ಮುಂಬೈನಲ್ಲಿ ಮತ್ತೊಂದು ಐಷಾರಾಮಿ ವಿಲ್ಲಾ ಖರೀದಿಸಿದ ವಿರಾಟ್ ಕೊಹ್ಲಿ!

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮುಂಬೈನ ಐಷಾರಾಮಿ ವಿಲ್ಲಾವೊಂದನ್ನು ಖರೀದಿಸಿದ್ದಾರೆ. ಫೆಬ್ರವರಿ 23ರಂದು ಮುಂಬೈನ ಆವಾಸ್ ಲಿವಿಂಗ್‌ನಲ್ಲಿ 2000 ಚದರ ಅಡಿ ವಿಲ್ಲಾವನ್ನು ಕೊಹ್ಲಿ ಖರೀದಿಸಿದ್ದಾರೆ. 
ಅನುಷ್ಕಾ-ಕೊಹ್ಲಿ
ಅನುಷ್ಕಾ-ಕೊಹ್ಲಿ
Updated on

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮುಂಬೈನ ಐಷಾರಾಮಿ ವಿಲ್ಲಾವೊಂದನ್ನು ಖರೀದಿಸಿದ್ದಾರೆ. ಫೆಬ್ರವರಿ 23ರಂದು ಮುಂಬೈನ ಆವಾಸ್ ಲಿವಿಂಗ್‌ನಲ್ಲಿ 2000 ಚದರ ಅಡಿ ವಿಲ್ಲಾವನ್ನು ಕೊಹ್ಲಿ ಖರೀದಿಸಿದ್ದಾರೆ. 

34 ವರ್ಷದ ಬ್ಯಾಟ್ಸ್‌ಮನ್‌ ಖರೀದಿಸಿರುವ ಐಷಾರಾಮಿ ಬಂಗಲೆಯ ಬೆಲೆ 6 ಕೋಟಿ ರೂ. ಆಗಿದ್ದು ಅಲಿಬಾಗ್ ಪ್ರದೇಶದಲ್ಲಿ ಇದು ಕೊಹ್ಲಿಯ ಎರಡನೇ ಆಸ್ತಿಯಾಗಿದೆ. ಈ ಹಿಂದೆ, ಅವರು ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಮುಂಬೈನ ವರ್ಲಿ ಪ್ರದೇಶದ ಓಂಕಾರ್ ಟವರ್ಸ್‌ನಲ್ಲಿ ಮನೆಯನ್ನು ಖರೀದಿಸಿದ್ದರು. ಅಲಿಬಾಗ್ ಪ್ರದೇಶದಲ್ಲಿರುವ ವಿರಾಟ್‌ನ ಈ ವಿಲ್ಲಾ ಕೂಡ ತುಂಬಾ ಐಷಾರಾಮಿಯಾಗಿದೆ.

ವಕೀಲ ಮಹೇಶ್ ಮ್ಹಾತ್ರೆ ಅವರು ಈ ಬಂಗಲೆಯನ್ನು ಅದರ ನೈಸರ್ಗಿಕ ಸೌಂದರ್ಯದಿಂದಾಗಿ ಇಷ್ಟಪಡುತ್ತಾರೆ ಎಂದು ಹೇಳಿದ್ದಾರೆ. ವಿರಾಟ್ ಅವರ ಹಿರಿಯ ಸಹೋದರ ವಿಕಾಸ್ ಕೊಹ್ಲಿ ಅವರು ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡುವ ಮೂಲಕ ನೋಂದಣಿ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ್ದಾರೆ.

ಕೊಹ್ಲಿ 36 ಲಕ್ಷ ರೂಪಾಯಿಗಳನ್ನು ಮುದ್ರಾಂಕ ಶುಲ್ಕವಾಗಿ ಪಾವತಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ವಕೀಲರು, ವಿರಾಟ್ ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಾಗಿ ತಂಡದೊಂದಿಗೆ ಇದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರ ಅನುಪಸ್ಥಿತಿಯಲ್ಲಿ, ಕೊಹ್ಲಿ ಸಹೋದರ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು.

ವಿರಾಟ್ ಕೊಹ್ಲಿ ಅಲಿಬಾಗ್ ಪ್ರದೇಶದಲ್ಲಿ ಖರೀದಿಸಿದ ಎರಡನೇ ಆಸ್ತಿ ಇದಾಗಿದೆ. ಇದಕ್ಕೂ ಮೊದಲು, ಸೆಪ್ಟೆಂಬರ್ 1, 2022 ರಂದು, ಅವರು ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಗಿರಾದ್ ಗ್ರಾಮದಲ್ಲಿ 36,059 ಚದರ ಅಡಿಯ ಐಷಾರಾಮಿ ಫಾರ್ಮ್ ಹೌಸ್ ಅನ್ನು ಖರೀದಿಸಿದ್ದರು. ಇದರ ಬೆಲೆ ಸುಮಾರು 19.24 ಕೋಟಿ ರೂ. ಆ ಸಮಯದಲ್ಲೂ ವಿರಾಟ್ ಸಹೋದರ ಇಡೀ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com