2ನೇ ಏಕದಿನ ಪಂದ್ಯ: 215 ರನ್ ಗಳಿಗೆ ಶ್ರೀಲಂಕಾ ಕಟ್ಟಿಹಾಕಿದ ಭಾರತ

ಇಲ್ಲಿನ ಈಡನ್ ಗಾರ್ಡನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಸ್ಪೀನರ್ ಕುಲದೀಪ್ ಯಾದವ್ ಹಾಗೂ ವೇಗಿ ಮೊಹಮ್ಮದ್ ಸಿರಾಜ್ ಅವರ ನೆರವಿನಿಂದ ಟೀಂ ಇಂಡಿಯಾ, ಲಂಕಾ ಪಡೆಯನ್ನು ಕೇವಲ 215 ರನ್ ಗಳಿಗೆ ಕಟ್ಟಿ ಹಾಕಿದೆ.
ಟೀಂ ಇಂಡಿಯಾ ಬೌಲರ್ ಮೊಹಮ್ಮದ್ ಸಿರಾಜ್
ಟೀಂ ಇಂಡಿಯಾ ಬೌಲರ್ ಮೊಹಮ್ಮದ್ ಸಿರಾಜ್

ಕೊಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಸ್ಪೀನರ್ ಕುಲದೀಪ್ ಯಾದವ್ ಹಾಗೂ ವೇಗಿ ಮೊಹಮ್ಮದ್ ಸಿರಾಜ್ ಅವರ ನೆರವಿನಿಂದ ಟೀಂ ಇಂಡಿಯಾ, ಲಂಕಾ ಪಡೆಯನ್ನು ಕೇವಲ 215 ರನ್ ಗಳಿಗೆ ಕಟ್ಟಿ ಹಾಕಿದೆ.

ಟಾಸ್ ಗೆದ್ದು ಮೊದಲಿಗೆ ಬ್ಯಾಟ್ ಮಾಡಿದ ಶ್ರೀಲಂಕಾ ತಂಡದ ಆರಂಭಿಕ ಆಟಗಾರ  ಅವಿಸ್ಕಾ ಫರ್ನಾಂಡೋಗೆ  ಮೊಹಮ್ಮದ್ ಸಿರಾಜ್ ಮುಳುವಾದರು. ತದನಂತರ ಸಂಕಷ್ಟಕ್ಕೆ ಸಿಲುಕಿದ ಲಂಕಾ ತಂಡ ಮೊದಲ 10 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ ಕೇವಲ 51 ರನ್  ಗಳಿಸಿತು. 

ನಂತರ 34 ರನ್ ಗಳಿಸಿದ ಕುಸಾಲ್ ಕುಲದೀಪ್ , ಯಾದವ್ ಬೌಲಿಂಗ್ ನಲ್ಲಿ ಔಟಾದರೆ. ಧನಂಜಯ್ ಡಿ ಸಿಲ್ವಾ, ಅಕ್ಸರ್ ಪಟೇಲ್ ಬೌಲಿಂಗ್ ನಲ್ಲಿ ಡೆಕ್ ಔಟ್ ಆದರು.  ನುವಾನಿಡು ಹೊರತುಪಡಿಸಿದರೆ ಬೇರೆ ಯಾವೊಬ್ಬ ಲಂಕಾ ಆಟಗಾರರು ಕ್ರೀಸ್ ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ನುವಾನಿಡು 63 ಎಸೆತಗಳಲ್ಲಿ 50 ರನ್ ಗಳಿಸುವ ಮೂಲಕ ಏಕದಿನ ಪಂದ್ಯದಲ್ಲಿ ಚೊಚ್ಚಲ ಬಾರಿಗೆ ಅರ್ಧ ಶತಕ ಗಳಿಸಿದರು.

ಚಮಿಕಾ 17 ರನ್ ಗಳಿಸುವುದರೊಂದಿಗೆ ಲಂಕಾ ರನ್ ವೇಗ ಹೆಚ್ಚಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಹೀಗೆ ಲಂಕಾ ತಂಡ 39.4 ಓವರ್ ಗಳಲ್ಲಿ 215 ರನ್ ಗಳಿಗೆ ಆಲೌಟ್ ಆಯಿತು. ಭಾರತ ಪರ ಮೊಹಮ್ಮದ್ ಸಿರಾಜ್ 3, ಉಮ್ರಾನ್ ಎರಡು ವಿಕೆಟ್ ಪಡೆದರೆ ಅಕ್ಸರ್ ಪಟೇಲ್ 1 ವಿಕೆಟ್ ಪಡೆದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com