ನ್ಯೂಜಿಲೆಂಡ್ ವಿರುದ್ಧ ದ್ವಿಶತಕ: ಕ್ರಿಕೆಟ್ ಜಗತ್ತಿನ Elite Club ಸೇರಿದ ಶುಭ್ ಮನ್ ಗಿಲ್, ಭಾರತದ 5ನೇ ಆಟಗಾರ, 7ನೇ ದ್ವಿಶತಕ
ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತದ ಬೃಹತ್ ಮೊತ್ತಕ್ಕೆ ಕಾರಣವಾಗಿರುವ ಶುಭ್ ಮನ್ ಗಿಲ್ ತಮ್ಮ ಅಮೋಘ ದ್ವಿಶತಕ ಮೂಲಕ ಕ್ರಿಕೆಟ್ ಜಗತ್ತಿನ Elite Club ಸೇರಿದ್ದಾರೆ.
Published: 18th January 2023 08:28 PM | Last Updated: 19th January 2023 04:57 PM | A+A A-

ಶುಭ್ ಮನ್ ಗಿಲ್
ಹೈದರಾಬಾದ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತದ ಬೃಹತ್ ಮೊತ್ತಕ್ಕೆ ಕಾರಣವಾಗಿರುವ ಶುಭ್ ಮನ್ ಗಿಲ್ ತಮ್ಮ ಅಮೋಘ ದ್ವಿಶತಕ ಮೂಲಕ ಕ್ರಿಕೆಟ್ ಜಗತ್ತಿನ Elite Club ಸೇರಿದ್ದಾರೆ.
ಹೌದು.. ಹೈದರಾಬಾದ್ ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಶುಭ್ ಮನ್ ಗಿಲ್ ಭರ್ಜರಿ ಬ್ಯಾಟಿಂಗ್ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ತಮ್ಮ ಚೊಚ್ಚಲ ದ್ಪಿಶತಕ ಸಿಡಿಸಿದರು.
ಇದನ್ನೂ ಓದಿ: ಮೊದಲ ಏಕದಿನ ಪಂದ್ಯ: ಟಾಪ್ ಸ್ಕೋರಿಂಗ್ ಅಂತರದಲ್ಲೂ ದಾಖಲೆ
ಕೇವಲ 149 ಎಸೆತಗಳನ್ನು ಎದುರಿಸಿದ ಗಿಲ್ 9 ಸಿಕ್ಸರ್ ಮತ್ತು 19 ಬೌಂಡರಿಗಳ ನೆರವಿನಿಂದ 208ರನ್ ಗಳನ್ನು ಕಲೆಹಾಕಿದರು. ಆ ಮೂಲಕ ಏಕದಿನ ಕ್ರಿಕೆಟ್ ವೃತ್ತಿ ಜೀವನದ ಚೊಚ್ಚಲ ದ್ವಿಶತಕ ಸಿಡಿಸಿದರು.
The Illustrious 200 Club
— BCCI (@BCCI) January 18, 2023
Welcome @ShubmanGill #TeamIndia | #INDvNZ | @mastercardindia pic.twitter.com/EFZ6FXffu6
ಅಂತೆಯೇ ಈ ದ್ವಿಶತಕ ಮೂಲಕ ಗಿಲ್ ಕ್ರಿಕೆಟ್ ಲೋಕದ ಅಪರೂಪದ ಸಾಧನೆ ಮಾಡಿದ್ದು, ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಸಿಡಿಸಿದ ಅತ್ಯಂತ ಚಿಕ್ಕ ವಯಸ್ಸಿನ ಕ್ರಿಕೆಟಿಗ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ: ಮೊದಲು ಬ್ಯಾಟಿಂಗ್ ವೇಳೆ ಸತತ 4ನೇ ಬಾರಿಗೆ 300ಕ್ಕೂ ಅಧಿಕ ರನ್ ಕಲೆಹಾಕಿದ ಭಾರತ
ಅಂತೆಯೇ ಜಾಗತಿಕ ಕ್ರಿಕೆಟ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಗರಿಷ್ಛ ವೈಯುಕ್ತಿಕ ಸ್ಕೋರ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಗಿಲ್ ಅಗ್ರಸ್ಥಾನಕ್ಕೇರಿದ್ದಾರೆ.
