ಟಿ20 ವಿಶ್ವಕಪ್: ಅಭ್ಯಾಸ ಪಂದ್ಯಗಳಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ವಿರುದ್ಧ ಸೆಣೆಸಲಿದೆ!
ದುಬೈ: ಟಿ20 ವಿಶ್ವಕಪ್ ಅಭ್ಯಾಸ ಪಂದ್ಯಗಳಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಎದುರಿಸಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಗುರುವಾರ ಪ್ರಕಟಿಸಿದೆ.
ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಮುನ್ನ ಐಸಿಸಿ ಇಂದು ಎಲ್ಲಾ 16 ತಂಡಗಳ ಅಭ್ಯಾಸ ಪಂದ್ಯಗಳನ್ನು ಪ್ರಕಟಿಸಿದೆ.
ಮೊದಲ ಸುತ್ತಿನ ತಂಡಗಳು ಮೆಲ್ಬೋರ್ನ್‌ನಲ್ಲಿ ತಮ್ಮ ಸಿದ್ಧತೆಗಳನ್ನು ಪ್ರಾರಂಭಿಸುತ್ತವೆ. ಅಕ್ಟೋಬರ್ 10-13ರ ನಡುವೆ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ಮತ್ತು ಜಂಕ್ಷನ್ ಓವಲ್ ನಡುವೆ ಪಂದ್ಯಗಳನ್ನು ವಿಭಜಿಸಲಾಗಿದೆ.
ಸೂಪರ್ 12 ಹಂತದಲ್ಲಿ ಆಡಲಿರುವ ತಂಡಗಳು ಅಕ್ಟೋಬರ್ 17 ಮತ್ತು 19ರಂದು ಬ್ರಿಸ್ಬೇನ್‌ನಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿವೆ. ಈ ಪಂದ್ಯಗಳು ದಿ ಗಬ್ಬಾ ಮತ್ತು ಅಲನ್ ಬಾರ್ಡರ್ ಫೀಲ್ಡ್‌ನಲ್ಲಿ ನಡೆಯಲಿವೆ.
ಭಾರತ ತನ್ನ ಅಭ್ಯಾಸ ಪಂದ್ಯಗಳಲ್ಲಿ ಅಕ್ಟೋಬರ್ 17ರಂದು ಆಸ್ಟ್ರೇಲಿಯಾ ಮತ್ತು ಅಕ್ಟೋಬರ್ 19ರಂದು ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ.
ಐಸಿಸಿ ಪುರುಷರ T20 ವಿಶ್ವಕಪ್ 2022 ಟೂರ್ನಿ ಅಕ್ಟೋಬರ್ 16ರಂದು ಜಿಲಾಂಗ್‌ನ ಕಾರ್ಡಿನಿಯಾ ಪಾರ್ಕ್ ಸ್ಟೇಡಿಯಂನಲ್ಲಿ ಶ್ರೀಲಂಕಾ ನಮೀಬಿಯಾ ನಡುವಿನ ಪಂದ್ಯದ ಮೂಲಕ ಪ್ರಾರಂಭಗೊಳ್ಳಲಿದೆ.
ICC ಪುರುಷರ T20 ವಿಶ್ವಕಪ್ 2022 ಅಭ್ಯಾಸ ಪಂದ್ಯಗಳು: (ಎಲ್ಲಾ ಸಮಯಗಳು ಸ್ಥಳೀಯವಾಗಿವೆ):
* 10 ಅಕ್ಟೋಬರ್ - ವೆಸ್ಟ್ ಇಂಡೀಸ್ ವಿರುದ್ಧ UAE, ಜಂಕ್ಷನ್ ಓವಲ್, ಮಧ್ಯಾಹ್ನ 11 ಗಂಟೆ
* 10 ಅಕ್ಟೋಬರ್ - ಸ್ಕಾಟ್ಲೆಂಡ್ v ನೆದರ್ಲ್ಯಾಂಡ್ಸ್, ಜಂಕ್ಷನ್ ಓವಲ್, ಮಧ್ಯಾಹ್ನ 3 ಗಂಟೆ
* 10 ಅಕ್ಟೋಬರ್ - ಶ್ರೀಲಂಕಾ ವಿರುದ್ಧ ಜಿಂಬಾಬ್ವೆ, MCG, ಸಂಜೆ 7 ಗಂಟೆ
* 11 ಅಕ್ಟೋಬರ್ - ನಮೀಬಿಯಾ ವಿರುದ್ಧ ಐರ್ಲೆಂಡ್, MCG, ಸಂಜೆ 7 ಗಂಟೆ
* 12 ಅಕ್ಟೋಬರ್ - ವೆಸ್ಟ್ ಇಂಡೀಸ್ ವಿರುದ್ಧ ನೆದರ್ಲ್ಯಾಂಡ್ಸ್, MCG, ಸಂಜೆ 7 ಗಂಟೆ
* 13 ಅಕ್ಟೋಬರ್ - ಜಿಂಬಾಬ್ವೆ ವಿರುದ್ಧ ನಮೀಬಿಯಾ, ಜಂಕ್ಷನ್ ಓವಲ್, ಬೆಳಗ್ಗೆ 11:00 ಗಂಟೆ
* 13 ಅಕ್ಟೋಬರ್ - ಶ್ರೀಲಂಕಾ v ಐರ್ಲೆಂಡ್, ಜಂಕ್ಷನ್ ಓವಲ್, ಮಧ್ಯಾಹ್ನ 3:00 ಗಂಟೆ
* 13 ಅಕ್ಟೋಬರ್ - ಸ್ಕಾಟ್ಲೆಂಡ್ ವಿರುದ್ಧ UAE, MCG, ರಾತ್ರಿ 7:00 ಗಂಟೆ
* 17 ಅಕ್ಟೋಬರ್ - ಆಸ್ಟ್ರೇಲಿಯಾ ವಿರುದ್ಧ ಭಾರತ, ಗಬ್ಬಾ, ಮಧ್ಯಾಹ್ನ 2:00 ಗಂಟೆ
* 17 ಅಕ್ಟೋಬರ್ - ನ್ಯೂಜಿಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ, ಅಲನ್ ಬಾರ್ಡರ್ ಫೀಲ್ಡ್, ಮಧ್ಯಾಹ್ನ 2:00 ಗಂಟೆ
* 17 ಅಕ್ಟೋಬರ್ - ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ, ಗಬ್ಬಾ, ಸಂಜೆ 6:00 ಗಂಟೆ
* 17 ಅಕ್ಟೋಬರ್ - ಅಫ್ಘಾನಿಸ್ತಾನ ವಿರುದ್ಧ ಬಾಂಗ್ಲಾದೇಶ, ಅಲನ್ ಬಾರ್ಡರ್ ಫೀಲ್ಡ್, ಸಂಜೆ 6:00 ಗಂಟೆ
* 19 ಅಕ್ಟೋಬರ್ - ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ, ಗಬ್ಬಾ, ಮಧ್ಯಾಹ್ನ 1:00 ಗಂಟೆ
* 19 ಅಕ್ಟೋಬರ್ - ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕಾ, ಅಲನ್ ಬಾರ್ಡರ್ ಫೀಲ್ಡ್, ಸಂಜೆ 6:00 ಗಂಟೆ
* 19 ಅಕ್ಟೋಬರ್ - ನ್ಯೂಜಿಲೆಂಡ್ ವಿರುದ್ಧ ಭಾರತ, ಗಬ್ಬಾ, ಸಂಜೆ 6:00 ಗಂಟೆ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