ಏಷ್ಯಾ ಕಪ್ 2023: ಪಾಕ್ ವಿರುದ್ಧ ಭರ್ಜರಿ ಬೌಲಿಂಗ್, ಕುಲದೀಪ್ ಯಾದವ್ ದಾಖಲೆ

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಮಾತ್ರವಲ್ಲದೇ ಬೌಲಿಂಗ್ ನಲ್ಲೂ ದಾಖಲೆ ನಿರ್ಮಾಣವಾಗಿದೆ.
ಕುಲದೀಪ್ ಯಾದವ್
ಕುಲದೀಪ್ ಯಾದವ್

ಕೊಲಂಬೋ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಮಾತ್ರವಲ್ಲದೇ ಬೌಲಿಂಗ್ ನಲ್ಲೂ ದಾಖಲೆ ನಿರ್ಮಾಣವಾಗಿದೆ.

ಭಾರತ ನೀಡಿದ್ದ 356 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಪಾಕಿಸ್ತಾನ ತಂಡಕ್ಕೆ ಭಾರತದ ಕುಲದೀಪ್ ಯಾದವ್ ಮಾರಣಾಂತಿಕವಾಗಿ ಪರಿಣಮಿಸಿದರು. ಪಾಕಿಸ್ತಾನದ 5 ವಿಕೆಟ್ ಗಳನ್ನು ಕಬಳಿಸುವ ಮೂಲಕ ದಾಖಲೆ ಬರೆದಿದ್ದಾರೆ. ಕುಲದೀಪ್ ಯಾದವ್ 25 ರನ್ ಗಳನ್ನು ನೀಡಿ ಪಾಕಿಸ್ತಾನದ ಪ್ರಮುಖ 5 ವಿಕೆಟ್ ಗಳನ್ನು ಪಡೆದರು. ಇದು ಪಾಕಿಸ್ತಾನದ ಪರ ಭಾರತೀಯ ಸ್ಪಿನ್ನರ್ ಒಬ್ಬರ 3ನೇ ಉತ್ತಮ ಪ್ರದರ್ಶನವಾಗಿದೆ. 

ಈ ಹಿಂದೆ 1988ರಲ್ಲಿ ಢಾಕಾದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಅರ್ಶದ್ ಅಯೂಬ್ 21 ರನ್ ಗಳಿಗೆ 5 ವಿಕೆಟ್ ಪಡೆದಿದ್ದರು. ಬಳಿಕ 1996ರಲ್ಲಿ ಟೊರಾಂಟೋದಲ್ಲಿ ಭಾರತದ ಅನಿಲ್ ಕುಂಬ್ಳೆ 12 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಬಳಿಕ 2005ರಲ್ಲಿ ಕೊಚ್ಚಿಯಲ್ಲಿ ಸಚಿನ್ ತೆಂಡೂಲ್ಕರ್ 50 ರನ್ ನೀಡಿ 5 ವಿಕೆಟ್ ಪಡೆದಿದ್ದರು.

Best ODI figures by Indian spinner vs Pakistan
5/21 - Arshad Ayub, Dhaka, 1988
5/50 - Sachin Tendulkar, Kochi, 2005
5/25 - Kuldeep Yadav, Colombo (RPS), today*
4/12 - Anil Kumble, Toronto, 1996

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com