WTC Final 2023: ನಿರ್ಣಾಯಕ ಬ್ಯಾಟಿಂಗ್ ಮೂಲಕ ಬ್ರಾಡ್ಮನ್- ಬಾರ್ಡರ್‌ ದಾಖಲೆ ಸರಿಗಟ್ಟಿದ ಶಾರ್ದೂಲ್ ಠಾಕೂರ್

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಚ್ರೇಲಿಯಾ ವಿರುದ್ಧ ಗಮನಾರ್ಹ ಪ್ರದರ್ಶನ ತೋರಿದ ಟೀಂ ಇಂಡಿಯಾದ ಶಾರ್ದೂಲ್ ಠಾಕೂರ್ ಬ್ರಾಡ್ಮನ್- ಬಾರ್ಡರ್‌ ದಾಖಲೆ ಸರಿಗಟ್ಟಿದ್ದಾರೆ.
ಶಾರ್ದೂಲ್ ಠಾಕೂರ್ ಬ್ಯಾಟಿಂಗ್
ಶಾರ್ದೂಲ್ ಠಾಕೂರ್ ಬ್ಯಾಟಿಂಗ್

ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಚ್ರೇಲಿಯಾ ವಿರುದ್ಧ ಗಮನಾರ್ಹ ಪ್ರದರ್ಶನ ತೋರಿದ ಟೀಂ ಇಂಡಿಯಾದ ಶಾರ್ದೂಲ್ ಠಾಕೂರ್ ಬ್ರಾಡ್ಮನ್- ಬಾರ್ಡರ್‌ ದಾಖಲೆ ಸರಿಗಟ್ಟಿದ್ದಾರೆ.

ಹೌದು.. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ತಂಡ ಹಿಡಿತ ಸಾಧಿಸಿದೆ. ಇನ್ನೂ ಎರಡು ದಿನಗಳ ಆಟ ಬಾಕಿಯಿದ್ದು, ಪ್ಯಾಟ್ ಕಮಿನ್ಸ್ ಬಳಗವು 296 ರನ್ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡವು 296 ರನ್ ಗಳನ್ನು ಗಳಿಸಿತ್ತು. ಒಂದು ಹಂತದಲ್ಲಿ 152 ರನ್ ಗೆ ಆರು ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ನಂತರ ಅಜಿಂಕ್ಯ ರಹಾನೆ ಮತ್ತು ಶಾರ್ದೂಲ್ ಠಾಕೂರ್ ಶತಕದ ಜೊತೆಯಾಟವಾಡಿ ತಂಡಕ್ಕೆ ನೆರವಾದರು.

ಈ ಮೂಲಕ ಭಾರತ ಟೆಸ್ಟ್‌ ತಂಡದ ಆಲ್‌ರೌಂಡರ್‌ ಶಾರ್ದೂಲ್‌ ಠಾಕೂರ್‌ ವಿಶಿಷ್ಟ ಸಾಧನೆ ಮಾಡಿದ್ದಾರೆ. ಓವಲ್‌ ಕ್ರೀಡಾಂಗಣದಲ್ಲಿ ಸತತ ಮೂರು ಅರ್ಧಶತಕ ಬಾರಿಸುವ ಮೂಲಕ ಸರ್‌ ಬ್ರಾಡ್‌ಮನ್‌ ಮತ್ತು ಅಲನ್‌ ಬಾರ್ಡರ್‌ ಅವರ ದಾಖಲೆ ಸರಿಗಟ್ಟಿದ್ದಾರೆ. ಠಾಕೂರ್‌ ಅವರು 57(36), 60(72) ಮತ್ತು 51(109) ರನ್‌ ಬಾರಿಸಿ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಅಗ್ರ ಬ್ಯಾಟ್ಸ್‌ಮನ್‌ಗಳ ಎಲೈಟ್‌ ಕ್ಲಬ್‌ ಗೆ ಸೇರಿದ್ದಾರೆ.

ಶುಕ್ರವಾರ ಫೈನಲ್ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ 109 ಎಸೆತಗಳಲ್ಲಿ 51 ರನ್ ಗಳಿಸಿದ್ದರು. ಇದರಲ್ಲಿ ಆರು ಬೌಂಡರಿ ಒಳಗೊಂಡಿತ್ತು. ಅಲ್ಲದೆ ರಹಾನೆ ಜೊತೆ ಸೇರಿ ಏಳನೇ ವಿಕೆಟ್ ಗೆ 109 ರನ್ ಜೊತೆಯಾಟವಾಡಿದರು.

ಸಂಕ್ಷಿಪ್ತ ಅಂಕಗಳು: ಆಸ್ಟ್ರೇಲಿಯಾ:  ಮೊದಲ ಇನ್ನಿಂಗ್ಸ್ 469, ಎರಡನೇ ಇನ್ನಿಂಗ್ಸ್ : 123/4

ಭಾರತ ಮೊದಲ ಇನಿಂಗ್ಸ್: 69.4 ಓವರ್‌ಗಳಲ್ಲಿ 296 (ಅಜಿಂಕ್ಯ ರಹಾನೆ 89, ಶಾರ್ದೂಲ್ ಠಾಕೂರ್ 51, ರವೀಂದ್ರ ಜಡೇಜಾ 48; ಪ್ಯಾಟ್ ಕಮಿನ್ಸ್ 3/83).

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com