ಏಷ್ಯಾ ಕಪ್ 2023: ಎಲೈಟ್ ಗುಂಪಿಗೆ ವಿರಾಟ್ ಕೊಹ್ಲಿ ಸೇರ್ಪಡೆ; ಭಾರತ-ಪಾಕ್ ಪಂದ್ಯದಲ್ಲಿ ಹಲವು ದಾಖಲೆ ನಿರ್ಮಾಣ

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತ ತಂಡ 228 ರನ್ ಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು ಈ ಒಂದು ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿವೆ.
ಭಾರತಕ್ಕೆ ಜಯ
ಭಾರತಕ್ಕೆ ಜಯ

ಕೊಲಂಬೋ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತ ತಂಡ 228 ರನ್ ಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು ಈ ಒಂದು ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿವೆ.

ಭಾರತದ ಭರ್ಜರಿ ಬ್ಯಾಟಿಂಗ್-ಬೌಲಿಂಗ್ ನಿಂದ ಭಾರತ ತಂಡ 228ರನ್ ಗಳ ಅಂತರದಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿದ್ದು, ಕೊಹ್ಲಿ-ರಾಹುಲ್ ಶತಕ, ಕೊಹ್ಲಿ 13 ಸಾವಿರ ರನ್ ದಾಖಲೆ, ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನದ ವಿರುದ್ದ ಭಾರತಕ್ಕೆ ಅತೀ ದೊಡ್ಡ ಗೆಲುವು ಸೇರಿದಂತೆ ಈ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. 

ಇದನ್ನೂ ಓದಿ: ಏಷ್ಯಾಕಪ್ 2023: ವೀಕ್ಷಣೆಯಲ್ಲೂ ದಾಖಲೆ ಬರೆದ ಭಾರತ-ಪಾಕಿಸ್ತಾನ ಪಂದ್ಯ, 2.8ಕೋಟಿ ಮಂದಿಯಿಂದ ವೀಕ್ಷಣೆ
 
ಜಾಗತಿಕ ಏಕದಿನ ಕ್ರಿಕೆಟ್ ನಲ್ಲಿ ಕೊಹ್ಲಿ ದಾಖಲೆ
ಇನ್ನು ಈ ಪಂದ್ಯದಲ್ಲಿ ಅಜೇಯ ಶತಕಗಳಿಸಿದ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ವೃತ್ತಿ ಜೀವನದ 47ನೇ ಶತಕ ಸಿಡಿಸಿದರು. ಅಂತೆಯೇ ಇದೇ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ತಮ್ಮ ರನ್ ಗಳಿಕೆಯನ್ನು 13 ಸಾವಿರಕ್ಕೆ ಏರಿಕೆ ಮಾಡಿಕೊಂಡರು. ಆ ಮೂಲಕ ಏಕದಿನ ಕ್ರಿಕೆಟ್ ನಲ್ಲಿ  ಅತೀ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ 5ನೇ ಸ್ಥಾನಕ್ಕೇರಿದರು. ಪ್ರಸ್ತುತ ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿರುವವರ ಪಟ್ಟಿಯಲ್ಲಿ ಭಾರತದ ಮಾಸ್ಟರ್ ಬ್ಲಾಸ್ಚರ್ ಸಚಿನ್ ತೆಂಡೂಲ್ಕರ್ ಅಗ್ರ ಸ್ಥಾನದಲ್ಲಿದ್ದು, ಸಚಿನ್ ಒಟ್ಟು 18426 ರನ್ ಗಳಿಸಿದ್ದಾರೆ. 2ನೇ ಸ್ಥಾನದಲ್ಲಿರುವ ಶ್ರೀಲಂಕಾದ ಕುಮಾರ ಸಂಗಕ್ಕಾರ 14234 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾದ ರಿಕ್ಕಿಪಾಂಟಿಂಗ್ 13704 ರನ್ ಗಳೊಂದಿಗೆ 3ನೇ ಸ್ಥಾನದಲ್ಲಿದ್ದು, 13430 ರನ್ ಕಲೆಹಾಕಿರುವ ಶ್ರೀಲಂಕಾದ ಸನತ್ ಜಯಸೂರ್ಯ 4ನೇ ಸ್ಥಾನದಲ್ಲಿದ್ದಾರೆ. 

Most runs in ODIs:
18426 - Sachin Tendulkar
14234 - Kumar Sangakkara
13704 - Ricky Ponting
13430 - Sanath Jayasuriya
13024 - Virat Kohli*

3 ಮತ್ತು 4ನೇ ಕ್ರಮಾಂಕದ ಬ್ಯಾಟರ್ ಗಳಿಂದ ಶತಕ
ಇಂದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಶತಕ ಗಳಿಸಿದ್ದು, ಪಂದ್ಯವೊಂದರಲ್ಲಿ 3 ಮತ್ತು 4ನೇ ಕ್ರಮಾಂಕದ ಬ್ಯಾಟರ್ ಗಳಿಂದ ಶತಕ ದಾಖಲಾಗಿರುವುದು ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಇದು ಮೂರನೇ ಬಾರಿಗೆ. ಇದಕ್ಕೂ ಮೊದಲು 1999ರಲ್ಲಿ ಬ್ರಿಸ್ಟೋಲ್ ನಲ್ಲಿ ಕೀನ್ಯಾ ವಿರುದ್ಧ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಶತಕ ಸಿಡಿಸಿದ್ದರು. ಬಳಿಕ 2009ರಲ್ಲಿ ಕೋಲ್ಕತಾದಲ್ಲಿ ಶ್ರೀಲಂಕಾ ವಿರುದ್ಧ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದರು. ಬಳಿಕ ಇಂದು ವಿರಾಟ್ ಕೊಹ್ಲಿ ಮತ್ತು ರಾಹುಲ್ ಶತಕ ಸಿಡಿಸಿದ್ದಾರೆ.

