ಏಷ್ಯಾ ಕಪ್ 2023: ವೀಕ್ಷಣೆಯಲ್ಲೂ ದಾಖಲೆ ಬರೆದ ಭಾರತ-ಪಾಕಿಸ್ತಾನ ಪಂದ್ಯ; 2.8 ಕೋಟಿ ಮಂದಿಯಿಂದ ವೀಕ್ಷಣೆ

ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಭಾರತ vs ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಣೆಯಲ್ಲೂ ದಾಖಲೆ ಬರೆದಿದ್ದು, ಡಿಸ್ನಿಪ್ಲಸ್ ಹಾಟ್ ಸ್ಟಾರ್ ನಲ್ಲಿ ಬರೊಬ್ಬರಿ 2.8 ಕೋಟಿ ಮಂದಿ ಪಂದ್ಯ ವೀಕ್ಷಣೆ ಮಾಡಿದ್ದಾರೆ.
ಭಾರತ ತಂಡಕ್ಕೆ ಜಯ
ಭಾರತ ತಂಡಕ್ಕೆ ಜಯ

ಕೊಲಂಬೋ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಭಾರತ vs ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಣೆಯಲ್ಲೂ ದಾಖಲೆ ಬರೆದಿದ್ದು, ಡಿಸ್ನಿಪ್ಲಸ್ ಹಾಟ್ ಸ್ಟಾರ್ ನಲ್ಲಿ ಬರೊಬ್ಬರಿ 2.8 ಕೋಟಿ ಮಂದಿ ಪಂದ್ಯ ವೀಕ್ಷಣೆ ಮಾಡಿದ್ದಾರೆ.

ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಭಾರತ vs ಪಾಕಿಸ್ತಾನ ನಡುವಿನ ಪಂದ್ಯವನ್ನು ಡಿಸ್ನಿಪ್ಲಸ್ ಹಾಟ್ ಸ್ಟಾರ್ ನಲ್ಲಿ ಬರೊಬ್ಬರಿ 2.8 ಕೋಟಿ ಮಂದಿ ವೀಕ್ಷಿಸಿದ್ದು, ಇದು ಭಾರತ ಆಡಿರುವ ಪಂದ್ಯಗಳ ಪೈಕಿ ಅತೀ ಹೆಚ್ಚು ವೀಕ್ಷಣೆ ಕಂಡ ಪಂದ್ಯ ಎಂಬ ದಾಖಲೆ ಬರೆದಿದೆ ಎಂದು ಮಾಹಿತಿ ನೀಡಿದ್ದಾರೆ. ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ಇದು ನೂತನ ದಾಖಲೆಯಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತದ ಗೆಲುವಿಗೆ ಶ್ಲಾಘನೆ
ಇದೇ ವೇಳೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ದಾಖಲಿಸಿದ 228ರನ್ ಗಳ ಅಮೋಘ ಜಯವನ್ನು ಶ್ಲಾಘಿಸಿರುವ ಜಯ್ ಶಾ, 'ಅಸಾಧಾರಣ ಬ್ಯಾಟಿಂಗ್ ಪ್ರದರ್ಶನ, ಪರಿಪೂರ್ಣ ಬೌಲಿಂಗ್ ಯೋಜನೆ ಮತ್ತು ಕೊಹ್ಲಿ, ರಾಹುಲ್ ಶತಕಗಳು ಭಾರತದ ಗೆಲುವಿನಲ್ಲಿ ಮೆರುಗು ತಂದವು. ವಿರಾಟ್ ಕೊಹ್ಲಿ ಮತ್ತು ಕುಲದೀಪ್ ಯಾದವ್ ಅವರ ಪ್ರದರ್ಶನಕ್ಕೆ ಹ್ಯಾಟ್ಸ್ ಆಫ್. ಗಾಯದ ನಂತರ ರಾಹುಲ್ ಮತ್ತು ಜಸ್ ಪ್ರೀತ್ ಬುಮ್ರಾ ಅವರ ಗಮನಾರ್ಹ ಕಮ್ ಬ್ಯಾಕ್ ತಂಡಕ್ಕೆ ಬಲ ತುಂಬಿವೆ. ಈ ಪಂದ್ಯ ನಿಜಕ್ಕೂ ಅವಿಸ್ಮರಣೀಯ' ಎಂದು ಟ್ವೀಟ್ ಮಾಡಿದ್ದಾರೆ.

ಕೊಹ್ಲಿ-ರಾಹುಲ್ ಸಾಧನೆಗೆ ಜೈಕಾರ
ಇದೇ ವೇಳೆ ಪಾಕಿಸ್ತಾನದ ವಿರುದ್ಧ ಭರ್ಜರಿ ಬ್ಯಾಟಿಂಗ್ ಮೂಲಕ ಶತಕ ಸಾಧನೆ ಮತ್ತು 13 ಸಾವಿರ ರನ್ ಗಳ ದಾಖಲೆ ಬರೆದ ವಿರಾಟ್ ಕೊಹ್ಲಿ ಸಾಧನೆಗೆ ಹ್ಯಾಟ್ಸಾಫ್ ಹೇಳಿರುವ ಜಯ್ ಶಾ, ಕೊಹ್ಲಿ 13 ಸಾವಿರ ರನ್ ಗಳಿಕೆ ಅವಿಸ್ಮರಣೀಯ ಸಾಧನೆಯಾಗಿದೆ. ನಿಮ್ಮ ಅಚಲ ಬದ್ಧತೆ ಮತ್ತು ಆಟದಲ್ಲಿನ ಅಸಾಧಾರಣ ಸ್ಥಿರತೆಯು ನಿಮ್ಮನ್ನು ನಿಜವಾದ ಕ್ರಿಕೆಟ್ ದಂತಕಥೆಯನ್ನಾಗಿ ಮಾಡುತ್ತದೆ. ಆ ರನ್ಗಳು ಹರಿಯುತ್ತಲೇ ಇರುತ್ತವೆ ಮತ್ತು ನಮ್ಮನ್ನು ಹೆಮ್ಮೆ ಪಡಿಸುವುದನ್ನು ಮುಂದುವರಿಸಿ ಎಂದು ಹೇಳಿದ್ದಾರೆ.

ಅಂತೆಯೇ ಭರ್ಜರಿ ಶತಕದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭರ್ಜರಿ ಫಾರ್ಮ್ ಗೆ ಮರಳಿರುವ ಕನ್ನಡಿಗ ಕೆಎಲ್ ರಾಹುಲ್ ಕಮ್ ಬ್ಯಾಕ್ ಅನ್ನು ಜಯ್ ಶಾ ಶ್ಲಾಘಿಸಿದ್ದಾರೆ. ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಇಂದು ಅವರ ಶತಕವು ಕೇವಲ ವೈಯಕ್ತಿಕ ವಿಜಯವಲ್ಲ. ಆದರೆ ಅವರ ಸ್ಥಿತಿ ಸ್ಥಾಪಕತ್ವಕ್ಕೆ ಸಾಕ್ಷಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com