2ನೇ ಏಕದಿನ: ಶಮಿ ಮಾರಕ ಬೌಲಿಂಗ್, ನ್ಯೂಜಿಲೆಂಡ್ ನ 6 ವಿಕೆಟ್ ಪತನ

ಅತಿಥೇಯ ಟೀಂ ಇಂಡಿಯಾ ವಿರುದ್ಧ 2ನೇ ಪಂದ್ಯದಲ್ಲಿ ಭಾರತೀಯ ಬೌಲರ್ ಗಳ ಮಾರಕ ಬೌಲಿಂಗ್ ತತ್ತರಿಸಿರುವ ಪ್ರವಾಸಿ ನ್ಯೂಜಿಲೆಂಡ್ ತಂಡ ಆರಂಭದಲ್ಲೇ ಬರೊಬ್ಬರಿ 6 ವಿಕೆಟ್ ಕಳೆದು ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ಮಹಮದ್ ಶಮಿ ವಿಕೆಟ್ ಸಂಭ್ರಮ
ಮಹಮದ್ ಶಮಿ ವಿಕೆಟ್ ಸಂಭ್ರಮ

ರಾಯ್ಪುರ: ಅತಿಥೇಯ ಟೀಂ ಇಂಡಿಯಾ ವಿರುದ್ಧ 2ನೇ ಪಂದ್ಯದಲ್ಲಿ ಭಾರತೀಯ ಬೌಲರ್ ಗಳ ಮಾರಕ ಬೌಲಿಂಗ್ ತತ್ತರಿಸಿರುವ ಪ್ರವಾಸಿ ನ್ಯೂಜಿಲೆಂಡ್ ತಂಡ ಆರಂಭದಲ್ಲೇ ಬರೊಬ್ಬರಿ 6 ವಿಕೆಟ್ ಕಳೆದು ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ರಾಯ್ಪುರದ ಶಾಹೀದ್ ವೀರ್ ನಾರಾಯಣ ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡಕ್ಕೆ ಭಾರತದ ಮಹಮದ್ ಶಮಿ ಮಾರಕವಾಗಿ ಪರಿಣಮಿಸಿದರು. ಇನ್ನಿಂಗ್ಸ್ ನ ಮೊದಲ ಓವರ್ ನ ಐದನೇ ಎಸೆತದಲ್ಲೇ ಕಿವೀಸ್ ಗೆ ಆಘಾತ ನೀಡಿದ ಶಮಿ ಆರಂಭಿಕ ಆಟಗಾರ ಫಿನ್ ಅಲೆನ್ ರನ್ನು ಪೆವಿಲಿಯನ್ ಗೆ ಅಟ್ಟಿದರು. ಬಳಿಕ 9ನೇ ಓವರ್ ನಲ್ಲಿ ಸಿರಾಜ್ ಬೌಲಿಂಗ್ ನಲ್ಲಿ ಹೆನ್ರಿ ನಿಕೋಲಸ್ ಔಟಾಗಿ ನ್ಯೂಜಿಲೆಂಡ್ ಆರಂಭಿಕ ಆಘಾತ ನೀಡಿದರು.

ಈ 2 ವಿಕೆಟ್ ಗಳ ಬೆನ್ನಲ್ಲೇ ಮತ್ತೆ ಪಾಂಡ್ಯಾ ನ್ಯೂಜಿಲೆಂಡ್ ಗೆ ಆಘಾತ ನೀಡಿ ಡೆವೋನ್ ಕಾನ್ವೇ ರನ್ನು ಔಟ್ ಮಾಡಿದರು. ಬಳಿಕ ಟಾಮ್ ಲಾಥಮ್ ರನ್ನು ಶಾರ್ದೂಲ್ ಠಾಕೂರ್ ಔಟ್ ಮಾಡಿದರೆ, ನ್ಯೂಜಿಲೆಂಡ್ ಪರ ಈ ಪಂದ್ಯದಲ್ಲೂ ಮಾರಣಾಂತಿಕವಾಗುತ್ತಿದ್ದ ಕಳೆದ ಪಂದ್ಯದ ಹೀರೋ ಮೈಕೆಲ್ ಬ್ರೇಸ್ ವೆಲ್ ರನ್ನು ಶಮಿ ರೋಚಕವಾಗಿ ಔಟ್ ಮಾಡಿ ಪೆವಿಲಿಯನ್ ಗೆ ಅಟ್ಟಿದರು.

ಆ ಮೂಲಕ ನ್ಯೂಜಿಲೆಂಡ್ ತಂಡ ಕೇವಲ 56 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಭಾರತದ ಶಮಿ 3 ವಿಕೆಟ್ ಪಡೆದು ಮಿಂಚಿದರೆ, ಸಿರಾಜ್, ಠಾಕೂರ್ ಮತ್ತು ಪಾಂಡ್ಯಾ ತಲಾ ಒಂದು ವಿಕೆಟ್ ಪಡೆದಿದ್ದಾರೆ.

ಇತ್ತೀಚಿನ ವರದಿ ಬಂದಾಗ ನ್ಯೂಜಿಲೆಂಡ್ ತಂಡ 23.3 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದೆ. 22 ರನ್ ಗಳಿಸಿರುವ ಗ್ಲೇನ್ ಫಿಲಿಪ್ಸ್ ಮತ್ತು 6 ರನ್ ಗಳಿಸಿರುವ ಸ್ಯಾಂಟ್ನರ್ ಕ್ರೀಸ್ ನಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com