IND vs NZ: ದಾಖಲೆ ಸೃಷ್ಟಿಸಿದ ಡಿಸ್ನಿ+ ಹಾಟ್‌ಸ್ಟಾರ್ ವೀಕ್ಷಕರ ಸಂಖ್ಯೆ; ಕಿಂಗ್ ಕೊಹ್ಲಿ ಮ್ಯಾಜಿಕ್‌ಗೆ ಪ್ರೇಕ್ಷಕರು ಫಿದಾ!

ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಕ್ರಿಕೆಟ್ ಟೂರ್ನಿಯಲ್ಲಿ ಅಕ್ಟೋಬರ್ 22 ರಂದು ನಡೆದ ನ್ಯೂಜಿಲೆಂಡ್ ವಿರುದ್ಧದ ಭಾರತ ತಂಡದ ಮುಖಾಮುಖಿಯ ಸಮಯದಲ್ಲಿ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ದಾಖಲೆ ಸಂಖ್ಯೆಯ ಪ್ರೇಕ್ಷಕರು ಪಂದ್ಯವನ್ನು ವೀಕ್ಷಿಸಿದ್ದಾರೆ. 
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ನವದೆಹಲಿ: ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಕ್ರಿಕೆಟ್ ಟೂರ್ನಿಯಲ್ಲಿ ಅಕ್ಟೋಬರ್ 22 ರಂದು ನಡೆದ ನ್ಯೂಜಿಲೆಂಡ್ ವಿರುದ್ಧದ ಭಾರತ ತಂಡದ ಮುಖಾಮುಖಿಯ ಸಮಯದಲ್ಲಿ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ದಾಖಲೆ ಸಂಖ್ಯೆಯ ಪ್ರೇಕ್ಷಕರು ಪಂದ್ಯವನ್ನು ವೀಕ್ಷಿಸಿದ್ದಾರೆ. ಹಳೆಯ ದಾಖಲೆ ಪುಡಿಪುಡಿಯಾಗಿದ್ದು, ವಿರಾಟ್ ಕೊಹ್ಲಿ ಶತಕದ ಅಂಚಿನಲ್ಲಿದ್ದಾಗ ವೀಕ್ಷಕರ ಸಂಖ್ಯೆ ಬರೋಬ್ಬರಿ 4 ಕೋಟಿ ದಾಟಿದೆ. 

ಇದೇ ವೇಳೆ, ರವೀಂದ್ರ ಜಡೇಜಾ ಭಾರತ ತಂಡವನ್ನು ಗೆಲುವಿನತ್ತ ಮುನ್ನಡೆಸುವಾಗ ವೀಕ್ಷಕರ ಸಂಖ್ಯೆ 4.3 ಕೋಟಿಗೆ ಏರಿಕೆಯಾಗಿತ್ತು. 2003ರ ನಂತರ ಐಸಿಸಿ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಇದೇ ಮೊದಲ ಬಾರಿಗೆ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದ್ದು, ಕ್ರಿಕೆಟ್ ಪ್ರೇಮಿಗಳ ಕೊರಗನ್ನು ನೀಗಿಸಿದೆ. 

'ದೇಜಾ ವೂಹೂ! ನಮ್ಮೆಲ್ಲರ ಮತ್ತೊಂದು ದಾಖಲೆ ಮುರಿಯುವ ಪ್ರದರ್ಶನ! ಹ್ಯಾಟ್ರಿಕ್‌ಗಾಗಿ ಸಮಯವೇ?' ಎಂದು ಡಿಸ್ನಿ+ ಹಾಟ್‌ಸ್ಟಾರ್ ಟ್ವೀಟ್ ಮಾಡಿದೆ.

