3ನೇ ಏಕದಿನ ಪಂದ್ಯ: ವಿಂಡೀಸ್ ವಿರುದ್ಧ ಭರ್ಜರಿ ಬ್ಯಾಟಿಂಗ್, ಒಂದೇ ಒಂದು ಶತಕವಿಲ್ಲ.. ಆದರೂ ಹಲವು ದಾಖಲೆ!

ತನ್ನ ಭರ್ಜರಿ ಬ್ಯಾಟಿಂಗ್ ಮೂಲಕ ವಿಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯವನ್ನು ಭಾರತ ತಂಡ ಜಯಿಸಿದ್ದು, ಈ ಜಯದ ಮೂಲಕ ಟೀಂ ಇಂಡಿಯಾ ತನ್ನ ತೆಕ್ಕೆಗೆ ಹಲವು ದಾಖಲೆಗಳನ್ನು ಸೇರಿಸಿಕೊಂಡಿದೆ.
ಭಾರತಕ್ಕೆ ದಾಖಲೆಯ ಜಯ
ಭಾರತಕ್ಕೆ ದಾಖಲೆಯ ಜಯ

ಟ್ರಿನಿಡಾಡ್: ತನ್ನ ಭರ್ಜರಿ ಬ್ಯಾಟಿಂಗ್ ಮೂಲಕ ವಿಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯವನ್ನು ಭಾರತ ತಂಡ ಜಯಿಸಿದ್ದು, ಈ ಜಯದ ಮೂಲಕ ಟೀಂ ಇಂಡಿಯಾ ತನ್ನ ತೆಕ್ಕೆಗೆ ಹಲವು ದಾಖಲೆಗಳನ್ನು ಸೇರಿಸಿಕೊಂಡಿದೆ.

ಹೌದು.. ಮಂಗಳವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 200 ರನ್ ಗಳ ಅಂತರದ ಭರ್ಜರಿ ಜಯ ದಾಖಲಿಸಿದ್ದು, ಅಚ್ಚರಿ ಎಂದರೆ ಭಾರತ ತಂಡ 351 ರನ್ ಗಳ ಬೃಹತ್ ಮೊತ್ತ ಪೇರಿಸಿದ್ದ ಈ ಪಂದ್ಯದಲ್ಲಿ ಯಾವುಬ್ಬ ಬ್ಯಾಟರ್ ಕೂಡ ಶಕತ ಸಿಡಿಸದೇ ಇರುವುದು ದಾಖಲೆಗೆ ಕಾರಣವಾಗಿದೆ.

ಏಕದಿನ ಪಂದ್ಯದಲ್ಲಿ ಯಾವೊಬ್ಬ ಆಟಗಾರ ಕೂಡ ಶತಕ ಸಿಡಿಸದೇ ಗರಿಷ್ಠ ರನ್ ದಾಖಲಾದ ಮೊದಲ ಪಂದ್ಯ ಎಂಬ ಕೀರ್ತಿಗೆ ನಿನ್ನೆಯ ಪಂದ್ಯ ದಾಖಲಾಗಿದೆ. ಈ ಹಿಂದೆ 2005ರಲ್ಲಿ ನಾಗಪುರದಲ್ಲಿ ನಡೆದ ಪಂದ್ಯದಲ್ಲೂ ಭಾರತ ಇಂತಹುದೇ ದಾಖಲೆ ನಿರ್ಮಿಸಿತ್ತು. ಅಂದು ತಂಡದ ಯಾವೊಬ್ಬ ಆಟಗಾರ ಕೂಡ ಶತಕ ಸಿಡಿಸದೇ ಇದ್ದರೂ ತಂಡದ ಮೊತ್ತ 350 ರನ್ ಗಳಾಗಿತ್ತು. ಇದಕ್ಕೂ ಮೊದಲು 2004ರಲ್ಲಿ ಕರಾಚಿಯಲ್ಲೂ ಭಾರತ ಇಂತಹುದೇ ದಾಖಲೆ ಬರೆದಿದ್ದು ಅಂದು ಪಾಕಿಸ್ತಾನದ ವಿರುದ್ಧ ಭಾರತ ತಂಡ 349 ರನ್ ಪೇರಿಸಿತ್ತು. ಅದೇ ವರ್ಷ ಢಾಕಾದಲ್ಲಿ ಬಾಂಗ್ಲಾದೇಶ ವಿರುದ್ಧ 348 ರನ್ ಪೇರಿಸಿತ್ತು.

