ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಈಗ ಸಾವಿರ ಕೋಟಿ ಒಡೆಯ: ಕ್ರಿಕೆಟ್ ಬಿಟ್ಟು ಏನೆಲ್ಲಾ ವ್ಯವಹಾರ ಮಾಡ್ತಾರೆ ಗೊತ್ತಾ?

ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸದ್ಯಕ್ಕೆ ವಿಶ್ವದ ಅತ್ಯಂತ ಜನಪ್ರಿಯ ಅಥ್ಲೀಟ್‌ಗಳಲ್ಲಿ ಒಬ್ಬರು. ಇನ್‌ಸ್ಟಾಗ್ರಾಮ್‌ನಲ್ಲಿ 252 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಕೊಹ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾರೆ. 

ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸದ್ಯಕ್ಕೆ ವಿಶ್ವದ ಅತ್ಯಂತ ಜನಪ್ರಿಯ ಅಥ್ಲೀಟ್‌ಗಳಲ್ಲಿ ಒಬ್ಬರು. ಇನ್‌ಸ್ಟಾಗ್ರಾಮ್‌ನಲ್ಲಿ 252 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಕೊಹ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾರೆ. 

ಸ್ಟಾಕ್ ಗ್ರೋ ಪ್ರಕಾರ, ಕೊಹ್ಲಿ 1,050 ಕೋಟಿ ರೂಪಾಯಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಇದು ಸದ್ಯದ ಅಂತರರಾಷ್ಟ್ರೀಯ ಕ್ರಿಕೆಟಿಗರಲ್ಲಿಯೇ ಅತ್ಯಧಿಕವಾಗಿದೆ. 34 ವರ್ಷದ ಅವರು ತಮ್ಮ 'A+' ಟೀಮ್ ಇಂಡಿಯಾ ಒಪ್ಪಂದದಿಂದ 7 ಕೋಟಿ ಗಳಿಸುತ್ತಾರೆ. ಅವರ ಪ್ರತಿ ಟೆಸ್ಟ್‌ಗೆ 15 ಲಕ್ಷ ರೂ., ODIನಿಂದ 6 ಲಕ್ಷ ರೂ. ಮತ್ತು T20 ಪಂದ್ಯಕ್ಕೆ 3 ಲಕ್ಷ ರೂ. ಪಡೆಯುತ್ತಾರೆ.

ಅಲ್ಲದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆಗಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಒಪ್ಪಂದದಿಂದ ವಾರ್ಷಿಕವಾಗಿ 15 ಕೋಟಿ ರೂ. ಗಳಿಸುತ್ತಾರೆ. ಅವರು ಅನೇಕ ಬ್ರಾಂಡ್‌ಗಳನ್ನು ಹೊಂದಿದ್ದಾರೆ ಮತ್ತು ಬ್ಲೂ ಟ್ರೈಬ್, ಯೂನಿವರ್ಸಲ್ ಸ್ಪೋರ್ಟ್ಸ್‌ಬಿಜ್, ಎಂಪಿಎಲ್ ಮತ್ತು ಸ್ಪೋರ್ಟ್ಸ್ ಕಾನ್ವೊ ಸೇರಿದಂತೆ ಏಳು ಸ್ಟಾರ್ಟ್-ಅಪ್‌ಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ.

ಕೊಹ್ಲಿ 18 ಬ್ರಾಂಡ್‌ಗಳ ರಾಯಭಾರಿಗಳಾಗಿದ್ದಾರೆ ಮತ್ತು ಪ್ರತಿ ಜಾಹೀರಾತಿನ ಚಿತ್ರೀಕರಣಕ್ಕಾಗಿ ವಾರ್ಷಿಕವಾಗಿ ರೂ. 7.50 ರಿಂದ 10 ಕೋಟಿ ಶುಲ್ಕವನ್ನು ವಿಧಿಸುತ್ತಾರೆ. ಬಾಲಿವುಡ್ ಮತ್ತು ಕ್ರೀಡಾ ಉದ್ಯಮದಲ್ಲಿಯೇ ಕೊಹ್ಲಿ ಪಡೆಯುತ್ತಿರುವ ಅತಿಹೆಚ್ಚು ಮೊತ್ತ. ಇಂತಹ ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳಿಂದ ಅವರು ಸುಮಾರು 175 ಕೋಟಿ ರೂಪಾಯಿ ಗಳಿಸುತ್ತಾರೆ.

ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್‌ನಲ್ಲಿ ಅವರು ಪ್ರತಿ ಪೋಸ್ಟ್‌ಗೆ ಕ್ರಮವಾಗಿ 8.9 ಕೋಟಿ ಮತ್ತು 2.5 ಕೋಟಿ ರೂಪಾಯಿಗಳನ್ನು ವಿಧಿಸುತ್ತಾರೆ. ಮುಂಬೈ (34 ಕೋಟಿ ರೂ.) ಮತ್ತು ಗುರುಗ್ರಾಮ (80 ಕೋಟಿ ರೂ.) ಗಳಲ್ಲಿ ಎರಡು ಮನೆಗಳನ್ನು ಹೊಂದಿದ್ದಾರೆ ಮತ್ತು 31 ರೂ. ಕೋಟಿ ಮೌಲ್ಯದ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

ಕ್ರಿಕೆಟ್ ಹೊರತುಪಡಿಸಿ ಕೊಹ್ಲಿ, ಇತರ ಕ್ರೀಡೆಗಳ ಮೇಲು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಇಂಡಿಯನ್ ಸೂಪರ್ ಲೀಗ್‌ನಲ್ಲಿ ಸ್ಪರ್ಧಿಸುವ ಎಫ್‌ಸಿ ಗೋವಾ, ಟೆನಿಸ್ ತಂಡ ಮತ್ತು ಕುಸ್ತಿ ತಂಡದ ಮಾಲೀಕತ್ವವನ್ನು ಹೊಂದಿದ್ದಾರೆ.

ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಕೊಹ್ಲಿ ಮೈದಾನಕ್ಕೆ ಮರಳುವ ನಿರೀಕ್ಷೆಯಿದೆ.

Related Stories

No stories found.

Advertisement

X
Kannada Prabha
www.kannadaprabha.com