ಭಾರತೀಯ ಕ್ರಿಕೆಟ್ ತಂಡ ಫೈನಲ್‌ಗೆ ತಲುಪಿದರೆ, ವೀಕ್ಷಕರ ಸಂಖ್ಯೆ 5 ಕೋಟಿ ಗಡಿಯನ್ನು ದಾಟುತ್ತದೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

2023ನೇ ವಿಶ್ವಕಪ್‌ನ 21ನೇ ಪಂದ್ಯವು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಧರ್ಮಶಾಲಾದಲ್ಲಿ ನಡೆಯಿತು. ಪಂದ್ಯದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್‌ ಅಂತರದಿಂದ ಸೋಲಿಸಿದೆ. ಪಂದ್ಯವನ್ನು ಗೆಲುವಿನ ದಡ ಸೇರಿಸುವಲ್ಲಿ ವಿರಾಟ್ ಕೊಹ್ಲಿ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೆರವಾಯಿತು. 104 ಎಸೆತಗಳನ್ನು ಎದುರಿಸಿದ್ದು, 8 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 95 ರನ್ ಗಳಿಸಿದ್ದ ಕೊಹ್ಲಿ ಶತಕ ಗಳಿಸುವಲ್ಲಿ ವಿಫಲರಾದರು. ಬಳಿಕ ರವೀಂದ್ರ ಜಡೇಜಾ ಬೌಂಡರಿ ಬಾರಿಸುವ ಮೂಲಕ ಇನ್ನೂ ಎರಡು ಓವರ್​ಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದುಕೊಟ್ಟರು.

ಸರಣಿಯಲ್ಲಿ ಸೋಲಿಲ್ಲದ ಸರದಾರನಾಗಿರುವ ಭಾರತ ಆಡಿರುವ ಐದು ಪಂದ್ಯಗಳಲ್ಲಿ ಐದರಲ್ಲೂ ವಿಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕೇರಿದೆ. ಸದ್ಯ ನ್ಯೂಜಿಲೆಂಡ್ ಎರಡನೇ ಸ್ಥಾನಕ್ಕೆ ಇಳಿದಿದೆ. 

ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಪಂದ್ಯದ ವೀಕ್ಷಕರ ಸಂಖ್ಯೆ 3.5 ಕೋಟಿ ಲೈವ್ ಪ್ರೇಕ್ಷಕರನ್ನು ಹೊಂದಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೀಕ್ಷಕರನ್ನು ಮೀರಿಸಿದೆ.

'ಆದರೂ, ಇದು ಬೃಹತ್ ಸಂಖ್ಯೆ ಎಂದು ಎಲ್ಲರೂ ಭಾವಿಸುವುದಿಲ್ಲ. ಏಕೆಂದರೆ, ಹಿಂದಿನ ಕಾಲದಲ್ಲಿ ನಮ್ಮಲ್ಲಿ ಅಪ್ಲಿಕೇಶನ್‌ಗಳಿಲ್ಲದಿರುವಾಗ ಜನರು ಡಿಡಿ ಅಥವಾ ಕೇಬಲ್‌ನಿಂದ ಪಂದ್ಯವನ್ನು ವೀಕ್ಷಿಸುತ್ತಿದ್ದರು. ಆಗಲೂ ವೀಕ್ಷಕರ ಸಂಖ್ಯೆ 4.3 ಕೋಟಿ ದಾಟುತ್ತಿತ್ತು ಅಥವಾ ಇಡೀ ರಾಷ್ಟ್ರವು ಈ ರೀತಿಯ ದೊಡ್ಡ ಆಟಗಳನ್ನು ವೀಕ್ಷಿಸುತ್ತಿತ್ತು ಎಂಬ ಬಗ್ಗೆ ನನಗೆ ಖಾತ್ರಿಯಿದೆ. ಇದು ದೊಡ್ಡ ವಿಷಯ ಎಂದು ನಾನು ಭಾವಿಸುವುದಿಲ್ಲ. ಇದು ಕೇವಲ ಕ್ಲೌಡ್/ಇನ್‌ಫ್ರಾ ಬೆಂಬಲಿಸುತ್ತಿದೆ ಎಂದು ನೀವು ಹೇಳಬಹುದೇ?' ಎಂದು ಬಳಕೆದಾರರು ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com