India No.3 and No.4 scoring hundreds in an ODI:
Rahul Dravid & S Tendulkar vs Kenya, Bristol, 1999
G Gambhir & Virat Kohli vs SL, Kolkata, 2009
Virat Kohli & KL Rahul vs PAK, Colombo (RPS), today*

ಏಕದಿನದಲ್ಲಿ 50ಕ್ಕೂ ಅಧಿಕ ರನ್ ಕೊಹ್ಲಿ ದಾಖಲೆ
ಇನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದು ಇದು ಅವರ ಏಕದಿನ ವೃತ್ತಿ ಜೀವನದ 47ನೇ ಶತಕವಾಗಿದೆ. ಅಂತೆಯೇ ಇದು ಅವರ 112ನೇ 50ಕ್ಕೂ ಅಧಿಕ ರನ್ ಗಳಿಕೆಯಾಗಿದೆ. ಕೊಹ್ಲಿ ಏಕದಿನದಲ್ಲಿ ಒಟ್ಟು 47 ಶತಕಗಳೊಂದಿಗೆ 65 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಈ ಪಟ್ಟಿಯಲ್ಸಿ ಅತೀ ಹೆಚ್ಚು ಬಾರಿ 50ಕ್ಕೂ ಅಧಿಕ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸಚಿನ್ ಅಗ್ರ ಸ್ಥಾನದಲ್ಲಿದ್ದು ಸಚಿನ್ ಒಟ್ಟು 145 ಬಾರಿ 50ಕ್ಕೂ ಅಧಿಕ ರನ್ ಕಲೆ ಹಾಕಿದ್ದಾರೆ. 2ನೇ ಸ್ಥಾನದಲ್ಲಿರುವ ಶ್ರೀಲಂಕಾದ ಕುಮಾರ ಸಂಗಕ್ಕಾರ 118 ಬಾರಿ, ರಿಕ್ಕಿಪಾಂಟಿಂಗ್ 112 ಬಾರಿ ಮತ್ತು ದಕ್ಷಿಣ ಆಪ್ರಿಕಾದ ಜಾಕ್ ಕಾಲಿಸ್ 103  ಬಾರಿ 50ಕ್ಕೂ ಅಧಿಕ ರನ್ ಗಳಿಕೆ ಮಾಡಿದ್ದಾರೆ.

Most 50+ scores in ODIs:
145 - Sachin Tendulkar
118 - Kumar Sangakkara
112 - Virat Kohli*
112 - Ricky Ponting
103 - Jacques Kallis

ಇನ್ನಿಂಗ್ಸ್ ವೊಂದರಲ್ಲಿ 4 ಬ್ಯಾಟರ್ ಗಳಿಂದ 50ಕ್ಕೂ ಅಧಿಕ ರನ್ ಗಳಿಕೆ, ಭಾರತದ ದಾಖಲೆ
ಇನ್ನು ಈ ಪಂದ್ಯದಲ್ಲಿ ಕೊಹ್ಲಿ ಮತ್ತು ರಾಹುಲ್ ಶತಕ ಸಿಡಿಸಿದರೆ ಇವರಿಗೂ ಮೊದಲು ಬ್ಯಾಟಿಂಗ್ ನಡೆಸಿದ್ದ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ ಮನ್ ಗಿಲ್ ಅರ್ಧಶತಕ ಗಳಿಸಿದ್ದು ಆ ಮೂಲಕ ಒಂದೇ ಪಂದ್ಯದಲ್ಲಿ ನಾಲ್ಕು ಆಟಗಾರರು 50ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆ ನಿರ್ಮಾಣವಾಗಿದೆ. ಈ ಹಿಂದೆ 2006ರಲ್ಲಿ ಇಂದೋರ್ ನಲ್ಲಿ, 2007ರಲ್ಲಿ ಲೀಡ್ಸ್ ನಲ್ಲಿ ಇಂಗ್ಲೆಂಡ್ ವಿರುದ್ಧ ಮತ್ತು 2017ರಲ್ಲಿ ಬರ್ಮಿಂಗ್ ಹ್ಯಾಂ ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡದ 4 ಆಟಗಾರರು 50ಕ್ಕೂ ಅಧಿಕ ರನ್ ಗಳಿಸಿದ ಸಾಧನೆ ಮಾಡಿದ್ದರು.

Top 4 batters scoring 50+ for India in ODIs:
vs ENG, Indore, 2006
vs ENG, Leeds, 2007
vs PAK, Birmingham, 2017
vs PAK, Colombo (RPS), today*

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com