ವಿಶ್ವಕಪ್: ಕಿವೀಸ್ ವಿರುದ್ಧದ ಪಂದ್ಯ, ನೆಟ್ ಸೆಷನ್ ನಲ್ಲಿ ಸೂರ್ಯಕುಮಾರ್ ಯಾದವ್, ಇಶಾನ್ ಗೆ ಗಾಯ

ಭಾನುವಾರ ನ್ಯೂಜಿಲೆಂಡ್ ವಿರುದ್ಧ ತಮ್ಮ ಮೊದಲ ವಿಶ್ವಕಪ್ ಪಂದ್ಯವನ್ನು ಆಡುವ ನಿರೀಕ್ಷೆಯಲ್ಲಿರುವ ಸೂರ್ಯಕುಮಾರ್ ಯಾದವ್ ಅವರು ಪಂದ್ಯದ ಮುನ್ನಾದಿನದ ನೆಟ್ ಸೆಷನ್‌ನಲ್ಲಿ ಅವರ ಬಲ ಮುಂಗೈಗೆ ಬಾಲ್ ಬಡಿದಿದ್ದು, ಗಾಯಕ್ಕೆ ತುತ್ತಾಗಿದ್ದಾರೆ. 
ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್

ಧರ್ಮಶಾಲಾ: ಭಾನುವಾರ ನ್ಯೂಜಿಲೆಂಡ್ ವಿರುದ್ಧ ತಮ್ಮ ಮೊದಲ ವಿಶ್ವಕಪ್ ಪಂದ್ಯವನ್ನು ಆಡುವ ನಿರೀಕ್ಷೆಯಲ್ಲಿರುವ ಸೂರ್ಯಕುಮಾರ್ ಯಾದವ್ ಅವರು ಪಂದ್ಯದ ಮುನ್ನಾದಿನದ ನೆಟ್ ಸೆಷನ್‌ನಲ್ಲಿ ಅವರ ಬಲ ಮುಂಗೈಗೆ ಬಾಲ್ ಬಡಿದಿದ್ದು, ಗಾಯಕ್ಕೆ ತುತ್ತಾಗಿದ್ದಾರೆ. 

ಹಾರ್ದಿಕ್ ಪಾಂಡ್ಯ ಅವರ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಅವರು ನೆಟ್ ನಲ್ಲಿ ಥ್ರೋಡೌನ್ ಸ್ಪೆಷಲಿಸ್ಟ್ ಡಿ ರಾಘವೇಂದ್ರ ಅವರನ್ನು ಎದುರಿಸುತ್ತಿದ್ದಾಗ ಬ್ಯಾಟರ್ ಅನ್ನು ನಿರ್ದೇಶಿಸಿದ ರಾಕೆಟ್ ಥ್ರೋ ಅವರ ಮಣಿಕಟ್ಟಿನ ಮೇಲಿನ ಬಲ ಮುಂದೋಳಿನ ಮೇಲೆ ಬಡಿಯಿತು.

ಇದನ್ನೂ ಓದಿ: ಐಸಿಸಿ ವಿಶ್ವಕಪ್: ನ್ಯೂಜಿಲೆಂಡ್ ವಿರುದ್ಧದ ಪಂದ್ಯದಿಂದ ಹಾರ್ದಿಕ್ ಪಾಂಡ್ಯ ಹೊರಕ್ಕೆ!
ಪರಿಣಾಮವಾಗಿ ಸೂರ್ಯಕುಮಾರ್ ಯಾದವ್ ತಕ್ಷಣ ನೆಟ್ಸ್ ಬಿಟ್ಟು ಫಿಸಿಯೋ ಕಮಲೇಶ್ ಮತ್ತು ತಂಡದ ವೈದ್ಯರೊಂದಿಗೆ ಮರಳಿದರು. ನಂತರ ಅವರಿಗೆ ಐಸ್ ಪ್ಯಾಕ್ ಗಳೊಂದಿಗೆ ಚಿಕಿತ್ಸೆ ನೀಡಲಾಯಿತು.ಗಂಭೀರ ಗಾಯಕ್ಕೆ ತುತ್ತಾಗದ ಕಾರಣ ಪಂದ್ದ ವೇಳೆ ಚೇತರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ ಇಶಾನ್ ಕಿಶನ್ ಅಭ್ಯಾಸ ಮಾಡುತ್ತಿರುವ ವೇಳೆ ಜೇನು ಹುಳ ಕಡಿದಿದ್ದು, ಭಾರತದ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಎಡಗೈ ವಿಕೆಟ್-ಕೀಪರ್ ಬ್ಯಾಟರ್ ಇಶಾನ್ ಕಿಶನ್ ಶನಿವಾರ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಅವರ ಕುತ್ತಿಗೆಯ ಹಿಂಭಾಗದಲ್ಲಿ ಜೇನುನೊಣ ಕಚ್ಚಿದೆ.  ಘಟನೆ ಸಂಭವಿಸುವ ಮೊದಲು ಕಿಶನ್ ನೆಟ್ ನಲ್ಲಿ ಸಾಕಷ್ಟು ಸಮಯದವರೆಗೆ ಬ್ಯಾಟಿಂಗ್ ಮಾಡಿದರು. ಆದರೆ, ಜೀನು ನೊಣ ಕಚ್ಚಿದ ನಂತರ ನೋವಿನಿಂದ ಅಲ್ಲಿಂದ ಓಡುವುದು ಕಂಡುಬಂತು. 
ಮತ್ತು ನೆಟ್ಸ್‌ನಲ್ಲಿ ಕಂಡುಬರಲಿಲ್ಲ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com