ಶ್ರೀಲಂಕಾ ತಂಡದ ಆಲ್ರೌಂಡರ್ ದುನಿತ್ ವೆಲ್ಲಲಾಗೆ
ಶ್ರೀಲಂಕಾ ತಂಡದ ಆಲ್ರೌಂಡರ್ ದುನಿತ್ ವೆಲ್ಲಲಾಗೆ

ಏಷ್ಯಾ ಕಪ್ 2023: ಸೋಲಿನ ನಡುವೆಯೂ ಅತ್ಯಪರೂಪದ ದಾಖಲೆ ಬರೆದ ಶ್ರೀಲಂಕಾ ಆಲ್ರೌಂಡರ್

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಭಾರತದ ವಿರುದ್ಧದ ಪಂದ್ಯದಲ್ಲಿ ಸೋಲಿನ ನಡುವೆಯೂ ಶ್ರೀಲಂಕಾ ತಂಡದ ಆಲ್ರೌಂಡರ್ ದುನಿತ್ ವೆಲ್ಲಲಾಗೆ ಅತ್ಯಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ.

ಕೊಲಂಬೋ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಭಾರತದ ವಿರುದ್ಧದ ಪಂದ್ಯದಲ್ಲಿ ಸೋಲಿನ ನಡುವೆಯೂ ಶ್ರೀಲಂಕಾ ತಂಡದ ಆಲ್ರೌಂಡರ್ ದುನಿತ್ ವೆಲ್ಲಲಾಗೆ ಅತ್ಯಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ.

ಹೌದು.. ಇಂದಿನ ಭಾರತದ ವಿರುದ್ಧದ ಪಂದ್ಯದಲ್ಲಿ ದುನಿತ್ ವೆಲ್ಲಲಾಗೆ ಬೌಲಿಂಗ್ ನಲ್ಲಿ 5 ವಿಕೆಟ್ ಮತ್ತು ಬ್ಯಾಟಿಂಗ್ ನಲ್ಲಿ ಅಜೇಯ 42ರನ್ ಗಳಿ ಶ್ರೀಲಂಕಾದ ಗೆಲುವಿಗಾಗಿ ಶ್ರಮಿಸಿದರು. ಆದರೆ ಅವರ ಏಕಾಂಗಿ ಹೋರಾಟ ವ್ಯರ್ಥವಾಯಿತು. ಆದರೂ ದುನಿತ್ ವೆಲ್ಲಲಾಗೆ ಕ್ರಿಕೆಟ್ ಲೋಕದ ಅತ್ಯಪರೂಪದ ದಾಖಲೆ ಬರೆದರು. 

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ಆಟಗಾರನೋರ್ವ ಒಂದೇ ಪಂದ್ಯದಲ್ಲಿ 5 ವಿಕೆಟ್ ಮತ್ತು 40ಕ್ಕೂ ಅಧಿಕ ರನ್ ಗಳಿಸಿರುವ ವಿಚಾರದಲ್ಲಿ ದುನಿತ್ ವೆಲ್ಲಲಾಗೆ ಸ್ಥಾನ ಸಂಪಾದಿಸಿದ್ದಾರೆ. ಈ ಪಟ್ಟಿಯಲ್ಲಿ ದುನಿತ್ ವೆಲ್ಲಲಾಗೆ 3ನೇ ಸ್ಥಾನದಲ್ಲಿದ್ದು, ಅವರಿಗೂ ಮೊದಲು 1997ರಲ್ಲಿ ಇದೇ ಶ್ರೀಲಂಕಾ ತಂಡದ ಸ್ಫೋಟಕ ಬ್ಯಾಟರ್ ಸನತ್ ಜಯಸೂರ್ಯ ಪೋರ್ಟ್ ಆಫ್ ಸ್ಪೈನ್ ನಲ್ಲಿ ನಡೆದ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ 44ರನ್ ಗಳಿಸಿ 5 ವಿಕೆಟ್ ಕಬಳಿಸಿದ್ದರು. ಬಳಿಕ 2016ರಲ್ಲಿ ಡಬ್ಲಿನ್ ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಡಸುನ್ ಶನಕ 5 ವಿಕೆಟ್ ಪಡೆದು ಬ್ಯಾಟಿಂಗ್ ನಲ್ಲಿ 42 ರನ್ ಗಳಿಸಿದ್ದರು.

2008ರಲ್ಲಿ ಇದೇ ಕೊಲಂಬೋದ ಪ್ರಮೇದಾಸ ಕ್ರೀಡಾಂಗಣದಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ ತಿಲಾನ್ ತುಷಾರ 5 ವಿಕೆಟ್ ಪಡೆದು 40 ರನ್ ಗಳಿಸಿದ್ದರು. ಇದೀಗ ಇದೇ ಸಾಧನೆಯನ್ನು ದುನಿತ್ ವೆಲ್ಲಲಾಗೆ ಮಾಡಿದ್ದಾರೆ.

Five-wicket haul and 40-plus runs in an ODI for SL
5/58 & 44(28) - Sanath Jayasuriya vs WI, Port of Spain, 1997
5/43 & 42(19) - Dasun Shanaka vs IRE, Dublin (Malahide), 2016
5/40 & 42*(46)  - Dunith Wellalage vs IND, Colombo RPS, 2023
5/47 & 40(29) - Thilan Thushara vs IND, Colombo RPS, 2008
- Wellalage is also the first to achieve this double in the Asia Cup (ODIs).

 

Related Stories

No stories found.

Advertisement

X
Kannada Prabha
www.kannadaprabha.com