ಕಳೆದ 5 ವರ್ಷಗಳಲ್ಲಿ ಬಿಸಿಸಿಐ 4,298 ಕೋಟಿ ರೂ. ಆದಾಯ ತೆರಿಗೆ ಪಾವತಿಸಿದೆ: ಕೇಂದ್ರ

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಎಂದರೆ ಅದು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI). ಇಂತಹ ಪರಿಸ್ಥಿತಿಯಲ್ಲಿ ಮಂಡಳಿಯ ತೆರಿಗೆಯೂ ಹೆಚ್ಚು ಪಾವತಿಸುವ ನಿರೀಕ್ಷೆಯಿದೆ ಮತ್ತು ಇದು ಸತ್ಯವೂ ಆಗಿದೆ. 
ಬಿಸಿಸಿಐ
ಬಿಸಿಸಿಐ

ನವದೆಹಲಿ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಎಂದರೆ ಅದು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI). ಇಂತಹ ಪರಿಸ್ಥಿತಿಯಲ್ಲಿ ಮಂಡಳಿಯ ತೆರಿಗೆಯೂ ಹೆಚ್ಚು ಪಾವತಿಸುವ ನಿರೀಕ್ಷೆಯಿದೆ ಮತ್ತು ಇದು ಸತ್ಯವೂ ಆಗಿದೆ. 

ಕಳೆದ ಐದು ವರ್ಷಗಳಲ್ಲಿ ಬಿಸಿಸಿಐ ಕೇವಲ 100 ಅಥವಾ 200 ಕೋಟಿ ರೂಪಾಯಿ ಪಾವತಿಸಿಲ್ಲ, ಅದು ಆದಾಯ ತೆರಿಗೆಯಾಗಿ ಬರೋಬ್ಬರಿ 4,298 ರೂಪಾಯಿ ಪಾವತಿಸಿದೆ. ಭಾರತೀಯ ಕ್ರಿಕೆಟ್ ಮಂಡಳಿಯು ತೆರಿಗೆ ಮುಕ್ತವಾಗಿರಬೇಕು. ಆದರೆ ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ, ಬಿಸಿಸಿಐ ತನ್ನ ಆದಾಯ ತೆರಿಗೆ ಬಾಧ್ಯತೆಗಳನ್ನು ಸತತವಾಗಿ ಪೂರೈಸಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ರಾಜ್ಯಸಭೆಗೆ ತಿಳಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಬಿಸಿಸಿಐ ಆದಾಯ ತೆರಿಗೆಯಲ್ಲಿ ಒಟ್ಟು 4,298.12 ಕೋಟಿ ರೂಪಾಯಿ ಪಾವತಿಸಿದೆ. ಭಾರತೀಯ ಕ್ರಿಕೆಟ್ ಮಂಡಳಿಯು 2020-21ರಲ್ಲಿ ರೂ. 844.92 ಕೋಟಿ, 2019-20 ರಲ್ಲಿ ರೂ. 882.29 ಕೋಟಿಗಳು, 2018-19 ರಲ್ಲಿ ರೂ. 815.08 ಕೋಟಿಗಳು, 2017-18 ರಲ್ಲಿ ರೂ. 596.63 ಕೋಟಿಗಳು ಮತ್ತು ಇತ್ತೀಚಿನ ಆರ್ಥಿಕ ವರ್ಷದಲ್ಲಿ ರೂ 1,159.20 ಕೋಟಿಗಳನ್ನು ಹೆಚ್ಚುವರಿಯಾಗಿ ಆದಾಯ ತೆರಿಗೆ ಪಾವತಿಸಿದೆ ಎಂದರು. ರಾಜ್ಯಸಭಾ ಸದಸ್ಯ ಅನಿಲ್ ದೇಸಾಯಿ ಕೇಳಿದ ಪ್ರಶ್ನೆಗೆ ಉತ್ತರವಾಗಿ ಸಚಿವರು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪಂಕಜ್ ಚೌಧರಿ, ಜಾಗತಿಕವಾಗಿ ಕ್ರೀಡಾ ಸಂಸ್ಥೆಗಳಿಗೆ ಸಂಬಂಧಿಸಿದ ದತ್ತಾಂಶವನ್ನು ಸರ್ಕಾರವು ನಿರ್ವಹಿಸುವುದಿಲ್ಲ. ಆದರೂ, ಬಿಸಿಸಿಐ ಕಳೆದ ಐದು ವರ್ಷಗಳಲ್ಲಿ ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್ಸ್ ಪ್ರಕಾರ ಆದಾಯ ಮತ್ತು ವೆಚ್ಚದ ವಿವರಗಳನ್ನು ಪ್ರಸ್ತುತಪಡಿಸಿದರು. ಇದು ಬಿಸಿಸಿಐ 2021-22 ಹಣಕಾಸು ವರ್ಷದಲ್ಲಿಯೇ 4542 ಕೋಟಿ ರೂ.ಗಳ ಹೆಚ್ಚುವರಿ ಮೊತ್ತವನ್ನು ಹೊಂದಿದೆ ಎಂದು ಬಹಿರಂಗಪಡಿಸಿತು. 2020-21 ಮತ್ತು 2019-20ರಲ್ಲಿ ಇದು ಕ್ರಮವಾಗಿ 1,650 ಕೋಟಿ ಮತ್ತು 2,700 ಕೋಟಿ ರೂಪಾಯಿ ಆದಾಯ ಹೊಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com