ಭಾರತದ 5ನೇ ಆಟಗಾರ, 7ನೇ ದ್ವಿಶತಕ
ಇನ್ನು ಏಕದಿನ ಕ್ರಿಕೆಟ್ ನಲ್ಲಿ ಗಿಲ್ ಸಿಡಿಸಿದ ದ್ವಿಶತಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ದಾಖಲಾದ 10ನೇ ದ್ವಿಶತಕವಾಗಿದೆ. ಅಂತೆಯೇ ಭಾರತದ ಪರ ದಾಖಲಾದ 7ನೇ ದ್ವಿಶತಕವಾಗಿದೆ. ಅಲ್ಲದೆ ಭಾರತದ ಪರ ದ್ವಿಶತಕ ಸಿಡಿಸಿದ 5ನೇ ಆಟಗಾರ ಎಂಬ ಕೀರ್ತಿಗೆ ಶುಭ್ ಮನ್ ಗಿಲ್ ಪಾತ್ರರಾಗಿದ್ದಾರೆ.
200 reasons to cheer!
— BCCI (@BCCI) January 18, 2023
Shubman Gill joins a very special list
Follow the match https://t.co/IQq47h2W47 #TeamIndia | #INDvNZ | @ShubmanGill pic.twitter.com/xsZ5viz8fk
ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧ ದಾಖಲೆಯ ದ್ವಿಶತಕ: ಈ ಸಾಧನೆ ಮಾಡಿದ ಅತ್ಯಂತ ಚಿಕ್ಕ ಪ್ರಾಯದ ಕ್ರಿಕೆಟಿಗ ಗಿಲ್!
ಈ ಹಿಂದೆ ಭಾರತದ ಪರ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ, ಇಶಾನ್ ಕಿಶನ್ ಭಾರತದ ಪರ ದ್ವಿಶತಕದ ಸಾಧನೆ ಮಾಡಿದ್ದರು. ಇದೀಗ ಈ ಪಟ್ಟಿಗೆ ಶುಭ್ ಮನ್ ಗಿಲ್ ಸೇರಿದ್ದಾರೆ. ಗಿಲ್ ಇಂದು ಸಿಡಿಸಿದ ದ್ವಿಶತಕ ಭಾರತದ ಪರ ದಾಖಲಾದ 7ನೇ ದ್ವಿಶತಕವಾಗಿದೆ. ಈ ಏಳು ದ್ವಿಶತಕಗಳ ಪೈಕಿ ರೋಹಿತ್ ಶರ್ಮಾ 3 ಬಾರಿ ದ್ವಿಶತಕ ಸಿಡಿಸಿದ್ದಾರೆ.
ದ್ವಿಶತಕ ಸಿಡಿಸಿದ ಜಗತ್ತಿನ 8ನೇ ಆಟಗಾರ
ಇನ್ನು ಜಾಗತಿಕ ಕ್ರಿಕೆಟ್ ನಲ್ಲಿ ಏಕದಿನ ಮಾದರಿಯಲ್ಲಿ ದ್ವಿಶತಕ ಸಿಡಿಸಿದ ಜಗತ್ತಿನ 8ನೇ ಆಟಗಾರ ಎಂಬ ಕೀರ್ತಿಗೂ ಗಿಲ್ ಪಾತ್ರರಾಗಿದ್ದಾರೆ. ಭಾರತದ ಆಟಗಾರರು ಮಾತ್ರವಲ್ಲದೇ ವೆಸ್ಟ್ ಇಂಡೀಸ್ ಕ್ರಿಸ್ ಗೇಯ್ಲ್, ನ್ಯೂಜಿಲೆಂಡ್ ನ ಮಾರ್ಟಿನ್ ಗಪ್ಟಿಲ್ ಮತ್ತು ಪಾಕಿಸ್ತಾನದ ಫಖರ್ ಜಮಾನ್ ದ್ವಿಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.