ಭಾರತ vs ಪಾಕಿಸ್ತಾನ: ರನ್ ಗಳ ಅಂತರದ ಲೆಕ್ಕಾಚಾರದಲ್ಲಿ ಏಷ್ಯಾ ಕಪ್ ಇತಿಹಾಸದ 4ನೇ ದೊಡ್ಡ ಗೆಲುವು

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಇಂದಿನ ಭಾರತ-ಪಾಕಿಸ್ತಾನ ಪಂದ್ಯ ಸಾಕಷ್ಟು ದಾಖಲೆಗಳನ್ನು ಬರೆದಿದ್ದು, ಭಾರತ ಗಳಿಸಿದ 228ರನ್ ಗಳ ಜಯ ಏಷ್ಯಾ ಕಪ್ ಇತಿಹಾಸದ 4ನೇ ದೊಡ್ಡ ಗೆಲುವಾಗಿದೆ.
ಭಾರತಕ್ಕೆ ದಾಖಲೆಯ ಗೆಲುವು
ಭಾರತಕ್ಕೆ ದಾಖಲೆಯ ಗೆಲುವು
Updated on

ಕೊಲಂಬೋ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಇಂದಿನ ಭಾರತ-ಪಾಕಿಸ್ತಾನ ಪಂದ್ಯ ಸಾಕಷ್ಟು ದಾಖಲೆಗಳನ್ನು ಬರೆದಿದ್ದು, ಭಾರತ ಗಳಿಸಿದ 228ರನ್ ಗಳ ಜಯ ಏಷ್ಯಾ ಕಪ್ ಇತಿಹಾಸದ 4ನೇ ದೊಡ್ಡ ಗೆಲುವಾಗಿದೆ.

ರನ್ ಗಳ ಅಂತರದ ಲೆಕ್ಕಾಚಾರದಲ್ಲಿ ಭಾರತ ಗಳಿಸಿದ ಜಯ ಏಷ್ಯಾಕಪ್ ಕ್ರಿಕೆಟ್ ಇತಿಹಾಸದ 4ನೇ ಅತೀ ದೊಡ್ಡ ಗೆಲುವಾಗಿದೆ. ಈ ಹಿಂದೆ 2008ರಲ್ಲಿ ಕರಾಚಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಹಾಂಕಾಂಗ್ ತಂಡವನ್ನು 256ರನ್ ಗಳ ಅಂತರದಲ್ಲಿ ಮಣಿಸಿತ್ತು. ಇದು ರನ್ ಗಳ ಅಂತರದ ಲೆಕ್ಕಾಚಾರದಲ್ಲಿ ಏಷ್ಯಾಕಪ್ ಕ್ರಿಕೆಟ್ ಇತಿಹಾಸದ ಅತೀದೊಡ್ಡ ಗೆಲುವಾಗಿದೆ.

ಇದೇ ಟೂರ್ನಿಯಲ್ಲಿ ಮುಲ್ತಾನ್ ನಲ್ಲಿ ನಡೆದ ನೇಪಾಳ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 238ರನ್ ಗಳ ಅಂತರದ ಜಯ ಸಾಧಿಸಿತ್ತು. ಇದು ಏಷ್ಯಾ ಕಪ್ ಇತಿಹಾಸದ 2ನೇ ಅತಿದೊಡ್ಡ ಗೆಲುವಾಗಿದೆ. ಇದಕ್ಕೂ ಮೊದಲು ಇದೇ ಪಾಕಿಸ್ತಾನ ತಂಡ 2000ರಲ್ಲಿ ಢಾಕಾದಲ್ಲಿ ಬಾಂಗ್ಲಾದೇಶ ತಂಡವನ್ನು 233ರನ್ ಗಳ ಅಂತರದಲ್ಲಿ ಮಣಿಸಿತ್ತು. ಇದು ಏಷ್ಯಾ ಕಪ್ ಕ್ರಿಕೆಟ್ ಇತಿಹಾಸದ 3ನೇ ದೊಡ್ಡ ಗೆಲುವಾಗಿತ್ತು.

Biggest win margin in ODI Asia Cup
256 runs  - IND vs HK, Karachi, 2008
238 runs - PAK vs NEP, Multan, 2023
233 runs - PAK vs BAN, Dhaka, 2000
228 runs - IND vs PAK, Colombo (RPS), today*

ಕೊಲಂಬೋ ಪ್ರೇಮದಾಸ ಕ್ರೀಡಾಂಗಣದಲ್ಲಿ ಅತೀ ದೊಡ್ಡ ಗೆಲುವು
ಇಂದು ಭಾರತ ಗಳಿಸಿದ 228 ರನ್ ಗಳ ಗೆಲುವು ಶ್ರೀಲಂಕಾದ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ರನ್ ಗಳ ಅಂತರದಲ್ಲಿ ಲೆಕ್ಕಾಚಾರದಲ್ಲಿ ದಾಖಲಾದ ಅತೀ ದೊಡ್ಡ ಗೆಲುವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com