ಐಸಿಸಿ ವರ್ಷದ ಅತ್ಯುತ್ತಮ ಟಿ20 ತಂಡದಲ್ಲಿ ಭಾರತದ ಮೂವರು ಕ್ರಿಕೆಟಿಗರಿಗೆ ಸ್ಥಾನ!

ಐಸಿಸಿ 2022ರ ಅತ್ಯುತ್ತಮ ಟಿ20 ತಂಡವನ್ನು ಪ್ರಕಟಿಸಿದ್ದು ಟೀಂ ಇಂಡಿಯಾ ಮೂವರು ಆಟಗಾರರು ಸ್ಥಾನಪಡೆದಿದ್ದಾರೆ.
ಟೀಂ ಇಂಡಿಯಾ
ಟೀಂ ಇಂಡಿಯಾ

ಐಸಿಸಿ 2022ರ ಅತ್ಯುತ್ತಮ ಟಿ20 ತಂಡವನ್ನು ಪ್ರಕಟಿಸಿದ್ದು ಟೀಂ ಇಂಡಿಯಾ ಮೂವರು ಆಟಗಾರರು ಸ್ಥಾನಪಡೆದಿದ್ದಾರೆ.

ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ಗೆ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದ ಜೋಸ್ ಬಟ್ಲರ್ 2022ರಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದು ತಂಡ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇನ್ನು ಟೀಂ ಇಂಡಿಯಾದ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಹನ್ನೊಂದರಲ್ಲಿ ಸ್ಥಾನ ಪಡೆದಿದ್ದಾರೆ.

ತಂಡದಲ್ಲಿ ಹೆಚ್ಚು ಭಾರತದ ಆಟಗಾರರಿದ್ದಾರೆ. ಇನ್ನುಳಿದಂತೆ ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಲಾ ಇಬ್ಬರು. ನ್ಯೂಜಿಲೆಂಡ್, ಐರ್ಲೆಂಡ್, ಜಿಂಬಾಬ್ವೆ ಮತ್ತು ಶ್ರೀಲಂಕಾ ತಲಾ ಒಬ್ಬ ಆಟಗಾರರು ಆಯ್ಕೆಯಾಗಿದ್ದಾರೆ.

'2022ರಲ್ಲಿ ವಿರಾಟ್ ಕೊಹ್ಲಿ ಹಳೆಯ ಕೊಹ್ಲಿಯ ಆಟವನ್ನು ಮತ್ತೊಮ್ಮೆ ತೋರಿಸಿದರು. ಅವರು ಏಷ್ಯಾ ಕಪ್ ನಲ್ಲಿ ಅಬ್ಬರಿಸಿದರು. ಐದು ಪಂದ್ಯಗಳಲ್ಲಿ 276 ರನ್ಗಳೊಂದಿಗೆ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಹೊರಹೊಮ್ಮಿದರು. ಅಫ್ಘಾನಿಸ್ತಾನದ ವಿರುದ್ಧ ಅಮೋಘ ಶತಕ ಬಾರಿಸುವ ಮೂಲಕ ತಮ್ಮ ಮೂರು ವರ್ಷಗಳ ಶತಕದ ಬರವನ್ನು ಸಹ ಕೊನೆಗೊಳಿಸಿದರು. 

ಕೊಹ್ಲಿ ಇದೇ ಫಾರ್ಮ್ ಅನ್ನು ಟಿ20 ವಿಶ್ವಕಪ್ ನಲ್ಲೂ ಮುಂದುವರೆದಿಸಿದ್ದರು. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅಜೇಯ 82 ಬಾರಿಸಿದ್ದರು. ಅಲ್ಲದೆ 296 ರನ್‌ಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ಯಾದವ್ ಅವರು 2022 ರಲ್ಲಿ T20I ಗಳಲ್ಲಿ ಅವರ ಅದ್ಭುತ ಫಾರ್ಮ್‌ನ ನಂತರ ಪಟ್ಟಿಯಲ್ಲಿ ಸೇರ್ಪಡೆಗೊಂಡರು. ಅಲ್ಲಿ ಅವರು 1,164 ರನ್‌ಗಳೊಂದಿಗೆ ಸ್ವರೂಪದಲ್ಲಿ ವರ್ಷದ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದು ಅಲ್ಲದೆ ICC T20I ಶ್ರೇಯಾಂಕದಲ್ಲಿ ನಂ.1 ಸ್ಥಾನವನ್ನು ಪಡೆದಿದ್ದಾರೆ.

ಪೂರ್ಣ ತಂಡ ಹೀಗಿದೆ:
ಜೋಸ್ ಬಟ್ಲರ್ (ನಾಯಕ, ವಿಕೆಟ್ ಕೀಪರ) (ಇಂಗ್ಲೆಂಡ್), ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ), ವಿರಾಟ್ ಕೊಹ್ಲಿ (ಭಾರತ), ಸೂರ್ಯಕುಮಾರ್ ಯಾದವ್ (ಭಾರತ), ಗ್ಲೆನ್ ಫಿಲಿಪ್ಸ್ (ನ್ಯೂಜಿಲೆಂಡ್), ಸಿಕಂದರ್ ರಜಾ (ಜಿಂಬಾಬ್ವೆ), ಹಾರ್ದಿಕ್ ಪಾಂಡ್ಯ (ಭಾರತ), ಸ್ಯಾಮ್ ಕುರಾನ್ (ಇಂಗ್ಲೆಂಡ್), ವನಿಂದು ಹಸರಂಗಾ (ಶ್ರೀಲಂಕಾ), ಹ್ಯಾರಿಸ್ ರೌಫ್ (ಪಾಕಿಸ್ತಾನ), ಜೋಶ್ ಲಿಟಲ್ (ಐರ್ಲೆಂಡ್).

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com