ಮೊದಲ ಟೆಸ್ಟ್: ವಿಂಡೀಸ್ ವಿರುದ್ಧ ಭರ್ಜರಿ ಬ್ಯಾಟಿಂಗ್; ವಿರಾಟ್ ಕೊಹ್ಲಿ ಹೊಸ ರೆಕಾರ್ಡ್, ಸೆಹ್ವಾಗ್ ದಾಖಲೆಯೂ ಧೂಳಿಪಟ!

ವೆಸ್ಟ್ ಇಂಡೀಸ್ ಪ್ರವಾಸದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ದಾಖಲಿಸಿದ್ದು, ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ರನ್ ಮೆಷಿನ್ ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಅಪರೂಪದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಡೊಮೆನಿಕಾ: ವೆಸ್ಟ್ ಇಂಡೀಸ್ ಪ್ರವಾಸದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ದಾಖಲಿಸಿದ್ದು, ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ರನ್ ಮೆಷಿನ್ ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಅಪರೂಪದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.

ಭಾರತದ ಅಗ್ರಗಣ್ಯ ಆಟಗಾರ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 76 ರನ್ ಗಳಿಸಿದರು. ಆರಂಭದಲ್ಲಿ ಯಶಸ್ವಿ ಜೈಸ್ವಾಲ್ ಜತೆ ಶತಕದ ಜೊತೆಯಾಟವಾಡಿದ ವಿರಾಟ್ ಬಳಿಕ ಜಡೇಜಾ ಜತೆ ಉತ್ತಮ ಸಾಥ್ ನೀಡಿದರು. ಈ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅವರು ಮಾಜಿ ಆಟಗಾರ ವಿರೆಂದ್ರ ಸೆಹ್ವಾಗ್ ಅವರ ದಾಖಲೆ ಮುರಿದು ಹೊಸ ಎಲೈಟ್ ಕ್ಲಬ್ ಸೇರಿದರು. ಭಾರತದ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಅಗ್ರ ಐದರ ಲಿಸ್ಟ್ ಗೆ ಸೇರಿದ್ದಾರೆ.

ವಿರಾಟ್ ಕೊಹ್ಲಿ ಅವರು 110 ಟೆಸ್ಟ್ ಪಂದ್ಯದಲ್ಲಿ 8515 ರನ್ ಗಳಿಸಿದ್ದಾರೆ. ಡೊಮಿನಿಕಾ ಟೆಸ್ಟ್ ವೇಳೆ ಅವರು ಸೆಹವಾಗ್ ದಾಖಲೆ ಮುರಿದರು. ಸೆಹವಾಗ್ ಅವರು ಟೆಸ್ಟ್ ನಲ್ಲಿ 8503 ರನ್ ಗಳಿಸಿದ್ದಾರೆ. ಭಾರತದ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದವರಲ್ಲಿ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ಅವರು 15921 ರನ್ ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿ ರಾಹುಲ್ ದ್ರಾವಿಡ್ (13265 ರನ್), ಮೂರನೇ ಸ್ಥಾನದಲ್ಲಿ ಸುನಿಲ್ ಗಾವಸ್ಕರ್ (10122 ರನ್ ) ಮತ್ತು ನಾಲ್ಕನೇ ಸ್ಥಾನದಲ್ಲಿ ವಿವಿಎಸ್ ಲಕ್ಷ್ಮಣ್ (8781 ರನ್) ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com