ICC Cricket World Cup 2023: ದ.ಆಫ್ರಿಕಾ ವಿರುದ್ಧ ಭರ್ಜರಿ ಬೌಲಿಂಗ್, ದಾಖಲೆ ಮುರಿದ ರವೀಂದ್ರ ಜಡೇಜಾ, ಆದರೂ ಯುವರಾಜ್ ಸಿಂಗ್ ಗೇ ಅಗ್ರಸ್ಥಾನ!

ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಭಾರತದ ರವೀಂದ್ರ ಜಡೇಜಾ ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ದಾಖಲೆಯೊಂದನ್ನು ಮುರಿದಿದ್ದಾರೆ.
ರವೀಂದ್ರ ಜಡೇಜಾ ದಾಖಲೆ
ರವೀಂದ್ರ ಜಡೇಜಾ ದಾಖಲೆ

ಕೋಲ್ಕತಾ: ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಭಾರತದ ರವೀಂದ್ರ ಜಡೇಜಾ ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ದಾಖಲೆಯೊಂದನ್ನು ಮುರಿದಿದ್ದಾರೆ.

ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಕೇವಲ 83ರನ್ ಗಳಿಗೆ ಆಲೌಟ್ ಆಯಿತು. ಇಡೀ ಟೂರ್ನಿಯಲ್ಲಿ ಬ್ಯಾಟಿಂಗ್ ನಿಂದಲೇ ಸದ್ದು ಮಾಡಿ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿರುವ ದಕ್ಷಿಣ ಆಫ್ರಿಕಾ ತಂಡ ಮೊದಲ ಬಾರಿಗೆ ಭಾರತೀಯ ಬೌಲರ್ ಗಳ ಎದುರು ರನ್ ಗಳಿಸಲು ಪರದಾಡಿತು. ಪ್ರಮುಖವಾಗಿ ಭಾರತದ ಸ್ಪಿನ್ನರ್ ರವೀಂದ್ರ ಜಡೇಜಾ ಆಫ್ರಿಕನ್ ದಾಂಡಿಗರಿಗೆ ಸಿಂಹಸ್ವಪ್ನವಾಗಿ ಕಾಡಿದರು. 9 ಓವರ್ ಎಸೆದ ಜಡೇಜಾ ಕೇವಲ 33 ರನ್ ನೀಡಿ ಒಂದು ಮೇಡಿನ್ ಸಹಿತ 5 ವಿಕೆಟ್ ಕಬಳಿಸಿದರು. ಶಮಿ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದರೆ, ಸಿರಾಜ್ 1 ವಿಕೆಟ್ ಪಡೆದರು.

ಯುವಿ ದಾಖಲೆ ಮುರಿದ ಜಡೇಜಾ
ಇನ್ನು 33 ರನ್ ಗಳಿಗೆ 5 ವಿಕೆಟ್ ಪಡೆದ ರವೀಂದ್ರ ಜಡೇಜಾ ವಿಶ್ವಕಪ್ ಇತಿಹಾಸದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಭಾರತದ ಸ್ಪಿನ್ನರ್ ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರು. ಇದಕ್ಕೂ ಮೊದಲು 2011ರ ವಿಶ್ವಕಪ್ ಟೂರ್ನಿಯಲ್ಲಿ ಬೆಂಗಳೂರಿನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಯುವರಾಜ್ ಸಿಂಗ್ 31ರನ್ ಗಳಿಗೆ 5 ವಿಕೆಟ್ ಪಡೆದಿದ್ದರು. ಇದು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು 2003ರ ವಿಶ್ವಕಪ್ ಟೂರ್ನಿಯಲ್ಲಿ ಇದೇ ಯುವರಾಜ್ ಸಿಂಗ್ ನಮೀಬಿಯಾ ವಿರುದ್ಧ ಸೆಂಟ್ ಪೀಟರ್ಸ್ ಬರ್ಗ್ ಕ್ರೀಡಾಂಗಣದಲ್ಲಿ ಕೇವಲ 6 ರನ್ ಗೆ4 ವಿಕೆಟ್ ಪಡೆದಿದ್ದರು. ಈ ದಾಖಲೆಯನ್ನು ನಿನ್ನೆ ರವೀಂದ್ರ ಜಡೇಜಾ 5 ವಿಕೆಟ್ ಪಡೆದು ಹಿಂದಿಕ್ಕಿದರು.

Best figures for an Indian spinner in World Cups
5/31 Yuvraj Singh vs Ire Bengaluru 2011
5/33 Ravindra Jadeja vs SA Kolkata 2023
4/6 Yuvraj Singh vs Nam Pietermaritzburg 2003
4/25 R Ashwin vs UAE Perth 2015

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com