Highest ODI totals for India without an individual 100
351/5 vs WI Tarouba 2023
350/6 vs SL Nagpur 2005
349/7 vs Pak Karachi 2004
348/5 vs Ban Dhaka 2004

ಸತತ ದ್ವಿಪಕ್ಷೀಯ ಸರಣಿ ಗೆಲವು ಭಾರತಕ್ಕೆ ಅಗ್ರ ಸ್ಥಾನ
ಇನ್ನು ಹಾಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿ ಜಯ ಭಾರತಕ್ಕೆ ಸತತ 13ನೇ ಏಕದಿನ ಸರಣಿಯಾಗಿದ್ದು, 2007ರಲ್ಲಿ ಆರಂಭವಾಗಿದ್ದ ಟೀಂ ಇಂಡಿಯಾ ಏಕದಿನ ಸರಣಿ ಜಯದ ಜೈತ್ರ ಯಾತ್ರೆ ಇನ್ನೂ ಮುಂದುವರೆದಿದೆ. ಇನ್ನು ಈ ಪಟ್ಟಿಯಲ್ಲಿ ತಂಡವೊಂದರ ವಿರುದ್ಧ ಸತತ ಅತೀ ಹೆಚ್ಚು ಏಕದಿನ ಸರಣಿ ಗೆದ್ದ ಶ್ರೇಯ ಭಾರತಕ್ಕೆ ದಕ್ಕಿದೆ. 2ನೇ ಸ್ಥಾನದಲ್ಲಿ ಪಾಕಿಸ್ತಾನವಿದ್ದು 1996ರಿಂದ 2021ರವರೆಗೂ ಪಾಕಿಸ್ತಾನ ಜಿಂಬಾಬ್ವೆ ವಿರುದ್ಧ 11 ಸರಣಿಗಳನ್ನು ಜಯಿಸಿತ್ತು. 2021ರಲ್ಲಿ ಈ ಸರಣಿ ಜಯ ಕೊಂಡಿ ಕಳಚಿತ್ತು. 3ನೇ ಸ್ಥಾನದಲ್ಲೂ ಪಾಕಿಸ್ತಾನ ಮತ್ತು ವಿಂಡೀಸ್ ತಂಡದ ದಾಖಲೆಯಿದ್ದು, 1999ರಿಂದ 2022ರವರೆಗೂ ಪಾಕಿಸ್ತಾನ ವಿಂಡೀಸ್ ವಿರುದ್ಧ 10 ಏಕದಿನ ಸರಣಿ ಜಯಿಸಿದೆ. 4ನೇ ಸ್ಥಾನದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳಿದ್ದು, 2007 ರಿಂದ 2023ರ ಅವಧಿಯಲ್ಲಿ ಭಾರತ ಶ್ರೀಲಂಕಾ ತಂಡದ ವಿರುದ್ಧ 10 ಸರಣಿಗಳನ್ನು ಜಯಿಸಿದೆ.

Most consecutive bilateral ODI series wins against a team
13*India vs West Indies (2007-23)
11 Pakistan vs Zimbabwe (1996-21)
10 Pakistan vs West Indies (1999-22)
10 India vs Sri Lanka (2007-23)

ವಿಂಡೀಸ್ ವಿರುದ್ಧ 2ನೇ ಅತೀ ದೊಡ್ಡ ಗೆಲುವು (ರನ್ ಲೆಕ್ಕಾಚಾರದಲ್ಲಿ)
ಇನ್ನು ರನ್ ಗಳ ಲೆಕ್ಕಾಚಾರದಲ್ಲಿ ವಿಂಡೀಸ್ ವಿರುದ್ಧ ನಿನ್ನೆ ಸಿಕ್ಕ 200 ರನ್ ಗಳ ಗೆಲುವು ಭಾರತದ ವಿಂಡೀಸ್ ವಿರುದ್ಧದ 2ನೇ ಅತೀ ದೊಡ್ಡ ಗೆಲುವಾಗಿದೆ. ಇದಕ್ಕೂ ಮೊದಲು 2018ರಲ್ಲಿ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಭಾರತ 224 ರನ್ ಗಳ ಅಂತರದ ಗೆಲುವು ಸಾಧಿಸಿತ್ತು. ಇದು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನಿನ್ನೆಯ ಪಂದ್ಯ 2ನೇ ಸ್ಥಾನದಲ್ಲಿದ್ದು, 2007ರಲ್ಲಿ ವಡೋದರಾದಲ್ಲಿ ಸಿಕ್ಕ 160ರನ್ ಗಳ ಜಯ ಭಾರತದ ಪರ 3ನೇ ಅತೀ ದೊಡ್ಡ ಗೆಲುವಾಗಿದೆ. 2011ರಲ್ಲಿ ಇಂದೋರ್ ನಲ್ಲಿ ಸಿಕ್ಕ 153 ರನ್ ಗಳ ಗೆಲುವು 4ನೇ ಅತೀ ದೊಡ್ಡ ಗೆಲುವಾಗಿದೆ.

Biggest ODI wins for India vs West Indies (by runs)
224 runs Mumbai BS 2018
200 runs Tarouba 2023 *
160 runs Vadodara 2007
153 runs Indore 2011

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com