ಚೆನ್ನೈ ಸೂಪರ್ ಕಿಂಗ್ಸ್ ಗೆ ಜಯ
ಕ್ರಿಕೆಟ್
ಐಪಿಎಲ್ 2023: ಕೋಲ್ಕತಾ ವಿರುದ್ಧ ಚೆನ್ನೈಗೆ 50 ರನ್ ಗಳ ಭರ್ಜರಿ ಜಯ
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 50 ರನ್ ಗಳ ಭರ್ಜರಿ ಸಾಧಿಸಿದೆ.
ಕೋಲ್ಕತಾ: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 50 ರನ್ ಗಳ ಭರ್ಜರಿ ಸಾಧಿಸಿದೆ.
ಕೋಲ್ಕತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ನೀಡಿದ 236 ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ ಬರೊಬ್ಬರಿ 50 ರನ್ ಗಳ ಅಂತರದಲ್ಲಿ ಸೋಲುಕಂಡಿತು.
ಕೆಕೆಆರ್ ಪರ ಜೇಸನ್ ರಾಯ್ (61 ರನ್) ಮತ್ತು ರಿಂಕು ಸಿಂಗ್ (ಅಜೇಯ 53ರನ್) ಅರ್ಧಶತಕ ಸಿಡಿಸಿದರು. ಉಳಿದಾವ ಬ್ಯಾಟರ್ ಗಳಿಂದಲೂ ಉತ್ತಮ ಬ್ಯಾಟಿಂಗ್ ಮೂಡಿ ಬರಲಿಲ್ಲ.
ಚೆನ್ನೈ ಪರ ತುಷಾರ್ ದೇಶಪಾಂಡೆ ಮತ್ತು ಮಹೀಶ್ ತೀಕ್ಷ್ಣ ತಲಾ 2 ವಿಕೆಟ್ ಪಡೆದರೆ, ಆಕಾಶ್ ಸಿಂಗ್, ಮೊಯಿನ್ ಅಲಿ, ಜಡೇಜಾ ಮತ್ತು ಪತಿರಣ ತಲಾ 1 ವಿಕೆಟ್ ಪಡೆದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