ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು, ಆದರೆ ಜಡೇಜಾಗೆ ಭಾರಿ ದಂಡ!

ನಾಗ್ಪುರ ಟೆಸ್ಟ್‌ ಪಂದ್ಯ ಮೂರನೇ ದಿನಕ್ಕೆ ಮುಕ್ತಾಯವಾಗಿದ್ದು ಆಸ್ಟ್ರೇಲಿಯಾವನ್ನು ಇನಿಂಗ್ಸ್ ಮತ್ತು 132 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ಅಮೋಘ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ರವೀಂದ್ರ ಜಡೇಜಾ
ರವೀಂದ್ರ ಜಡೇಜಾ

ನಾಗ್ಪುರ: ನಾಗ್ಪುರ ಟೆಸ್ಟ್‌ ಪಂದ್ಯ ಮೂರನೇ ದಿನಕ್ಕೆ ಮುಕ್ತಾಯವಾಗಿದ್ದು ಆಸ್ಟ್ರೇಲಿಯಾವನ್ನು ಇನಿಂಗ್ಸ್ ಮತ್ತು 132 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ಅಮೋಘ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. 

ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್‌ ಕಬಳಿಸುವುದರ ಜೊತೆಗೆ ಭರ್ಜರಿ ಅರ್ಧಶತಕ ಸಿಡಿಸಿದ್ದ ರವೀಂದ್ರ ಜಡೇಜಾ ಭಾರತದ ಈ ಗೆಲುವಿನ ಹೀರೋ ಆಗಿದ್ದರು. ಆದರೆ, ಭಾರತದ ಈ ಅಮೋಘ ವಿಜಯದ ನಂತರ ಇದೀಗ ಭಾರತೀಯ ಅಭಿಮಾನಿಗಳಿಗೆ ನಿರಾಸೆ ಮೂಡಿಸುವ ಸುದ್ದಿಯೊಂದು ಬಂದಿದೆ. 

ವಾಸ್ತವವಾಗಿ, ರವೀಂದ್ರ ಜಡೇಜಾಗೆ ಪಂದ್ಯ ಶುಲ್ಕದ ಶೇಕಡ 25ರಷ್ಟು ದಂಡ ವಿಧಿಸಲಾಗಿದೆ. ನಾಗ್ಪುರ ಟೆಸ್ಟ್ ಪಂದ್ಯದ ಮೊದಲ ದಿನದಂದು ಮೈದಾನದ ಅಂಪೈರ್‌ಗಳ ಅನುಮತಿಯಿಲ್ಲದೆ ಊದಿಕೊಂಡಿದ್ದ ಬೆರಳಿಗೆ ಮುಲಾಮು ಹಚ್ಚಿದ್ದಕ್ಕಾಗಿ ದಂಡವನ್ನು ವಿಧಿಸಲಾಯಿತು.

ನಾಗ್ಪುರ ಟೆಸ್ಟ್ ಪಂದ್ಯದ ಮೊದಲ ದಿನದ ಆಟ ಮುಗಿದ ನಂತರ, ಜಡೇಜಾ ವೇಗಿ ಮೊಹಮ್ಮದ್ ಸಿರಾಜ್ ಅವರ ಕೈಯಿಂದ ಕ್ರೀಮ್ ತೆಗೆದುಕೊಂಡು ಅದನ್ನು ಎಡಗೈ ತೋರು ಬೆರಳಿಗೆ ಉಜ್ಜುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಹೊರಬಿದ್ದ ಬಳಿಕ ಆಸ್ಟ್ರೇಲಿಯಾ ಮಾಧ್ಯಮಗಳು ಭಾರತ ತಂಡದ ಮೇಲೆ ಪ್ರಶ್ನೆಗಳನ್ನು ಎತ್ತಿದ್ದವು. ಕ್ರೀಮ್ ಹಚ್ಚಿಕೊಳ್ಳುವುದು ವೈದ್ಯಕೀಯ ಉದ್ದೇಶಗಳಿಗಾಗಿ ಅನ್ವಯಿಸಿದರು. ಅದು ಚೆಂಡಿನ ಮೇಲೆ ಪರಿಣಾಮ ಬೀರಬಹುದು. ಇದು ಬಾಲ್ ಟ್ಯಾಂಪರಿಂಗ್ ಎಂದು ಆರೋಪಿಸಿದ್ದಾರೆ. 

ಅಂಪೈರ್‌ನ ಅನುಮತಿಯಿಲ್ಲದೆ ಜಡೇಜಾ ಅವರು ಮುಲಾಮುವನ್ನು ಹಚ್ಚಿಕೊಂಡಿರುವುದು ICC ನೀತಿ ಸಂಹಿತೆಯ ಆರ್ಟಿಕಲ್ 2.20 ರ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ. ಆಸ್ಟ್ರೇಲಿಯ ವಿರುದ್ಧ ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಐಸಿಸಿ ನೀತಿ ಸಂಹಿತೆಯ ಹಂತ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತದ ಸ್ಪಿನ್ ಬೌಲರ್ ರವೀಂದ್ರ ಜಡೇಜಾ ಅವರ ಪಂದ್ಯ ಶುಲ್ಕದ 25 ಪ್ರತಿಶತವನ್ನು ದಂಡ ವಿಧಿಸಲಾಗಿದೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೆ ಜಡೇಜಾ ಅವರ ಶಿಸ್ತಿನ ದಾಖಲೆಗೆ ಡಿಮೆರಿಟ್ ಅಂಕವನ್ನು ಸೇರಿಸಲಾಗಿದೆ, ಇದು 24 ತಿಂಗಳುಗಳಲ್ಲಿ ಅವರ ಮೊದಲ ಅಪರಾಧವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com