ಐಪಿಎಲ್ 2023: ಸಿಎಸ್ ಕೆ ಟ್ರೋಫಿ ಗೆದ್ದ ಬಳಿಕ ಧೋನಿ ಗುಣಗಾನ ಮಾಡಿದ ಹಾರ್ದಿಕ್ ಪಾಂಡ್ಯ

ಗುಜರಾತಿನ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಐಪಿಎಲ್ 2023ರ ಫೈನಲ್ ಪಂದ್ಯದಲ್ಲಿ ಚೆನ್ನೈ ತಂಡ   ಗುಜರಾತ್ ಟೈಟನ್ಸ್  ವಿರುದ್ಧ 5 ವಿಕೆಟ್ ಗಳ ವಿರೋಚಿತ ಗೆಲುವು ಸಾಧಿಸಿತು.
ಧೋನಿ
ಧೋನಿ
Updated on

ಅಹಮದಾಬಾದ್: ಗುಜರಾತಿನ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಐಪಿಎಲ್ 2023ರ ಫೈನಲ್ ಪಂದ್ಯದಲ್ಲಿ ಚೆನ್ನೈ ತಂಡ  ಗುಜರಾತ್ ಟೈಟನ್ಸ್  ವಿರುದ್ಧ 5 ವಿಕೆಟ್ ಗಳ ವಿರೋಚಿತ ಗೆಲುವು ಸಾಧಿಸಿತು.

ಪಂದ್ಯದ ನಂತರ ಮಾತನಾಡಿದ  ಗುಜರಾತ್ ಟೈಟನ್ಸ್  ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಸಿಎಸ್ ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಹಾಡಿ ಹೊಗಳಿದರು.ಧೋನಿಗೆ ಪ್ರಶಸ್ತಿ ಗೆಲ್ಲುವುದು ಅದೃಷ್ಟವಿತ್ತು. ಒಳ್ಳೆಯರಿಗೆ ಯಾವಾಗಲೂ ಒಳ್ಳೆಯದೇ ಆಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು. 

ಇದನ್ನೂ ಓದಿ: ಬೃಹತ್ ಮೊತ್ತದ ಹೊರತಾಗಿಯೂ ಮುಗ್ಗರಿಸಿದ ಗುಜರಾತ್; ಚೆನ್ನೈ ಸೂಪರ್ ಕಿಂಗ್ಸ್ ಮುಡಿಗೆ ಐಪಿಎಲ್ 2023 ಟ್ರೋಫಿ
ನಾನು ಸೋಲುವುದಾದರೆ ಅವರೊಂದಿಗೆ ಸೋಲುತ್ತೇನೆ. ಒಳ್ಳೆಯ ವ್ಯಕ್ತಿಗಳಿಗೆ ಒಳ್ಳೆಯದೇ ಆಗುತ್ತದೆ. ಧೋನಿ ನನಗೆ ತಿಳಿದಿರುವ ಅತ್ಯುತ್ತಮ ವ್ಯಕ್ತಿಗಳಲ್ಲಿ ಒಬ್ಬರು. ದೇವರು ದಯೆ ತೋರಿದ್ದಾನೆ. ನನ್ನ ಮೇಲೆಯೂ ದಯೆ ತೋರಿದ್ದಾನೆ. ಆದರೆ, ಇಂದು ಅವರ ರಾತ್ರಿಯಾಗಿತ್ತು ಎಂದು  ಹೇಳಿದರು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com