ಏಷ್ಯಾ ಕಪ್ 2023: ಕೊನೆಗೂ ಬಿಸಿಸಿಐ ಮನವೊಲಿಸಿದ ಪಿಸಿಬಿ, ಭಾರತ-ಪಾಕ್ ಪಂದ್ಯಕ್ಕೆ ಹೆಚ್ಚುವರಿಯಾಗಿ ಒಂದು ದಿನ ಮೀಸಲು

ಏಷ್ಯಾಕಪ್ 2023 ಕ್ರಿಕೆಟ್ ಟೂರ್ನಿ ಆಯೋಜನೆ ಕುರಿತ ಹಗ್ಗಜಗ್ಗಾಟ ಈಗಲೂ ಮುಂದುವೆರೆದಿದ್ದು, ಕೊನೆಗೂ ಬಿಸಿಸಿಐ ಮನವೊಲಿಸುವಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಯಶಸ್ವಿಯಾಗಿ ಭಾರತ-ಪಾಕ್ ಪಂದ್ಯಕ್ಕೆ ಮೀಸಲು ದಿನಕ್ಕೆ ಅನುಮೋದನೆ ಪಡೆದಿದೆ.
ಭಾರತ vs ಪಾಕಿಸ್ತಾನ
ಭಾರತ vs ಪಾಕಿಸ್ತಾನ

ಕೊಲಂಬೊ: ಏಷ್ಯಾಕಪ್ 2023 ಕ್ರಿಕೆಟ್ ಟೂರ್ನಿ ಆಯೋಜನೆ ಕುರಿತ ಹಗ್ಗಜಗ್ಗಾಟ ಈಗಲೂ ಮುಂದುವೆರೆದಿದ್ದು, ಕೊನೆಗೂ ಬಿಸಿಸಿಐ ಮನವೊಲಿಸುವಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಯಶಸ್ವಿಯಾಗಿ ಭಾರತ-ಪಾಕ್ ಪಂದ್ಯಕ್ಕೆ ಮೀಸಲು ದಿನಕ್ಕೆ ಅನುಮೋದನೆ ಪಡೆದಿದೆ.

ಹೌದು.. ಪಂದ್ಯಾವಳಿ ಆರಂಭದ ತಿಂಗಳುಗಳ ಮೊದಲೇ ಆರಂಭವಾಗಿದ್ದ ಕ್ರಿಕೆಟ್ ಮಂಡಳಿಗಳ ನಡುವಿನ ಹಗ್ಗಜಗ್ಗಾಟ ಟೂರ್ನಿ ಆರಂಭವಾಗಿ ಇದೀಗ ನಿರ್ಣಾಯಕ ತಲುಪಿರುವ ಈ ಹೊತ್ತಿನಲ್ಲೂ ಮುಂದುವರೆದಿದೆ. ಹಾಲಿ ಏಷ್ಯಾಕಪ್ ಟೂರ್ನಿಗೆ ಮಳೆರಾಯ ವಿಲನ್ ಆಗಿದ್ದು, ಪ್ರಮುಖ ಪಂದ್ಯಗಳಿಗೇ ಮಳೆ ಅಡ್ಡಿಯಾಗುತ್ತಿದೆ. ಹೀಗಾಗಿ ಈ ಸಂಬಂಧ ಮೊದಲಿನಿಂದಲೂ ಚರ್ಚೆ ನಡೆಸುತ್ತಿದ್ದ ಕ್ರಿಕೆಟ್ ಮಂಡಳಿಗಳು ಇದೀಗ ಟೂರ್ನಿಯ ಸೂಪರ್ ಫೋರ್ ಹಂತದ ನಿರ್ಣಾಯಕ ಘಟ್ಟದಲ್ಲಿ ಮೀಸಲು ದಿನಗಳನ್ನು ಇರಿಸಲು ತಾರ್ಕಿಕ ಒಪ್ಪಂದಕ್ಕೆ ಬಂದಿವೆ. ಪ್ರಮುಖವಾಗಿ ಇಡೀ ಟೂರ್ನಿಯ ಹೈವೋಲ್ಟೇಜ್ ಪಂದ್ಯ ಎಂದೇ ಹೇಳಲಾಗುತ್ತಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಮೀಸಲು ದಿನ ಇಡಲು ಬಿಸಿಸಿಐ ಮನವೊಲಿಸುವಲ್ಲಿ ಕೊನೆಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಯಶಸ್ವಿಯಾಗಿದೆ.

ಸೆಪ್ಟೆಂಬರ್ 10 ರಂದು ನಡೆಯುವ ಪಂದ್ಯದ ಮೇಲೆ ಮಳೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಅದಕ್ಕಿಂತ ಮುಖ್ಯವಾಗಿ, ಮಳೆ ಸುರಿದರೆ ಮತ್ತು ಮರುದಿನ ಪಂದ್ಯ ಮುಂದುವರಿದರೆ ಭಾರತವು ಶ್ರೀಲಂಕಾವನ್ನು ಎದುರಿಸುವಾಗ ಸೆಪ್ಟೆಂಬರ್ 10 ರಿಂದ 12 ರವರೆಗೆ ಎಲ್ಲಾ ಮೂರು ದಿನಗಳನ್ನು ಆಡಬೇಕಾಗುತ್ತದೆ. ಅವರ ಕೊನೆಯ ಸೂಪರ್ ಫೋರ್ ಪಂದ್ಯ ಸೆಪ್ಟೆಂಬರ್ 15 ರಂದು ಬಾಂಗ್ಲಾದೇಶ ವಿರುದ್ಧ ಇದೆ.

