ಐಸಿಸಿ ರ‍್ಯಾಂಕಿಂಗ್: ಶುಭ್ ಮನ್ ಗಿಲ್, ರವಿ ಬಿಷ್ಣೋಯ್ ಗೆ ಅಗ್ರಸ್ಥಾನ; ಐದು ಫಾರ್ಮ್ಯಾಟ್ ಗಳಲ್ಲಿ ಭಾರತೀಯರೇ ಟಾಪ್!

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಮುಕ್ತಾಯದ ಬೆನ್ನಲ್ಲೇ ಐಸಿಸಿ ರ‍್ಯಾಂಕಿಂಗ್ ಬಿಡುಗಡೆಯಾಗಿದ್ದು, ಭಾರತದ ಆರಂಭಿಕ ಆಟಗಾರ ಶುಭ್ ಮನ್ ಗಿಲ್ ಮತ್ತು ಉದಯೋನ್ಮುಖ ಆಟಗಾರ ರವಿ ಬಿಷ್ಣೋಯ್ ಅಗ್ರ ಸ್ಥಾನಕ್ಕೇರಿದ್ದಾರೆ.
ಶುಭ್ ಮನ್ ಗಿಲ್ ಮತ್ತು ರವಿ ಬಿಷ್ಣೋಯ್
ಶುಭ್ ಮನ್ ಗಿಲ್ ಮತ್ತು ರವಿ ಬಿಷ್ಣೋಯ್

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಮುಕ್ತಾಯದ ಬೆನ್ನಲ್ಲೇ ಐಸಿಸಿ ರ‍್ಯಾಂಕಿಂಗ್ ಬಿಡುಗಡೆಯಾಗಿದ್ದು, ಭಾರತದ ಆರಂಭಿಕ ಆಟಗಾರ ಶುಭ್ ಮನ್ ಗಿಲ್ ಮತ್ತು ಉದಯೋನ್ಮುಖ ಆಟಗಾರ ರವಿ ಬಿಷ್ಣೋಯ್ ಅಗ್ರ ಸ್ಥಾನಕ್ಕೇರಿದ್ದಾರೆ.

ಐಸಿಸಿ ಪ್ರಕಟಿಸಿರುವ ನೂತನ ರ‍್ಯಾಂಕಿಂಗ್ (ICC Rankings) ಪಟ್ಟಿಯಲ್ಲಿ  ಟೀಮ್ ಇಂಡಿಯಾದ ಐವರು ಆಟಗಾರರು ಅಗ್ರಸ್ಥಾನದಲ್ಲಿದ್ದಾರೆ. ಅಂದರೆ ಇಲ್ಲಿ ಏಕದಿನ ಬ್ಯಾಟರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ ಶುಭ್​ಮನ್ ಗಿಲ್ ಅಗ್ರಸ್ಥಾನಕ್ಕೇರಿದ್ದರೆ, ಟಿ20 ಕ್ರಿಕೆಟ್​ ಬ್ಯಾಟರ್​ಗಳ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಮೊದಲ ಸ್ಥಾನದಲ್ಲಿದ್ದಾರೆ. 

ಅಂತೆಯೇ ಟೆಸ್ಟ್ ಬೌಲರ್​ಗಳ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್ ಟಾಪ್-1 ನಲ್ಲಿದ್ದರೆ, ಟೆಸ್ಟ್ ಆಲ್​ರೌಂಡರ್​​ಗಳ ರ‍್ಯಾಂಕಿಂಗ್​ನಲ್ಲಿ ರವೀಂದ್ರ ಜಡೇಜಾ ಅಗ್ರಸ್ಥಾನದಲ್ಲಿದ್ದಾರೆ. ಹಾಗೆಯೇ ಟಿ20 ಬೌಲರ್​ಗಳ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ರವಿ ಬಿಷ್ಣೋಯ್ ಮೊದಲ ಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಯುವ ಸ್ಪಿನ್ನರ್ ಬಿಷ್ಣೋಯ್ ಇದೀಗ ಅಫ್ಘಾನಿಸ್ತಾನದ ರಶೀದ್ ಖಾನ್​ ರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ. ಹೀಗಾಗಿ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಐದು ಆಟಗಾರರು ಅಗ್ರಸ್ಥಾನದಲ್ಲಿದ್ದಾರೆ.

ಉಳಿದಂತೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 223 ರನ್​ಗಳನ್ನು ಬಾರಿಸಿ ಅಬ್ಬರಿಸಿದ್ದ ರುತುರಾಜ್ ಗಾಯಕ್ವಾಡ್ ಟಿ20 ಕ್ರಿಕೆಟ್​ ರ‍್ಯಾಂಕಿಂಗ್​ನಲ್ಲಿ 7ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಟಿ20 ಆಲ್​ರೌಂಡರ್​ಗಳ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ಮೂರನೇ ಸ್ಥಾನದಲ್ಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com