ಐಪಿಎಲ್ 2023: ಗಾಯಗೊಂಡು ಟೂರ್ನಿಯಲ್ಲಿ ಪಾಲ್ಗೊಳ್ಳದಿದ್ದರೂ ರಿಷಬ್ ಪಂತ್ ಗೆ 16 ಕೋಟಿ ರೂ!

ರಸ್ತೆ ಅಪಘಾತದಲ್ಲಿ ಗಾಯಗೊಂಡು ಐಪಿಎಲ್ ಟೂರ್ನಿಯಿಂದಲೇ ರಿಷಬ್ ಪಂತ್ ಹೊರಬಿದ್ದಿದ್ದು, ಆದರೂ ಬಿಸಿಸಿಐನಿಂದ 16 ಕೋಟಿ ರೂ ವೇತನ ಪಡೆಯಲಿದ್ದಾರೆ.
ರಿಷಬ್ ಪಂತ್
ರಿಷಬ್ ಪಂತ್

ಮುಂಬೈ: ರಸ್ತೆ ಅಪಘಾತದಲ್ಲಿ ಗಾಯಗೊಂಡು ಐಪಿಎಲ್ ಟೂರ್ನಿಯಿಂದಲೇ ರಿಷಬ್ ಪಂತ್ ಹೊರಬಿದ್ದಿದ್ದು, ಆದರೂ ಬಿಸಿಸಿಐನಿಂದ 16 ಕೋಟಿ ರೂ ವೇತನ ಪಡೆಯಲಿದ್ದಾರೆ.

ಹೌದು... ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ರಿಷಭ್​ ಪಂತ್ ಚೇತರಿಕೆಗೆ ಸುಮಾರು 9 ತಿಂಗಳು ಸಮಯ ತೆಗೆದುಕೊಳ್ಳಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಆದ್ದರಿಂದ ಪಂತ್​ ಈ ವರ್ಷ ನಡೆಯುವ ಎಲ್ಲ ಕ್ರಿಕೆಟ್​ ಸರಣಿಯಿಂದ ದೂರ ಉಳಿಯುವುದು ಬಹುತೇಕ ಖಚಿತವಾಗಿದೆ. ಮುಂಬೈನ ಸದ್ಯ ಪಂತ್​ ಅಂಧೇರಿ ಪಶ್ಚಿಮದಲ್ಲಿರುವ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದು, 16ನೇ ಆವೃತ್ತಿಯ ಐಪಿಎಲ್​ನಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದುಬಂದಿದೆ.

ಐಪಿಎಲ್ 2023ಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಪಂತ್​ ಅವರನ್ನು 16 ಕೋ.ರೂ.ಗೆ ತಂಡದಲ್ಲೇ ಉಳಿಸಿಕೊಂಡಿತ್ತು. ಆದರೆ ಇದೀಗ ಪಂತ್​ ಅವರು ಐಪಿಎಲ್​ನಲ್ಲಿ ಆಡದಿದ್ದಲ್ಲಿ ಅವರಿಗೆ ಹಣ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಹಣವನ್ನು ಫ್ರಾಂಚೈಸಿ ಬದಲು ಬಿಸಿಸಿಐ ನೀಡುತ್ತದೆ ಎಂದು ವರದಿಯಾಗಿದೆ. ಪಂತ್ ಈ ವರ್ಷ ಐಪಿಎಲ್‌ನಲ್ಲಿ ಆಡದಿದ್ದರೂ, ಬಿಸಿಸಿಐ ಅವರ ಐಪಿಎಲ್ ಸಂಬಳದ 16 ಕೋಟಿ ರೂ.ಗಳನ್ನು ದಿಲ್ಲಿ ಕ್ಯಾಪಿಟಲ್ಸ್‌ ಪರವಾಗಿ ಸಂಪೂರ್ಣವಾಗಿ ಪಾವತಿಸುತ್ತದೆ. ಇದು ಮಾತ್ರವಲ್ಲದೆ, ಕೇಂದ್ರ ಒಪ್ಪಂದದಡಿಯಲ್ಲಿ ಅವರು ಪಡೆದ ವಾರ್ಷಿಕ ರಿಟೈನರ್‌ಶಿಪ್ ಶುಲ್ಕಕ್ಕೆ 5 ಕೋಟಿ ರೂ.ಗಳನ್ನು ನೀಡುತ್ತದೆ ಎಂದು ವರದಿಯಾಗಿದೆ.

ಬಿಸಿಸಿಐ, ಟೀಮ್​ ಇಂಡಿಯಾದ ಎಲ್ಲ ಕೇಂದ್ರೀಯ ಗುತ್ತಿಗೆ ಆಟಗಾರರಿಗೆ ವಿಮೆ ಮಾಡಲಾಗುತ್ತದೆ. ಬಿಸಿಸಿಐ ನಿಯಮಗಳ ಪ್ರಕಾರ, ಈ ಆಟಗಾರರು ಗಾಯದ ಕಾರಣ ಐಪಿಎಲ್‌ನಿಂದ ಹೊರಗುಳಿದಿದ್ದಲ್ಲಿ ಮಂಡಳಿಯಿಂದ ಪೂರ್ಣವಾಗಿ ಅವರಿಗೆ ಮೊತ್ತವನ್ನು ಪಾವತಿಸಲಾಗುತ್ತದೆ. ಈ ಮೊತ್ತವನ್ನು ವಿಮಾ ಕಂಪನಿ ಪಾವತಿಸುತ್ತದೆ. ಆದ್ದರಿಂದ ಫ್ರಾಂಚೈಸಿ ಬದಲು ಆಟಗಾರರಿಗೆ ಬಿಸಿಸಿಐ ಹಣ ಪಾವತಿಸುತ್ತದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com