ಧರ್ಮಶಾಲಾ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಭಾರತ ತಂಡದ ವೇಗಿ ಮಹಮದ್ ಶಮಿ ಭಾರತ ಸ್ಪಿನ್ ದಂತಕಥೆ ಅನಿಲ್ ಕುಂಬ್ಳೆ ಅವರ ದಾಖಲೆ ಮುರಿದು ಎಲೈಟ್ ಕ್ಲಬ್ ಸೇರಿದ್ದಾರೆ.
ಭಾನುವಾರ (ಅ.22) ಧರ್ಮಶಾಲಾದ ಎಚ್ ಪಿಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊದಲ 4 ಪಂದ್ಯಗಳಿಂದ ಬೆಂಚ್ ಕಾದಿದ್ದ ಮೊಹಮ್ಮದ್ ಶಮಿ, ವೇಗದ ಆಲ್ ರೌಂಡರ್ ಶಾರ್ದುಲ್ ಠಾಕೂರ್ ಜಾಗದಲ್ಲಿ ಸ್ಥಾನ ಪಡೆದಿದ್ದರು. ಪಂದ್ಯದ ತಮ್ಮ ಮೊದಲ ಎಸೆತದಲ್ಲೇ ಸ್ಫೋಟಕ ಆಟಗಾರ ವಿಲ್ ಯಂಗ್ ವಿಕೆಟ್ ಕಬಳಿಸಿದ ಮೊಹಮ್ಮದ್ ಶಮಿ, ನಂತರದ ಓವರ್ ಗಳಲ್ಲೂ ಉತ್ತಮ ಬೌಲಿಂಗ್ ಸಂಯೋಜನೆ ತೋರಿ ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್ ಹಾಗೂ ಮ್ಯಾಟ್ ಹೆನ್ರಿ ವಿಕೆಟ್ ಪಡೆದರು. ತಮ್ಮ 10 ಓವರ್ ಗಳಲ್ಲಿ 54 ರನ್ ಬಿಟ್ಟುಕೊಟ್ಟರು. 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಶಮಿ 5 ವಿಕೆಟ್ ಪಡೆದಿದ್ದರು.
ಏಕದಿನ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಟೀಮ್ ಇಂಡಿಯಾ ಪರ 2 ಬಾರಿ 5 ವಿಕೆಟ್ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ದಾಖಲೆಗೆ ವೇಗಿ ಮೊಹಮ್ಮದ್ ಶಮಿ ಪಾತ್ರರಾಗಿದ್ದಾರೆ. ತಮ್ಮ ಈ ಪ್ರದರ್ಶನದಿಂದ ನ್ಯೂಜಿಲೆಂಡ್ ತಂಡವನ್ನು 273 ರನ್ ಗಳಿಗೆ ನಿಯಂತ್ರಿಸಿದ್ದಾರೆ.
ಇನ್ನು ಇಂದಿನ 5 ವಿಕೆಟ್ ಗಳ ಸಾಧನೆ ಮೂಲಕ ಶಮಿ ವಿಶ್ವಕಪ್ ನಲ್ಲಿ ತಾವು ಪಡೆದ ವಿಕೆಟ್ ಗಳ ಸಂಖ್ಯೆಯನ್ನು 36ಕ್ಕೆ ಏರಿಕೆ ಮಾಡಿಕೊಂಡರು. ಆ ಮೂಲಕ ಭಾರತದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರನ್ನು ಹಿಂದಿಕ್ಕಿದ್ದಾರೆ. ಕುಂಬ್ಳೆ ವಿಶ್ವಕಪ್ ನಲ್ಲಿ 31 ವಿಕೆಟ್ ಕಬಳಿಸಿದ್ದಾರೆ. ಇನ್ನು ಭಾರತದ ವಿಶ್ವಕಪ್ ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಗಳಿಸಿದ ಆಟಗಾರರ ಪೈಕಿ ಜಹೀರ್ ಖಾನ್ ಮತ್ತು ಜಾವಗಲ್ ಶ್ರೀನಾಥ್ ಜಂಟಿ ಅಗ್ರಸ್ಥಾನದಲ್ಲಿದ್ದು, ಜಹೀರ್ ಮತ್ತು ಶ್ರೀನಾಥ್ ತಲಾ 44 ವಿಕೆಟ್ ಗಳನ್ನು ಗಳಿಸಿದ್ದಾರೆ. 36 ವಿಕೆಟ್ ಗಳೊಂದಿಗೆ ಶಮಿ 2ನೇ ಸ್ಥಾನದಲ್ಲಿದ್ದು, 29 ವಿಕೆಟ್ ಪಡೆದಿರುವ ಬುಮ್ರಾ 4 ಮತ್ತು 28 ವಿಕೆಟ್ ಗಳನ್ನು ಕಬಳಿಸಿರುವ ಕಪಿಲ್ ದೇವ್ 5ನೇ ಸ್ಥಾನದಲ್ಲಿದ್ದಾರೆ.
