ಏಷ್ಯಾ ಕಪ್ 2023: ನಾಲ್ಕು ವರ್ಷಗಳ ಬಳಿಕ ಇಂಡೋ-ಪಾಕ್ ಕದನ; ಪಂದ್ಯಕ್ಕೆ ಮಳೆ ಆತಂಕ, ಅಭಿಮಾನಿಗಳಲ್ಲಿ ತಳಮಳ

ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ ಕಾಯುತ್ತಾನೆ. ಏಷ್ಯಾಕಪ್ ಟೂರ್ನಿ ಬದ್ಧವೈರಿಗಳ ನಡುವೆ ಕಾದಾಟಕ್ಕೆ ವೇದಿಕೆಯಾಗುತ್ತಿದ್ದು, ಶನಿವಾರ ಕ್ಯಾಂಡಿಯಲ್ಲಿ (ಪಲ್ಲೆಕೆಲ್ಲೆ ಮೈದಾನ) ಬಹುನಿರೀಕ್ಷಿತ ಹೈವೋಲ್ಟೇಡ್ ಪಂದ್ಯ ನಡೆಯಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ ಕಾಯುತ್ತಾನೆ. ಏಷ್ಯಾಕಪ್ ಟೂರ್ನಿ ಬದ್ಧವೈರಿಗಳ ನಡುವೆ ಕಾದಾಟಕ್ಕೆ ವೇದಿಕೆಯಾಗುತ್ತಿದ್ದು, ಶನಿವಾರ ಕ್ಯಾಂಡಿಯಲ್ಲಿ (ಪಲ್ಲೆಕೆಲ್ಲೆ ಮೈದಾನ) ಬಹುನಿರೀಕ್ಷಿತ ಹೈವೋಲ್ಟೇಡ್ ಪಂದ್ಯ ನಡೆಯಲಿದೆ.

ಈ ಪಂದ್ಯ ತನ್ನದೇ ರೀತಿಯಲ್ಲಿ ವಿಶೇಷ ಪಡೆದಿದ್ದು, 4 ವರ್ಷಗಳ ಬಳಿಕ ಉಭಯ ತಂಡಗಳು ಏಕದಿನ ಮಾದರಿಯಲ್ಲಿ ಮುಖಾಮುಖಿಯಾಗುತ್ತಿವೆ. ಆದರೆ, ಪಂದ್ಯಕ್ಕೆ ಮಳೆ ಆತಂಕ ಶುರುವಾಗಿದೆ. ಪಲ್ಲೆಕಲ್ಲೆಯಲ್ಲಿ ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ಮಳೆ ಮುನ್ಸೂಚನೆ ಇದ್ದು, ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಆತಂಕ ಶುರುವಾಗಿದೆ.

ಆಗಸ್ಟ್​ 31ರಂದು ಆತಿಥೇಯ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯವೂ ಇಲ್ಲೇ ನಡೆಯಿತು. ಆದರೆ ಯಾವುದೇ ರೀತಿ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಲಿಲ್ಲ. ಸದ್ಯ ಕ್ಯಾಂಡಿಯಲ್ಲಿ ಮಳೆಗಾಲದ ಸಮಯವಾಗಿದ್ದು, ಸೆಪ್ಟೆಂಬರ್​ ಮಳೆ ಸುರಿಯುವ ಸಾಧ್ಯತೆ ಶೇಕಡಾ 91ರಷ್ಟಿದೆ ಎಂದು ಸ್ಥಳಿಯ ಹವಾಮಾನ ಇಲಾಖೆ ತಿಳಿಸಿದೆ.

ಒಂದು ವೇಳೆ ಮಳೆ ಬಂದು ನಿಂತರೂ ಕ್ರೀಡಾಂಗಣದಲ್ಲಿ ನುರಿತ ಸಿಬ್ಬಂದಿ ಇಲ್ಲದಿರುವುದು ಸಂಪೂರ್ಣ ಪಂದ್ಯ ನಡೆಸುವುದು ಕಷ್ಟಕರವಾಗಬಹುದು ಎಂದು ಹೇಳಲಾಗುತ್ತಿದೆ.