"Super11 Asia Cup 2023 Super 4's ಪಂದ್ಯಕ್ಕೆ ಪಾಕಿಸ್ತಾನ ಮತ್ತು ಭಾರತ ನಡುವೆ 10ನೇ ಸೆಪ್ಟೆಂಬರ್ 2023 ರಂದು ಕೊಲಂಬೊದ R. ಪ್ರೇಮದಾಸ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯಕ್ಕಾಗಿ ಮೀಸಲು ದಿನವನ್ನು ಸಂಯೋಜಿಸಲಾಗಿದೆ" ಎಂದು PCB ಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ."ಪಾಕಿಸ್ತಾನ vs ಭಾರತ ಆಟದ ಸಮಯದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಆಟವು ಅಮಾನತುಗೊಂಡರೆ, ಪಂದ್ಯವನ್ನು ಅಮಾನತುಗೊಳಿಸಿದ ಹಂತದಿಂದ ಅಂದರೆ ಪಂದ್ಯ ಎಲ್ಲಿ ಸ್ಥಗಿತವಾಗಿತ್ತೋ ಅಲ್ಲಿಂದಲೇ ಮತ್ತೆ ಸೆಪ್ಟೆಂಬರ್ 11, 2023 ರಂದು ಮುಂದುವರಿಯುತ್ತದೆ. ಅಂತಹ ಸಂದರ್ಭದಲ್ಲಿ, ಟಿಕೆಟ್ ಹೊಂದಿರುವವರು ತಮ್ಮ ಪಂದ್ಯದ ಟಿಕೆಟ್‌ಗಳನ್ನು ಮಾರನೆಯ ದಿನಕ್ಕೆ ಇಟ್ಟುಕೊಳ್ಳಲು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಮುಂದಿನ ದಿನಕ್ಕೂ ಆ ಟಿಕೆಟ್ ಮಾನ್ಯವಾಗಿರುತ್ತದೆ ಮತ್ತು ಮೀಸಲು ದಿನಕ್ಕೆ ಬಳಸಲಾಗುವುದು, ”ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಳೆಯ ಮುನ್ಸೂಚನೆಯ ಹೊರತಾಗಿಯೂ ಕೊಲಂಬೊದಲ್ಲಿ ಪಂದ್ಯಗಳನ್ನು ನಡೆಸುವ ಬಗ್ಗೆ ಈ ಹಿಂದೆ ಗಂಭೀರ ಆಕ್ಷೇಪಣೆಗಳನ್ನು ಎತ್ತಿದ್ದರಿಂದ ಮಂಡಳಿಯು ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದೆ. ಈ ಮೀಸಲು ದಿನದ ವ್ಯವಸ್ಥೆಯು ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಾತ್ರ. ಭಾಗವಹಿಸುವ ಎಲ್ಲಾ ಮಂಡಳಿಗಳು ಇದಕ್ಕೆ ಒಪ್ಪಿಗೆ ನೀಡಿದ್ದು, ಎಸಿಸಿಗೆ ತೀರ್ಮಾನಕ್ಕೆ ಬರಲು ಸುಲಭವಾಗಿದೆ ಎಂದು ಪಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. 

ಅಲ್ಲದೆ ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್ ದರಗಳು ಇತರ ಪಂದ್ಯಗಳಿಗಿಂತ ಹೆಚ್ಚಾಗಿರುತ್ತದೆ. ಏಷ್ಯಾ ಕಪ್‌ನ ಸೂಪರ್ ಫೋರ್ ಹಂತಕ್ಕಾಗಿ ಕೊಲಂಬೊದ ಲೋವರ್ ಬ್ಲಾಕ್‌ಗಳ 'C' ಮತ್ತು 'D' ಟಿಕೆಟ್‌ಗಳನ್ನು ಪ್ರತಿ ಟಿಕೆಟ್‌ಗೆ LKR 1000 ಕ್ಕೆ ಇಳಿಸಲಾಗುತ್ತದೆ. ಈ ಕಡಿತವು ಸೆಪ್ಟೆಂಬರ್ 9, 12 ರಂದು ಆಡಲಾಗುವ ಆಟಗಳಿಗೆ ಟಿಕೆಟ್ ಸೆಪ್ಟೆಂಬರ್ 14, ಮತ್ತು 15ರಂದೂ ಅನ್ವಯಿಸುತ್ತದೆ. ಆದಾಗ್ಯೂ, ಸೆಪ್ಟೆಂಬರ್ 10 ರಂದು ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯ ಮತ್ತು ಪಂದ್ಯಾವಳಿಯ ಫೈನಲ್‌ಗೆ, ಆಯಾ ಬ್ಲಾಕ್‌ಗಳ ಟಿಕೆಟ್ ದರಗಳು ಮೂಲತಃ ನಿಗದಿಪಡಿಸಿದ ಬೆಲೆಯಲ್ಲೇ ಇರುತ್ತದೆ,” ಎಂದು ಆಯೋಜಕರು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿ ಸೂಪರ್ ಫೋರ್ ಹಂತವು ಶನಿವಾರದ ಶ್ರೀಲಂಕಾ-ಬಾಂಗ್ಲಾದೇಶ ಪಂದ್ಯದೊಂದಿಗೆ ಪ್ರಾರಂಭವಾಗುತ್ತದೆ. ಸೆಪ್ಟೆಂಬರ್ 17 ರಂದು ಫೈನಲ್ ನಂತರ ಶ್ರೀಲಂಕಾ ದೇಶದಲ್ಲಿ ಒಟ್ಟು ಐದು ಪಂದ್ಯಗಳು ನಡೆಯಲಿವೆ. ಅದಾಗ್ಯೂ ಫೈನಲ್‌ಗೆ ಮೀಸಲು ದಿನವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com