ಬೆಂಗಳೂರು: ಅಜ್ಜಿ ಮನೆಗೆ ಬಂದ ಕಿವೀಸ್ ಸ್ಟಾರ್ ಬ್ಯಾಟರ್ Rachin Ravindra, ದೃಷ್ಟಿ ತೆಗೆದ ಹಿರಿಯ ಜೀವ! ವಿಡಿಯೋ ವೈರಲ್

ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿರುವ ನ್ಯೂಜಿಲೆಂಡ್ ಸ್ಟಾರ್ ಬ್ಯಾಟರ್ ರಚಿನ್ ರವೀಂದ್ರ ಬೆಂಗಳೂರಿನಲ್ಲಿರುವ ಅವರ ಅಜ್ಜಿ ಮನೆಗೂ ಭೇಟಿ ನೀಡಿದ್ದು, ಈ ವೇಳೆ ಅವರ ಅಜ್ಜಿ ದೃಷ್ಟಿ ತೆಗೆಯುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಅಜ್ಜಿ ಮನೆಗೆ ಬಂದ ಕಿವೀಸ್ ಸ್ಟಾರ್ ಬ್ಯಾಟರ್ Rachin Ravindra
ಅಜ್ಜಿ ಮನೆಗೆ ಬಂದ ಕಿವೀಸ್ ಸ್ಟಾರ್ ಬ್ಯಾಟರ್ Rachin Ravindra
Updated on

ಬೆಂಗಳೂರು: ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿರುವ ನ್ಯೂಜಿಲೆಂಡ್ ಸ್ಟಾರ್ ಬ್ಯಾಟರ್ ರಚಿನ್ ರವೀಂದ್ರ ಬೆಂಗಳೂರಿನಲ್ಲಿರುವ ಅವರ ಅಜ್ಜಿ ಮನೆಗೂ ಭೇಟಿ ನೀಡಿದ್ದು, ಈ ವೇಳೆ ಅವರ ಅಜ್ಜಿ ದೃಷ್ಟಿ ತೆಗೆಯುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ನ್ಯೂಜಿಲೆಂಡ್​ಗೆ ಗುರುವಾರ ಬೆಂಗಳೂರಿನಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯವಿತ್ತು. ಇದಕ್ಕೂ ಮುನ್ನ ರಚಿನ್ ರವೀಂದ್ರ ಬೆಂಗಳೂರಿನಲ್ಲಿರುವ ತಮ್ಮ ಅಜ್ಜಿಯ ಮನೆಗೆ ಭೇಟಿ ನೀಡಿದ್ದಾರೆ. ಇಲ್ಲಿ ಅವರ ಅಜ್ಜಿ ರಚಿನ್ ರನ್ನು ಕೂರಿಸಿ ದೃಷ್ಟಿ ತೆಗೆದಿದ್ದಾರೆ. ದಕ್ಷಿಣ ಭಾರತದ ಸಾಂಪ್ರದಾಯಿಕ ಶೈಲಿಯಲ್ಲಿ ಅವರ ಅಜ್ಜಿ ದೃಷ್ಟಿ ತೆಗೆದಿದ್ದು, ಈ ವೇಳೆ ರಚಿನ್ ಕೂಡ ಅಜ್ಜಿ ಮಾತಿಗೆ ಎದುರಾಡದೇ ಸುಮ್ಮನೇ ಕುಳಿತಿರುವ ವಿಡಿಯೋ ವೈರಲ್ ಆಗುತ್ತಿದೆ.

ಇನ್ನು ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ನ್ಯೂಜಿಲೆಂಡ್ ತಂಡದ ಪರ ಆಡುತ್ತಿರುವ ರಚಿನ್ ರವೀಂದ್ರ (Rachin Ravindra) ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಇವರು ಮೂಲತಃ ಭಾರತದವರು, ಅದರಲ್ಲೂ ಕನ್ನಡಿಗರು ಎಂಬುದು ಹೆಮ್ಮೆಯ ವಿಷಯ. ಈ ಬಾರಿಯ ವಿಶ್ವಕಪ್​ನಲ್ಲಿ ದಾಖಲೆ ಮೇಲೆ ದಾಖಲೆ ಬರೆದು ಮಿಂಚಿತ್ತಿರುವ ರಚಿನ್ ಅವರ ಕುಟುಂಬ ಈಗಲೂ ಬೆಂಗಳೂರಿನಲ್ಲೇ ಇದೆ. ರಚಿನ್ ಅವರು ಬೆಂಗಳೂರು ಮೂಲದ ರವೀಂದ್ರ ಕೃಷ್ಣಮೂರ್ತಿ ಹಾಗೂ​ ​ದೀಪಾ ಕೃಷ್ಣಮೂರ್ತಿ ಅವರ ಮಗ. ಸಾಫ್ಟ್‌ವೇರ್ ಸಿಸ್ಟಮ್ ಆರ್ಕಿಟೆಕ್ಟ್ ಆಗಿರುವ ರವೀಂದ್ರ ಕೃಷ್ಣಮೂರ್ತಿ ಅವರು 1990ರಲ್ಲಿ ನ್ಯೂಜಿಲೆಂಡ್​​ಗೆ ತೆರಳಿದ್ದರು. ಆ ಬಳಿಕ ಅಲ್ಲಿಯೇ ನೆಲೆಸಿದ್ದರು. 

ಇದೀಗ ರಚಿನ್ ರವೀಂದ್ರ ಕೂಡ ಅದೇ ನ್ಯೂಜಿಲೆಂಡ್ ಕ್ರಿಕೆಟ್ ತಂಡದಲ್ಲಿ ತಮ್ಮ ಭವಿಷ್ಯ ಕಟ್ಟಿಕೊಂಡಿದ್ದು, ಮಾತ್ರವಲ್ಲದೇ ತಂಡ ಸೇರಿಕೊಂಡ ಕೆಲವೇ ವರ್ಷಗಳಲ್ಲಿ ತಂಡದ ಸ್ಟಾರ್ ಬ್ಯಾಟರ್ ಆಗಿದ್ದಾರೆ. ಹಾಲಿ ವಿಶ್ವಕಪ್ ಟೂರ್ನಿಯಲ್ಲೂ ಭರ್ಜರಿ ಪ್ರದರ್ಶನ ತೋರುತ್ತಿರುವ ರಚಿನ್ ಈ ವರೆಗೂ 560 ರನ್ ಗಳ ಮೂಲಕ ಟೂರ್ನಿ ಗರಿಷ್ಠ ಸ್ಕೋರರ್ ಆಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com