ಚೇತರಿಕೆ ಕಡೆಗೆ ಒಂದೊಂದೆ ಹೆಜ್ಜೆ: ನಡೆದಾಡಲು ಆರಂಭಿಸಿದ ರಿಷಭ್ ಪಂತ್ ಸ್ಫೂರ್ತಿದಾಯಕ ಸಂದೇಶ!

ಕಾರು ಅಪಘಾತದಿಂದ ಪವಾಡ ಸದೃಶ್ಯ ಪಾರಾಗಿ ಸದ್ಯ ಚೇತರಿಕೆಯ ಹಂತದಲ್ಲಿರುವ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ನಡೆದಾಡಲು ಆರಂಭಿಸಿದ್ದಾರೆ.
ರಿಷಬ್ ಪಂತ್
ರಿಷಬ್ ಪಂತ್

ನವದೆಹಲಿ: ಕಾರು ಅಪಘಾತದಿಂದ ಪವಾಡ ಸದೃಶ್ಯ ಪಾರಾಗಿ ಸದ್ಯ ಚೇತರಿಕೆಯ ಹಂತದಲ್ಲಿರುವ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ನಡೆದಾಡಲು ಆರಂಭಿಸಿದ್ದಾರೆ.

ಟೀಮ್ ಇಂಡಿಯಾದ ಯುವ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್ ಪಂತ್‌, ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಶುಕ್ರವಾರ (ಫೆ.10) ಎರಡು ಫೋಟೊಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ಚೇರಿಕೆಯೆಡೆಗೆ ಒಂದೊಂದೇ ಹೆಜ್ಜೆ ಇಡುತ್ತಿರುವುದಾಗಿ ಶುಭ ಸುದ್ದಿ ನೀಡಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ 30ರಂದು ತಮ್ಮ ಹುಟ್ಟೂರು ಉತ್ತರಾಖಂಡ್‌ನ ರೂರ್ಕಿಗೆ ಕಾರ್‌ನಲ್ಲಿ ತೆರಳುತ್ತಿದ್ದಾದ ಸಂಭವಿಸಿದ ಭೀಕರ ಅಪಘಾತದಲ್ಲಿ ರಿಷಭ್ ಪಂತ್‌ ಗಾಯಗೊಂಡಿದ್ದರು. ಈಗ ಚೇತರಿಕೆಯ ಹಾದಿಯಲ್ಲಿರುವ ಪಂತ್‌, ಪ್ರಗತಿ ಕಂಡಿರುವ ಸುಳಿವು ನೀಡಿದ್ದಾರೆ.

ಮಂಡಿಗೆ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಹಾಕಿರುವುದರಿಂದ ನಡೆಯಲು ಊರುಗೋಲು ಬಳಸಿ ಒಂದೋಂದೇ ಹೆಜ್ಜೆ ಇಡುತ್ತಿರುವುದಾಗಿ ಪಂತ್‌ ತಮ್ಮ ಟ್ವಿಟರ್‌ ನಲ್ಲಿ ಬರೆದುಕೊಂಡಿದ್ದಾರೆ.'ಒಂದು ಹೆಜ್ಜೆ ಮುಂದಕ್ಕೆ, ಒಂದು ಹೆಜ್ಜೆ ದೃಢ, ಒಂದು ಹೆಜ್ಜೆ ಚೇತರಿಕೆಯತ್ತ' ಎಂದು ಪಂತ್ ತಮ್ಮ ಅಭಿಮಾನಿಗಳಿಗಾಗಿ ಸಂದೇಶ ಹಂಚಿದ್ದಾರೆ

ಗಂಭೀರವಾಗಿ ಗಾಯಗೊಂಡು ಕುಂಟುತ್ತಿದ್ದ ರಿಷಭ್ ಪಂತ್‌ ಅವರನ್ನು ಡೆಹರಾಡೂನ್‌ನ ಮ್ಯಾಕ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹಲವು ದಿನಗಳ ಕಾಲ ಐಸಿಯುನಲ್ಲಿ ಇದ್ದ ಪಂತ್‌ ಅವರನ್ನು ಕೊಂಚ ಚೇತರಿಸಿದ ಬಳಿಕ ವಾಯು ಮಾರ್ಗವಾಗಿ ವಿಶೇಷ ವ್ಯವಸ್ಥೆಯೊಂದಿಗೆ ಮುಂಬೈಗೆ ಕರೆತರಲಾಯಿತು. ಭಾರತೀಯ ಕ್ರಿಕೆಟ್‌ನಿಯಂತ್ರಣ ಮಂಡಳಿ (ಬಿಸಿಸಿಐ) ಗಾಯಾಳು ಸ್ಟಾರ್‌ ಕ್ರಿಕೆಟಿಗನಿಗೆ ವಿಶ್ವ ದರ್ಜೆಯ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com