"ಟಾಪ್ ಆರ್ಡರ್‌ಗೆ ಒಂದು ಕಠಿಣ ಸಂದೇಶ...": WTC ಫೈನಲ್‌ನಲ್ಲಿ ಭಾರತದ ಪ್ರದರ್ಶನದ ಕುರಿತು ಸೌರವ್ ಗಂಗೂಲಿ
ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೌಲಿಂಗ್ ದಾಳಿಗೆ ಪತರುಗುಟ್ಟಿದ ಟೀಂ ಇಂಡಿಯಾ ಟಾಪ್ ಆರ್ಡರ್ ಬ್ಯಾಟರ್ ಗಳಿಗೆ ಟೀಂ ಇಂಡಿಯಾ ಮಾಜಿ ನಾಯಕ ಸೌರಲ್ ಗಂಗೂಲಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
Published: 10th June 2023 02:12 PM | Last Updated: 22nd August 2023 12:55 PM | A+A A-

ಸೌರವ್ ಗಂಗೂಲಿ
ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೌಲಿಂಗ್ ದಾಳಿಗೆ ಪತರುಗುಟ್ಟಿದ ಟೀಂ ಇಂಡಿಯಾ ಟಾಪ್ ಆರ್ಡರ್ ಬ್ಯಾಟರ್ ಗಳಿಗೆ ಟೀಂ ಇಂಡಿಯಾ ಮಾಜಿ ನಾಯಕ ಸೌರಲ್ ಗಂಗೂಲಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪ್ರಭಾವಿ ಬೌಲಿಂಗ್ ನಲ್ಲಿ ಟೀಂ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್ ಗಳು ವಿಫಲವಾದರೂ ಅಜಿಂಕ್ಯ ರಹಾನೆ ಮತ್ತು ಶಾರ್ದೂಲ್ ಠಾಕೂರ್ ಭಾರತದ ಇನ್ನಿಂಗ್ಸ್ ಗೆ ಜೀವ ತುಂಬಿದರು. ಇದು ತಂಡದ ಟಾಪ್ ಆರ್ಡರ್ ಗೆ ಕಠಿಣ ಸಂದೇಶವಾಗಿದೆ ಎಂದು ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: WTC Final 2023: ನಿರ್ಣಾಯಕ ಬ್ಯಾಟಿಂಗ್ ಮೂಲಕ ಬ್ರಾಡ್ಮನ್- ಬಾರ್ಡರ್ ದಾಖಲೆ ಸರಿಗಟ್ಟಿದ ಶಾರ್ದೂಲ್ ಠಾಕೂರ್
ರಹಾನೆ ಮತ್ತು ಶಾರ್ದೂಲ್ ಬ್ಯಾಟಿಂಗ್ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಗಂಗೂಲಿ, 'ಮೇಲ್ನೋಟಕ್ಕೆ ಹೇಗೆ ಬ್ಯಾಟಿಂಗ್ ಮಾಡಬೇಕು ಎಂಬುದನ್ನು ಅವರು ಡ್ರೆಸ್ಸಿಂಗ್ ರೂಮ್‌ಗೆ ತೋರಿಸಿದರು.. ಇದು "ಟಾಪ್ ಆರ್ಡರ್‌ಗೆ ಸಂದೇಶ" ಎಂದು ನೋಡಬಹುದು ಎಂದು ಗಂಗೂಲಿ ಹೇಳಿದರು. ಕೊಂಚ ಪರಿಶ್ರಮದೊಂದಿಗೆ ಅದೃಷ್ಟವನ್ನು ಒಲಿಸಿಕೊಂಡು ಆಡಿದರೆ ಮಾತ್ರ ಈ ವಿಕೆಟ್ ನಲ್ಲಿ ರನ್ ಗಳಿಸಲು ಸಾಧ್ಯವಾಗುತ್ತದೆ..
ಇದನ್ನು ರಹಾನೆ ಮತ್ತು ಶಾರ್ದೂಲ್ ಠಾಕೂರ್ ಉತ್ತಮವಾಗಿ ಡ್ರೆಸ್ಸಿಂಗ್ ರೂಮ್‌ಗೆ ತೋರಿಸಿ ಕೊಟ್ಟಿದ್ದಾರೆ. ರಹಾನೆಗೆ ಸಂಪೂರ್ಣ ಕ್ರೆಡಿಟ್ ಸಲ್ಲಬೇಕು, ಅವರು ಅದ್ಭುತವಾಗಿದ್ದರು. ಶಾರ್ದೂಲ್ ಆರಂಭದಲ್ಲಿ ಜರ್ಜರಿತರಾದರೂ ಬಳಿಕ ಅವರ ಬ್ಯಾಟಿಂಗ್ ಕೌಶಲ್ಯ ಚೇತರಿಸಿಕೊಂಡಿತು. ಅಲ್ಲಿ ಅವರು ಈ ಹಿಂದೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಇದು ಭಾರತದಿಂದ ಉತ್ತಮ ಹೋರಾಟವಾಗಿದೆ. ಇದು ಅಗ್ರ ಕ್ರಮಾಂಕಕ್ಕೆ ಸಂದೇಶವಾಗಿದೆ" ಎಂದು ಗಂಗೂಲಿ ಸ್ಟಾರ್ ಸ್ಪೋರ್ಟ್ಸ್‌ಗೆ ನೀಡಿರುವ ಹೇಳಿಕೆಯ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್: ಆಸ್ಟ್ರೇಲಿಯಾಕ್ಕೆ 296 ರನ್ ಗಳ ಮುನ್ನಡೆ
ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಮೂರನೇ ದಿನದಂದು ಭಾರತದ ವಿರುದ್ಧದ ಆಸ್ಚ್ರೇಲಿಯಾ ಒಟ್ಟಾರೆ 296 ರನ್‌ಗಳ ಮುನ್ನಡೆ ಸಾಧಿಸಿದ್ದು, 2ನೇ ಇನ್ನಿಂಗ್ಸ್ ನಲ್ಲಿ ನಾಲ್ಕು ವಿಕೆಟ್‌ಗಳಿಗೆ 123 ರನ್ ಗಳಿಸಿದೆ. ದಿನದಾಟ ಮುಕ್ತಾಯದ ವೇಳೆಗೆ, ಮಾರ್ನಸ್ ಲ್ಯಾಬುಸ್ಚಾಗ್ನೆ ಮತ್ತು ಕ್ಯಾಮರೂನ್ ಗ್ರೀನ್ ಕ್ರಮವಾಗಿ 41 ಮತ್ತು 7 ರನ್ ಗಳಿಸಿ ಕ್ರೀಸ್ ನಲ್ಲಿದ್ದರು.