Most wickets for India in World Cups
44 - Zaheer Khan
44 - Javagal Srinath
36 - Mohammed Shami
31 - Anil Kumble
29 - Jasprit Bumrah
28 - Kapil Dev
ವಿಶ್ವಕಪ್ ನಲ್ಲಿ ಅತೀ ಹೆಚ್ಚು ಬಾರಿ 5 ವಿಕೆಟ್ ಗೊಂಚಲು: ಶಮಿ ದಾಖಲೆ
ಇನ್ನು ಇಂದಿನ 5 ವಿಕೆಟ್ ಗೊಂಚಲಿನ ಮೂಲಕ ಶಮಿ ವಿಶ್ವಕಪ್ ನಲ್ಲಿ 2 ಬಾರಿ 5 ವಿಕೆಟ್ ಪಡೆದ ಭಾರತದ ಏಕೈಕ ಆಟಗಾರರಾಗಿದ್ದಾರೆ. ಈ ಹಿಂದೆ ಭಾರತದ ಪರ ಕಪಿಲ್ ದೇವ್, ವೆಂಕಟೇಶ್ ಪ್ರಸಾದ್, ರಾಬಿನ್ ಸಿಂಗ್, ಆಶಿಶ್ ನೆಹ್ರಾ ಮತ್ತು ಯುವರಾಜ್ ಸಿಂಗ್ ತಲಾ ಒಂದು ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದರು.
India bowlers with five-fors in World Cups
2 - Mohammed Shami
1 - Kapil Dev
1 - Venkatesh Prasad
1 - Robin Singh
1 - Ashish Nehra
1 - Yuvraj Singh
ಹ್ಯಾಟ್ರಿಕ್ ಮಿಸ್
2023ರ ವಿಶ್ವಕಪ್ ಟೂರ್ನಿಯ 21ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ 48ನೇ ಓವರ್ ನ 4ನೇ ಎಸೆತದಲ್ಲಿ ಸ್ವಿಂಗ್ ಬೌಲಿಂಗ್ ನಿಂದ ಮಿಚೆಲ್ ಸ್ಯಾಂಟ್ನರ್ ನ್ನು ಕ್ಲೀನ್ ಬೌಲ್ಡ್ ಮಾಡಿದ್ದ ಶಮಿ, ಮರು ಎಸೆತದಲ್ಲೇ ಮ್ಯಾಟ್ ಹೆನ್ರಿಯನ್ನು ಬೌಲ್ಡ್ ಮಾಡಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಹಾದಿಯಲ್ಲಿದ್ದರಾದರೂ ಲೋಕಿ ಫಗ್ಯುರ್ಸನ್ ಅವರು ಎಚ್ಚರಿಕೆಯ ಆಟವಾಡಿ ಆ ಅವಕಾಶವನ್ನು ತಪ್ಪಿಸಿದರು.
Most 4-plus wicket hauls in World Cups
6 - Mitchell Starc
5 - Imran Tahir
5 - Mohammed Shami
No other Indian bowler has more than two 4-plus wicket hauls in World Cups.
ವಿಶ್ವಕಪ್ ನಲ್ಲಿ ಹೆಚ್ಚು ಬಾರಿ 4 ಮತ್ತು ಅದಕ್ಕಿಂತ ಹೆಚ್ಚು ವಿಕೆಟ್ ಶಮಿಗೆ 3ನೇ ಸ್ಥಾನ
ಇನ್ನು ವಿಶ್ವಕಪ್ ಟೂರ್ನಿಯಲ್ಲಿ ಹೆಚ್ಚು ಬಾರಿ 4 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಶಮಿ 3ನೇ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಇದ್ದು ಅವರು ಒಟ್ಟು 6 ಬಾರಿ ಈ ಸಾಧನೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್ 5 ಬಾರಿ ಮತ್ತು ಶಮಿ ಕೂಡ 5 ಬಾರಿ ಈ ಸಾಧನೆ ಮಾಡಿ ನಂತರದ ಸ್ಥಾನದಲ್ಲಿದ್ದಾರೆ.
Shami in World Cups
Matches: 12
Wickets: 36
Avg: 15.02
SR: 17.6
ER: 5.09
Advertisement