ಗಯಾನ: ಭಾರತದ ವಿರುದ್ಧದ 2ನೇ ಟಿ20 ಪಂದ್ಯ ಗೆದ್ದ ಖುಷಿಯಲ್ಲಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಐಸಿಸಿ ಶಾಕ್ ನೀಡಿದ್ದು, ತಂಡದ ಸ್ಟಾರ್ ಬ್ಯಾಟರ್ ಗೆ ದಂಡ ಹೇರಿದೆ.
ವೆಸ್ಟ್ ಇಂಡಿಸ್ ತಂಡ ಎರಡನೇ ಟಿ20 ಪಂದ್ಯದಲ್ಲಿಯೂ ಭಾರತ ತಂಡವನ್ನು ಮಣಿಸಿದ್ದು ಐದು ಪಂದ್ಯಗಳ ಟಿ20 ಸರಣಿಯಲ್ಲಿ ಅಮೋಘ ಮೇಲುಗೈ ಸಾಧಿಸಿದ್ದು, ಎರಡನೇ ಪಂದ್ಯವನ್ನು ಗೆದ್ದ ಬಳಿಕ ಪಂದ್ಯದ ಗೆಲುವಿಗೆ ಕಾರಣವಾದ ನಿಕೋಲಸ್ ಪೂರನ್‌ಗೆ ಐಸಿಸಿ ದಂಡ ವಿಧಿಸಿದೆ. ಭಾರತದ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಪಂದ್ಯ ಸಂಭಾವನೆಯ 15 ಶೇಕಡಾ ದಂಡವನ್ನು ವಿಧಿಸಲಾಗಿದೆ.
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.7ರ ಉಲ್ಲಂಘನೆಗಾಗಿ ಈ ದಂಡನೆ ನೀಡಲಾಗಿದ್ದು, ಆಟಗಾರರು ಅಥವಾ ಬೆಂಬಲ ಸಿಬ್ಬಂದಿಗಳಿಗೆ ಸಾರ್ವಜನಿಕವಾಗಿ ಟೀಕಿಸಿರುವಿದನ್ನು ಈ ಕಾನೂನು ಹೇಳುತ್ತದೆ. ಭಾರತದ ಇನ್ನಿಂಗ್ಸ್‌ನ 4ನೇ ಓವರ್‌ನಲ್ಲಿ ಲೆಗ್ ಬಿಫೋರ್ ವಿಕೆಟ್ ಪೂರನ್ ಅವರು ಅಂಪೈರ್‌ಗಳೊಂದಿಗೆ ಅತೃಪ್ತಿ ವ್ಯಕ್ತಪಡಿಸಿದ್ದು, ಈ ವಿಚಾರವಾಗಿ ಐಸಿಸಿ ಈ ಕ್ರಮ ಕೈಗೊಂಡಿದೆ.
ಪೂರನ್ ಉಲ್ಲಂಘನೆಯನ್ನು ಒಪ್ಪಿಕೊಂಡಿರುವ ಕಾರಣ ಮತ್ತು ಮೈದಾನದ ಅಂಪೈರ್‌ಗಳಾದ ಲೆಸ್ಲಿ ರೀಫರ್ ಮತ್ತು ನಿಗೆಲ್ ಡುಗಿಡ್, ಮೂರನೇ ಅಂಪೈರ್ ಗ್ರೆಗೊರಿ ಬ್ರಾಥ್‌ವೈಟ್, ನಾಲ್ಕನೇ ಅಧಿಕಾರಿ ಪ್ಯಾಟ್ರಿಕ್ ಗುಸ್ಟರ್ಡ್ ಮತ್ತು ಮ್ಯಾಚ್ ರೆಫರಿ ರಿಚಿ ರಿಚರ್ಡ್‌ಸನ್ ಅವರು ಸೂಚಿಸಿದ ಶಿಸ್ತಿನ ಕ್ರಮಗಳಿಗೆ ಸಮ್ಮತಿಸಿದ ಕಾರಣ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲದೆ ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
Advertisement