ICC Cricket World Cup 2023: ನ್ಯೂಜಿಲೆಂಡ್-ಶ್ರೀಲಂಕಾ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ; ಪಾಕಿಸ್ತಾನಕ್ಕೆ ಅದೃಷ್ಟ?

ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಇಂದಿನ ಬೆಂಗಳೂರು ಪಂದ್ಯದಲ್ಲಿ ಸೆಮೀಸ್ ಗೆ ಸಿದ್ದವಾಗುತ್ತಿರುವ ನ್ಯೂಜಿಲೆಂಡ್ ತಂಡ ಶ್ರೀಲಂಕಾ ತಂಡವನ್ನು ಎದುರಿಸುತ್ತಿದ್ದು, ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.
ಎಂ ಚಿನ್ನಸ್ವಾಮಿ ಕ್ರೀಡಾಂಗಣ
ಎಂ ಚಿನ್ನಸ್ವಾಮಿ ಕ್ರೀಡಾಂಗಣ

ಬೆಂಗಳೂರು: ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಇಂದಿನ ಬೆಂಗಳೂರು ಪಂದ್ಯದಲ್ಲಿ ಸೆಮೀಸ್ ಗೆ ಸಿದ್ದವಾಗುತ್ತಿರುವ ನ್ಯೂಜಿಲೆಂಡ್ ತಂಡ ಶ್ರೀಲಂಕಾ ತಂಡವನ್ನು ಎದುರಿಸುತ್ತಿದ್ದು, ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶ್ರೀಲಂಕಾ ತಂಡವನ್ನು ಎದುರಿಸುತ್ತಿರುವ ನ್ಯೂಜಿಲೆಂಡ್ ಸೆಮೀಸ್ ಹಂತಕ್ಕೆ ಅಧಿಕೃತವಾಗಿ ಅರ್ಹತೆ ಪಡೆಯಲು ಇಂದಿನ ಪಂದ್ಯವನ್ನು ಗೆಲ್ಲಲೇ ಬೇಕಿದೆ. ಆದರೆ ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಸಂಜೆ ವೇಳೆ ನಗರದಲ್ಲಿ ಭಾರಿ ಮಳೆಯಾಗುವ ಶೇ.70ರಷ್ಟು ಸಾಧ್ಯತೆ ಇದೆ ಎಂದು ಹಮಾವಾನ ಇಲಾಖೆ ಹೇಳಿದೆ.

ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಈಗಾಗಲೇ ಭಾರತ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಅಧಿಕೃತವಾಗಿ ಅರ್ಹತೆ ಪಡೆದಿದ್ದು, ಬಾಕಿ ಒಂದು ಸ್ಥಾನಕ್ಕೆ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನದ ನಡುವೆ ತೀವ್ರ ಪೈಪೋಟಿ ಏರ್ಪಿಟ್ಟಿದೆ. ಇಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಶ್ರೀಲಂಕಾ ತಂಡವನ್ನು ಎದುರಿಸುತ್ತಿದೆ. ಆಡಿರುವ 8 ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದು 8 ಅಂಕಗಳನ್ನು ಸಂಪಾದಿಸಿದೆ. ಇಂದಿನ ಪಂದ್ಯ ಗೆದ್ದರೆ 10 ಅಂಕಗಳಾಗಲಿದ್ದು, ರನ್ ರೇಟ್ ಆಧಾರದ ಮೇಲೆ ಸೆಮೀಸ್ ಗೆ ಹಾದಿ ಸುಗಮವಾಗಲಿದೆ. ಆದರೆ ಮಳೆ ಬಂದು ಇಂದಿನ ಪಂದ್ಯ ರದ್ದಾದರೆ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಗೆ ತಲಾ ಒಂದೊಂದು ಅಂಕ ಹಂಚಿಕೆಯಾಗುತ್ತದೆ. 

ಪಾಕಿಸ್ತಾನಕ್ಕೆ ಅದೃಷ್ಟ
ಒಂದು ವೇಳೆ ಅಂಕ ಹಂಚಿಕೆಯಾದರೆ ನ್ಯೂಜಿಲೆಂಡ್ ಅಂಕಗಳಿಕೆ 9 ಆಗುತ್ತದೆ. ಆಗ ಪಾಕಿಸ್ತಾನಕ್ಕೆ ಸೆಮೀಸ್ ಹಾದಿ ಸುಗಮವಾಗಲಿದ್ದು, ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಗೆದ್ದರೆ ಆಗ ಆ ತಂಡದ ಅಂಕ 10 ಆಗುತ್ತದೆ. ಆಗ ಅಧಿಕೃತವಾಗಿ ಪಾಕಿಸ್ತಾನ ಸೆಮೀಸ್ ಗೆ ಸಾಗಲಿದೆ. ಅಂದಹಾಗೆ ಶನಿವಾರ ಇಂಗ್ಲೆಂಡ್ ತಂಡವನ್ನು ಪಾಕಿಸ್ತಾನ ಎದುರಿಸಲಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com