
ಲಖನೌ ಸೂಪರ್ ಜೈಂಟ್ಸ್
ಲಖನೌ: 2023ರ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೂರನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಎದುರು ಡೆಲ್ಲಿ ಸೋಲನುಭವಿಸಿದೆ.
ಲಖನೌ ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಲಖನೌ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಡೆಲ್ಲಿ 50 ರನ್‌ಗಳ ಸೋಲು ಅನುಭವಿಸಿತು.
ಲಖನೌ ನ ಈ ಗೆಲುವಿನಲ್ಲಿ ಕೈಲ್ ಮೇಯರ್ (73 ರನ್, 38 ಎಸೆತ) ಮೊದಲ ಬ್ಯಾಟಿಂಗ್‌ನಲ್ಲಿ ಮಿಂಚಿದರು. ಬೌಲಿಂಗ್‌ನಲ್ಲಿ ಮಾರ್ಕ್ ವುಡ್ (5 ವಿಕೆಟ್) ತಮ್ಮ ಮಾರಕ ಮತ್ತು ವೇಗದ ಬೌಲಿಂಗ್‌ನಿಂದ ಡೆಲ್ಲಿಗೆ ಸೋಲಿನ ಮುಖವನ್ನು ತೋರಿಸಿದರು. ಕೈಲ್ ಮೇಯರ್ಸ್ 14 ರನ್ ಗಳಿಸಿದ್ದಾಗ ಸಿಕ್ಕ ಜೀವನದ ಸಂಪೂರ್ಣ ಲಾಭ ಪಡೆದರು. ಅವರ ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಅವರು 2 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಬಾರಿಸಿದರು.
ಇದನ್ನೂ ಓದಿ: IPL 2023: ಪಂದ್ಯಕ್ಕೆ ಮಳೆ ಅಡ್ಡಿ; ಡಕ್ವರ್ತ್ ಲೂಯಿಸ್ ಪ್ರಕಾರ KKR ವಿರುದ್ಧ 7 ರನ್ ನಿಂದ ಗೆದ್ದ ಪಂಜಾಬ್ ಕಿಂಗ್ಸ್!
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನಾಯಕ ಕೆಎಲ್ ರಾಹುಲ್ ನೇತೃತ್ವದ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 193 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 143 ರನ್ ಗಳಿಸಲಷ್ಟೇ ಶಕ್ತವಾಗಿ 50 ರನ್‌ಗಳಿಂದ ಸೋಲನುಭವಿಸಿತು.
194 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭ ಪಡೆದರೂ ತಂಡ 41 ರನ್ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರ ಪೃಥ್ವಿ ಶಾ (12 ರನ್) ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಮಿಚೆಲ್ ಮಾರ್ಷ್ ಅವರನ್ನೂ ಮಾರ್ಕ್ ವುಡ್ ಖಾತೆ ತೆರೆಯದೆ ಹೊರನಡೆದರು. ಸರ್ಫರಾಜ್ ಖಾನ್ ಕೂಡ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ. ಅವರು ಮಾರ್ಕ್ ವುಡ್ ಎಸೆತದಲ್ಲಿ ಕೆ ಗೋಥಮ್‌ಗೆ ಕ್ಯಾಚ್ ನೀಡಿದರು.