ತಮ ಸಾಥ್ ನೀಡಿದ ಸೂರ್ಯ ಕುಮಾರ್ ಯಾದವ್ ಕೇವಲ 25 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 7 ಬೌಂಡರಿಗಳ ಸಹಿತ 51ರನ್ ಸಿಡಿಸಿದರು. ಈ ಪಂದ್ಯ ಮೂಲಕ ಟಿ20 ವಿಶ್ವಕಪ್ ನಲ್ಲಿ ಮೂರನೇ ಬಾರಿಗೆ ಒಂದೇ ಇನ್ನಿಂಗ್ಸ್ ನಲ್ಲಿ ಮೂರು ಬ್ಯಾಟರ್ ಗಳು ಅರ್ಧಶತಕ ಸಿಡಿಸಿದಂತಾಗಿದೆ.
ಈ ಹಿಂದೆ 2007ರಲ್ಲಿ ಡರ್ಬನ್ ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಮೂವರು ಆಟಗಾರರು ಆರ್ಧಶತಕ ಸಿಡಿಸಿದ್ದರು. ಅಂದು ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಅಯ್ಕೆ ಮಾಡಿಕೊಂಡು ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 218ರನ್ ಪೇರಿಸಿತ್ತು. ಅಂದು ಭಾರತದ ಪರ ಗೌತಮ್ ಗಂಭೀರ್ (58ರನ್), ವೀರೇಂದ್ರ ಸೆಹ್ವಾಗ್ (68) ಮತ್ತು ಯುವರಾಜ್ ಸಿಂಗ್ (58 ರನ್) ಅರ್ಧಶತಕ ಗಳಿಸಿದ್ದರು. ಅಂದಿನ ಪಂದ್ಯವನ್ನು ಭಾರತ ತಂಡ 18ರನ್ ಗಳ ಅಂತರದಲ್ಲಿ ಗೆದ್ದು ಬೀಗಿತ್ತು.
ಇದನ್ನೂ ಓದಿ: ಟಿ20 ವಿಶ್ವಕಪ್ ನಲ್ಲಿ ಗರಿಷ್ಠ ರನ್: ಕ್ರಿಸ್ ಗೇಯ್ಲ್ ದಾಖಲೆ ಮುರಿದ ವಿರಾಟ್ ಕೊಹ್ಲಿ
ಬಳಿಕ 2016ರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾದ ಮೂವರು ಬ್ಯಾಟರ್ ಗಳು ಅರ್ಧಶತಕ ಸಿಡಿಸಿದ್ದರು. ಅಂದು ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ದ.ಆಫ್ರಿಕಾ ತಂಡ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 229ರನ್ ಕಲೆಹಾಕಿತ್ತು. ಈ ಪೈಕಿ ಆಫ್ರಿಕಾದ ಹಶೀಂ ಆಮ್ಲಾ (58), ಕ್ವಿಂಟನ್ ಡಿ ಕಾಕ್ (52) ಮತ್ತು ಜೆಪಿ ಡುಮಿನಿ (ಅಜೇಯ 54) ಅರ್ಧಶತಕ ಸಿಡಿಸಿದ್ದರು. ಅಂದಿನ ಪಂದ್ಯವನ್ನು ಇಂಗ್ಲೆಂಡ್ ತಂಡ 2 ವಿಕೆಟ್ ಗಳ ಅಂತರದಲ್ಲಿ ವಿರೋಚಿತವಾಗಿ ಗೆದ್ದಿತ್ತು.
ಬಳಿಕ ಇಂದು ಭಾರತ ಮೂವರು ಆಟಗಾರರು ನೆದರ್ಲೆಂಡ್ ವಿರುದ್ಧ ಆರ್ಧಶತಕ ಸಿಡಿಸಿದ್ದಾರೆ.
STAT: Three individual 50+ scores in an innings in T20 World Cup
Ind vs Eng Durban 2007
SA vs Eng Mumbai WS 2016
Ind vs Net Sydney 2022 *