ಆಗಸ್ಟ್​-ಸೆಪ್ಟೆಂಬರ್​ ಸಮಯವು ಕ್ಯಾಂಡಿಯಲ್ಲಿ ಬಿಸಿಲು ಕಾಣಿಸಿಕೊಳ್ಳುವುದೇ ಅಪರೂಪ. ಅಷ್ಟರಮಟ್ಟಿಗೆ ಈ ಅವಧಿಯಲ್ಲಿ ಮಳೆ ಸುರಿಯಲಿದೆ. ಈವರೆಗೂ ಪಲ್ಲೆಕೆಲ್ಲೆ ಮೈದಾನದಲ್ಲಿ 33 ಏಕದಿನಗಳು ನಡೆದಿವೆ. ಆದರೆ, ಆತಿಥ್ಯ ವಹಿಸಿದ ಪಂದ್ಯಗಳಲ್ಲಿ 3 ಮಾತ್ರ ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ನಡೆದಿವೆ. ಮಾನ್ಸೂನ್ ಕಾರಣ, ಶ್ರೀಲಂಕಾ ಕ್ರಿಕೆಟ್ ಮಂಡಳಿ ಈ ಸಮಯದಲ್ಲಿ ಪಂದ್ಯ ಆಯೋಜಿಸಲು ಹಿಂದೇಟು ಹಾಕುತ್ತದೆ.

ಪಂದ್ಯ ರದ್ದಾದರೆ ಮುಂದೇನು?
ಸೆಪ್ಟೆಂಬರ್ 2, ಶನಿವಾರ ಮಳೆ ಕಾಡಿದರೂ ಸ್ಪಷ್ಟ ಫಲಿತಾಂಶಕ್ಕೆ ಕನಿಷ್ಠ 20 ಓವರ್​ಗಳ ಪಂದ್ಯ ನಡೆಸಲು ಶ್ರೀಲಂಕಾ ಕ್ರಿಕೆಟ್​ ಮಂಡಳಿ ಪ್ರಯತ್ನ ನಡೆಸಲಿದೆ. ಆದರೆ, ಇದರ ಹೊರತಾಗಿಯೂ ಪಂದ್ಯ ರದ್ದಾದರೆ, ಭಾರತ-ಪಾಕಿಸ್ತಾನ ತಂಡಕ್ಕೆ ತಲಾ ಒಂದೊಂದು ಅಂಕ ಹಂಚಲಾಗುತ್ತದೆ. ಆದರೆ, ಯಾವುದೇ ಪಂದ್ಯಕ್ಕೆ ಮೀಸಲು ದಿನ ಇರುವುದಿಲ್ಲ. ಪಂದ್ಯ ರದ್ದಾದರೆ, ಉದ್ಘಾಟನಾ ಪಂದ್ಯದಲ್ಲಿ ಗೆದ್ದಿರುವ ಪಾಕಿಸ್ತಾನವು ಸೂಪರ್​-4 ಪ್ರವೇಶ ಪಡೆಯಲಿದೆ.

ಟೀಮ್ ಇಂಡಿಯಾ ಸೂಪರ್​-4 ಹಂತಕ್ಕೆ ಪ್ರವೇಶಿಸಲು ಸೆಪ್ಟೆಂಬರ್​ 4ರಂದು ಇದೇ ಮೈದಾನದಲ್ಲಿ ನೇಪಾಳ ಎದುರು ಸೆಣಸಲಿರುವ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ಒಂದು ವೇಳೆ ಆ ಪಂದ್ಯವೂ ರದ್ದಾದರೆ, 2ನೇ ತಂಡವಾಗಿ ಭಾರತ (ಭಾರತ 2 ಅಂಕ ಪಡೆಯಲಿದೆ) ಸೂಪರ್​-4 ಹಂತಕ್ಕೆ ಪ್ರವೇಶಿಸಲಿದೆ. ಈಗಾಗಲೇ ಸೋತಿರುವ ನೇಪಾಳ 1 ಅಂಕದೊಂದಿಗೆ ಟೂರ್ನಿಯಿಂದ ಹೊರಬೀಳಲಿದೆ. ಟೂರ್ನಿಗೆ ಆತಿಥ್ಯ ವಹಿಸಿರುವ ಪಾಕಿಸ್ತಾನಕ್ಕೆ ಹೋಗಲು ಭಾರತ ಒಪ್ಪದ ಕಾರಣ, ಶ್ರೀಲಂಕಾಕ್ಕೆ ಜಂಟಿ ಆತಿಥ್ಯ ನೀಡಲಾಗಿದೆ.

ಪಲ್ಲೆಕೆಲೆ ಸ್ಟೇಡಿಯಂನಲ್ಲಿ ಟೀಂ ಇಂಡಿಯಾದ ಅಂಕಿಅಂಶಗಳನ್ನು ನೋಡಿದರೆ, ಭಾರತ ತಂಡವು ಈ ಮೈದಾನದಲ್ಲಿ 3 ಏಕದಿನ ಪಂದ್ಯಗಳನ್ನು ಆಡಿದೆ. ಮೂರು ಪಂದ್ಯಗಳಲ್ಲಿ ಟೀಂ ಇಂಡಿಯಾವೇ ಗೆದ್ದಿರುವುದು ಸಂತಸದ ವಿಚಾರ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com